ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Azam Khan: 23 ತಿಂಗಳ ಜೈಲುವಾಸದ ನಂತರ ಎಸ್‌ಪಿ ನಾಯಕ ಅಜಂ ಖಾನ್ ಬಿಡುಗಡೆ; ನ್ಯಾಯ ಸಿಕ್ಕಿದೆ ಎಂದ ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ ಸೇರಿದಂತೆ ಅವರ ಪತ್ನಿ ತಂಝೀಮ್ ಫಾತಿಮಾ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ದೋಷಿ ಎಂದು ಉತ್ತರ ಪ್ರದೇಶದ ರಾಮ್‌ಪುರದ ನ್ಯಾಯಾಲಯವು ಇತ್ತೀಚೆಗೆ ಘೋಷಿಸಿತ್ತು. ಇದೀಗ ಅವರಿಗೆ ಜಾಮೀನು ಮಂಜೂರು ಆಗಿದ್ದು, 23 ತಿಂಗಳ ಬಳಿಕ ಸೆರೆಮನೆಯಿಂದ ಹೊರ ಬಂದಿದ್ದಾರೆ.

ಕೊನೆಗೂ ಅಜಂ ಖಾನ್ ಜೈಲಿನಿಂದ ಬಿಡುಗಡೆ

ಅಜಂ ಖಾನ್ -

Profile Sushmitha Jain Sep 23, 2025 10:00 PM

ಲಖನೌ: ಸಮಾಜವಾದಿ ಪಕ್ಷದ (Samajwadi Party) ಹಿರಿಯ ನಾಯಕ ಅಜಂ ಖಾನ್ (Azam Khan) 23 ತಿಂಗಳ ಜೈಲುವಾಸದ ನಂತರ ಸೀತಾಪುರ ಜೈಲಿನಿಂದ (Sitapur Jail) ಮಂಗಳವಾರ ಬಿಡುಗಡೆಯಾದರು. ಬೆಳಗ್ಗೆ ಬಿಡುಗಡೆಯಾಗಬೇಕಿತ್ತು, ಆದರೆ ನ್ಯಾಯಾಲಯ ಕಲಾಪದ ಕಾರಣದಿಂದ ತಡವಾಯಿತು. ಜೈಲಿನ ಹೊರಗೆ ನೂರಾರು ಅಭಿಮಾನಿಗಳು ಸ್ವಾಗತಕ್ಕಾಗಿ ಜಮಾಯಿಸಿದ್ದರು. ಆದರೆ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.

17 ವರ್ಷ ಹಳೆಯ ಕೇಸ್‌ನಲ್ಲಿ ಖಾನ್‌ ಖುಲಾಸೆ

ಕಳೆದ ವಾರ ವಿಶೇಷ ಎಂಪಿ-ಎಂಎಲ್‌ಎ ಕೋರ್ಟ್ 2008ರ ಕೇಸ್‌ನಲ್ಲಿ ಅಜಂ ಖಾನ್‌ ಅವರನ್ನು ನಿರ್ದೋಷಿಯೆಂದು ಘೋಷಿಸಿತು. ಈ ಕೇಸ್ ರಾಂಪುರದ ಚಜ್ಲೆಟ್ ಪೊಲೀಸ್ ಠಾಣೆಯ ಬಳಿ ನಡೆದ ಘಟನೆಗೆ ಸಂಬಂಧಿಸಿದೆ. ಖಾನ್‌ ಅವರ ಕಾರಿನಿಂದ ಪೊಲೀಸರು ಹೂಟರ್ ತೆಗೆದಾಗ, ಅವರು ಮತ್ತು ಅವರ ಬೆಂಬಲಿಗರು ರಸ್ತೆ ತಡೆದು ಟ್ರಾಫಿಕ್ ಜಾಮ್ ಉಂಟುಮಾಡಿದ್ದರು. ಈ ಪ್ರತಿಭಟನೆಯಲ್ಲಿ ಕೆಲ ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಈ ಕಾರಣದಿಂದ ಅಜಂ ಖಾನ್ ವಿರುದ್ಧ ಕೇಸ್ ದಾಖಲಾಗಿತ್ತು. ಸಾಕ್ಷ್ಯಗಳ ಕೊರತೆಯಿಂದ ಕೋರ್ಟ್ ಅವರನ್ನು ಬಿಡುಗಡೆಗೊಳಿಸಿತು.

ಈ ಸುದ್ದಿಯನ್ನು ಓದಿ: Ragging Case: ಮಧುರೈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ, ಖಾಸಗಿ ಅಂಗಗಳಿಗೆ ಹಲ್ಲೆ; ಆಘಾತಕಾರಿ ರ‍್ಯಾಗಿಂಗ್ ಪ್ರಕರಣ ಬಯಲಿಗೆ

ಯೋಗಿ ಸರ್ಕಾರದ ವಿರುದ್ಧ ಟೀಕೆ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಅಜಮ್ ಖಾನ್‌ ಅವರ ಬಿಡುಗಡೆಯನ್ನು ಸಂತೋಷದಿಂದ ಸ್ವಾಗತಿಸಿದರು. “ಅಜಂ ಖಾನ್ ಪಕ್ಷದ ಸ್ಥಾಪಕ ಸದಸ್ಯ ಮಾತ್ರವಲ್ಲ, ಸಾಮಾಜಿಕ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂದು ನ್ಯಾಯ ಸಿಕ್ಕಿದೆ” ಎಂದು ಲಖನೌನಲ್ಲಿ ಹೇಳಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಖಾನ್ ವಿರುದ್ಧದ ಎಲ್ಲ ನಕಲಿ ಕೇಸ್‌ಗಳನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಎಸ್‌ಪಿ ಶಾಸಕ ಶಿವಪಾಲ್ ಸಿಂಗ್ ಯಾದವ್ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿ, “ಅಜಂ ಖಾನ್‌ ಅವರನ್ನು ರಾಜಕೀಯವಾಗಿ ಸಿಲುಕಿಲು ನಕಲಿ ಕೇಸ್‌ಗಳನ್ನು ಹಾಕಲಾಗಿತ್ತು” ಎಂದು ಆರೋಪಿಸಿದರು.

ರಾಜಕೀಯದಲ್ಲಿ ಅಜಂ ಖಾನ್‌ ಪ್ರಭಾವ

ಅಜಂ ಖಾನ್ ರಾಂಪುರದಿಂದ ಐದು ಬಾರಿ ಸಂಸದರಾಗಿದ್ದ ಹಿರಿಯ ನಾಯಕ. 2019ರಲ್ಲಿ ಭೂ ಒತ್ತುವರಿ ಕೇಸ್‌ನಲ್ಲಿ ಬಂಧನಕದಕೊಳಗಾಗಿದ್ದರು. ಅವರ ಬಿಡುಗಡೆ ಸಮಾಜವಾದಿ ಪಕ್ಷದ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಅಜಂ ಖಾನ್‌ ಅವರ ಮಕ್ಕಳು ಮತ್ತು ಬೆಂಬಲಿಗರು ಜೈಲಿನ ಬಳಿ ಸ್ವಾಗತಕ್ಕಾಗಿ ಜಮಾಯಿಸಿದ್ದರು. ಈ ಘಟನೆ ಉತ್ತರ ಪ್ರದೇಶದ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.