ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆ್ಯಶಸ್‌ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮಾರ್ಕ್‌ ವುಡ್‌

ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಕೆ ಕಂಡ ವುಡ್, ಇಂಗ್ಲೆಂಡ್‌ನ ಬೇಸಿಗೆ ಟೆಸ್ಟ್‌ಗಳನ್ನು ತಪ್ಪಿಸಿಕೊಂಡಿದ್ದರೂ ಸಹ ಅವರನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಯಶಸ್ವಿಯಾಗಿ ಮರಳಿದ ಆರ್ಚರ್ ಕೂಡ ತಂಡದಲ್ಲಿದ್ದಾರೆ. ಭಾರತ ಸರಣಿಯ ಸಮಯದಲ್ಲಿ ಬೆರಳಿಗೆ ಗಾಯವಾಗಿದ್ದ ಶೋಯೆಬ್ ಬಶೀರ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಆ್ಯಶಸ್‌ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ; ಬ್ರೂಕ್‌ಗೆ ಉಪನಾಯಕನ ಪಟ್ಟ

-

Abhilash BC Abhilash BC Sep 23, 2025 10:06 PM

ಲಂಡನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿಗೆ ಇಂಗ್ಲೆಂಡ್‌ 16 ಸದಸ್ಯರ ತಂಡ(England Ashes squad) ಪ್ರಕಟಗೊಂಡಿದೆ. ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹ್ಯಾರಿ ಬ್ರೂಕ್ ಉಪನಾಯಕನಾಗಿದ್ದಾರೆ. ಮ್ಯಾಥ್ಯೂ ಪಾಟ್ಸ್ ಮತ್ತು ವಿಲ್ ಜ್ಯಾಕ್ಸ್ ಮತ್ತು ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ. ಭಾರತ ವಿರುದ್ಧದ ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವ ವೇಗಿ ಕ್ರಿಸ್ ವೋಕ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಭುಜದ ಗಾಯದಿಂದಾಗಿ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಬೆನ್‌ ಸ್ಟೋಕ್ಸ್, ನವೆಂಬರ್ 21ರಿಂದ ಪರ್ತ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್‌ಗೆ ಲಭ್ಯರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಕೆ ಕಂಡ ವುಡ್, ಇಂಗ್ಲೆಂಡ್‌ನ ಬೇಸಿಗೆ ಟೆಸ್ಟ್‌ಗಳನ್ನು ತಪ್ಪಿಸಿಕೊಂಡಿದ್ದರೂ ಸಹ ಅವರನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಯಶಸ್ವಿಯಾಗಿ ಮರಳಿದ ಆರ್ಚರ್ ಕೂಡ ತಂಡದಲ್ಲಿದ್ದಾರೆ. ಭಾರತ ಸರಣಿಯ ಸಮಯದಲ್ಲಿ ಬೆರಳಿಗೆ ಗಾಯವಾಗಿದ್ದ ಶೋಯೆಬ್ ಬಶೀರ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ವೇಗಿ ಪಾಟ್ಸ್ ಕೊನೆಯ ಬಾರಿಗೆ ಡಿಸೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಆದರೆ ಪ್ರಸ್ತುತ ಈ ಋತುವಿನಲ್ಲಿ 10 ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಕಿತ್ತಿದ್ದರು.

ಇದನ್ನೂ ಓದಿ IND vs BAN: ಉತ್ಸಾಹಿ ಬಾಂಗ್ಲಾದೇಶ ವಿರುದ್ಧ ಭಾರತವೇ ಫೇವರಿಟ್; ನಾಳೆ ಸೂಪರ್‌-4 ಕಾದಾಟ

ಇಂಗ್ಲೆಂಡ್‌ ತಂಡ

ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಜ್ಯಾಕ್ ಕ್ರಾಲೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.

ವೇಳಾಪಟ್ಟಿ

ಮೊದಲ ಟೆಸ್ಟ್‌; ನವೆಂಬರ್ 21 ರಿಂದ 25 (ಪರ್ತ್‌)

ಎರಡನೇ ಟೆಸ್ಟ್‌; ಡಿಸೆಂಬರ್ 4 ರಿಂದ 8(ಬ್ರಿಸ್ಬೇನ್‌)

ಮೂರನೇ ಟೆಸ್ಟ್‌; ಡಿಸೆಂಬರ್ 17 ರಿಂದ 21(ಅಡಿಲೇಡ್‌)

ನಾಲ್ಕನೇ ಟೆಸ್ಟ್‌; ಡಿಸೆಂಬರ್ 25 ರಿಂದ 29(ಮೆಲ್ಬೋರ್ನ್‌)

ಐದನೇ ಟೆಸ್ಟ್‌; ಜನವರಿ 3 ರಿಂದ 7 (ಸಿಡ್ನಿ)