ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಂಗ್ಲರ ನಾಡಲ್ಲಿ ಭಾರತಕ್ಕೆ ಟಿ20 ಅಗ್ನಿಪರೀಕ್ಷೆ; ನಾಳೆ ಮೊದಲ ಪಂದ್ಯ

ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಅತ್ಯಂತ ಅನುಭವಿ ಆಟಗಾರರ ತಂಡವಾಗಿದೆ. ಫಿಲ್‌ ಸಾಲ್ಟ್‌, ಜಾಸ್‌ ಬಟ್ಲರ್‌, ನಾಯಕ ಹ್ಯಾರಿ ಬ್ರೂಕ್‌, ಜೋಫ್ರಾ ಆರ್ಚರ್‌, ಆದೀಲ್‌ ರಶೀದ್‌ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಭಾರತ ಎಷ್ಟು ಬಲಿಷ್ಠ ಎನ್ನುವುದು ಐರ್ಲೆಂಡ್‌ ಸರಣಿಯ ಫಲಿತಾಂಶವೇ ಉತ್ತಮ ನಿದರ್ಶನ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸುಧಾರಿಸದೇ ಇದ್ದರೆ ಮತ್ತೊಂದು ಸರಣಿ ಸೋಲು ಖಚಿತ.

Vaibhav Sooryavanshi

ಲಂಡನ್‌, ಜೂ.30: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಸರಣಿಯ(ENG vs IND 1st T20) ಮೊದಲ ಪಂದ್ಯ ಬುಧವಾರ ನಡೆಯಲಿದೆ. ಐರ್ಲೆಂಡ್‌ ಸರಣಿ ಸೋಲನ್ನು ಮರೆತು ಶ್ರೇಯಸ್‌ ಅಯ್ಯರ್‌ ಪಡೆ ಪೂರ್ಣ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಬೇಕಿದೆ. ಇತ್ತಂಡಗಳ ಈ ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿದೆ.

ಈ ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡವು ಆರಂಭಿಕ ಹಂತದಲ್ಲಿ ವೈಫಲ್ಯ ಕಂಡರೂ ಆ ಬಳಿಕ ಫಾರ್ಮ್‌ ಕಂಡುಕೊಂಡು ಸೆಮಿಫೈನಲ್‌ ತಲುಪಿತ್ತು. ಸೆಮಿಯಲ್ಲಿ ಭಾರತ ವಿರುದ್ಧವೇ ಸೋಲು ಕಂಡಿತ್ತು. ಇದೀಗ ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಂಡಿತೇ ಎಂದು ಕಾದು ನೋಡಬೇಕಿದೆ.

ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಅತ್ಯಂತ ಅನುಭವಿ ಆಟಗಾರರ ತಂಡವಾಗಿದೆ. ಫಿಲ್‌ ಸಾಲ್ಟ್‌, ಜಾಸ್‌ ಬಟ್ಲರ್‌, ನಾಯಕ ಹ್ಯಾರಿ ಬ್ರೂಕ್‌, ಜೋಫ್ರಾ ಆರ್ಚರ್‌, ಆದೀಲ್‌ ರಶೀದ್‌ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಭಾರತ ಎಷ್ಟು ಬಲಿಷ್ಠ ಎನ್ನುವುದು ಐರ್ಲೆಂಡ್‌ ಸರಣಿಯ ಫಲಿತಾಂಶವೇ ಉತ್ತಮ ನಿದರ್ಶನ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸುಧಾರಿಸದೇ ಇದ್ದರೆ ಮತ್ತೊಂದು ಸರಣಿ ಸೋಲು ಖಚಿತ.

ಪಿಚ್ ರಿಪೋರ್ಟ್‌

ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದ ಮೇಲ್ಮೈಯಿಂದ ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಪವರ್ ಪ್ಲೇ ಒಳಗೆ ಹೊಸ ಚೆಂಡು ಸೀಮ್ ಆಗುತ್ತದೆ ಮತ್ತು ಸ್ವಿಂಗ್ ಆಗುತ್ತದೆ. ಹೀಗಾಗಿ ಎರಡೂ ತಂಡಗಳ ಆರಂಭಿಕ ಬ್ಯಾಟರ್‌ಗಳು ಜಾಗರೂಕರಾಗಿರಬೇಕು. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಿಕೊಳ್ಳುವ ಸಾಧ್ಯತೆ ಅಧಿಕ. ಏಕೆಂದರೆ ಮೇಲ್ಮೈಯಲ್ಲಿ ತೇವಾಂಶವಿದ್ದರೆ ಅದರ ಲಾಭ ಪಡೆಯಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಸಂಪೂರ್ಣವಾಗಿ ಪಂದ್ಯ ವೀಕ್ಷಿಸಬಹುದು.



ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಈವರೆಗೆ ಟಿ20 ಕ್ರಿಕೆಟ್‌ನಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 18 ಪಂದ್ಯ ಗೆದ್ದರೆ, ಇಂಗ್ಲೆಂಡ್‌ 12 ಪಂದ್ಯ ಜಯಿಸಿದೆ.

ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.

ಆರಂಭ: ರಾತ್ರಿ 10 ಗಂಟೆ.

ಸಂಭಾವ್ಯ ಆಡುವ ಬಳಗ

ಭಾರತ: ಅಭಿಷೇಕ್ ಶರ್ಮಾ, ವೈಭವ್‌ ಸೂರ್ಯವಂಶಿ, ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.

ಇಂಗ್ಲೆಂಡ್‌: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿ.ಕೀ.), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ವಿಲ್ ಜ್ಯಾಕ್ಸ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್/ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೋಶ್ ಟಂಗ್.