Virat Kohli-Anushka Sharma: ಪುತ್ರ ಅಕಾಯ್ ಜತೆ ಜಾಲಿ ಟ್ರಿಪ್ ಕೈಗೊಂಡ ವಿರಾಟ್-ಅನುಷ್ಕಾ
Virat Kohli And Anushka Sharma: ತನ್ನ ಕುಟುಂಬಕ್ಕೂ ಹೆಚ್ಚು ಆಧ್ಯತೆ ನೀಡುವ ವಿರಾಟ್, ಅನುಷ್ಕಾ ಹಾಗೂ ಮಕ್ಕಳ ಜೊತೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಸದ್ಯ ಲಂಡನ್ ಗೆ ತೆರಳಿರುವ ಫೋಟೋ ವೈರಲ್ ಆಗಿದ್ದು ಅನುಷ್ಕಾ ಶರ್ಮಾ ಅವರು ಮಗ ಅಕಾಯ್ ಇರುವ ಸ್ಟ್ರಾಲರ್ ತಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.

Anushka Sharma And Virat Kohli -

ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಕ್ಯೂಟ್ ಜೋಡಿ ಎನಿಸಿಕೊಂಡಿದ್ದಾರೆ. ವಿರಾಟ್ ಹಾಗೂ ಅನುಷ್ಕಾ ಬಾಂಡಿಂಗ್ ಹೇಗಿದೆ ಅನ್ನುವುದಕ್ಕೆ ಸಾಕ್ಷಿಯಾಗಿ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಸದ್ಯ ದಂಪತಿ ವೆಕೇಷನ್ ಮೂಡ್‌ನಲ್ಲಿದ್ದು ತಮ್ಮ ಮಗನ ಜತೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಅವರಿಬ್ಬರು ತಮ್ಮ ಮಗ ಅಕಾಯ್ ಜತೆ ಲಂಡನ್‌ನಲ್ಲಿ ವಾಯುವಿಹಾರ ಮಾಡುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿರಾಟ್, ಅನುಷ್ಕಾ ಫ್ಯಾನ್ಸ್ ಈ ಫೋಟೊ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ತನ್ನ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುವ ವಿರಾಟ್ ಮತ್ತು ಅನುಷ್ಕಾ ಮಕ್ಕಳ ಜತೆ ಆಗಾಗ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಸದ್ಯ ಲಂಡನ್‌ಗೆ ತೆರಳಿರುವ ಫೋಟೊ ವೈರಲ್ ಆಗಿದ್ದು, ಅನುಷ್ಕಾ ಶರ್ಮಾ ಮಗ ಅಕಾಯ್ ಇರುವ ಸ್ಟ್ರಾಲರ್ ಅನ್ನು ತಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ವಿರಾಟ್ ಕೊಹ್ಲಿ ಅವರ ಪಕ್ಕದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅನುಷ್ಕಾ ರೆಡ್ ಕಲರ್ ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಸಿಂಪಲ್ ಆಗಿ ಕಂಡಿದ್ದಾರೆ. ಇನ್ನು ವಿರಾಟ್ ಬ್ರೌನ್ ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Virat Kohli & Anushka Sharma were spotted in London, a few days back. pic.twitter.com/7Db7G4NCN1
— Virat Kohli Fan Club (@Trend_VKohli) September 23, 2025
ಈ ಕುಟುಂಬದ ಅದ್ಭುತ ಕ್ಷಣಗಳು ಅಭಿಮಾನಿಗಳ ಹೃದಯ ಗೆದ್ದಿದ್ದು, ಅನೇಕರು ದಂಪತಿಯ ಈ ಸರಳ ಜೀವನ ಶೈಲಿಯನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್ ಸ್ಟಾರ್ ಆದರೂ ಸಾಮಾನ್ಯ ಜನರಂತೆ ಬದುಕುವ ಕೊಹ್ಲಿ ಅವರ ಸಿಂಪ್ಲಿಸಿಟಿ ಸೂಪರ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಸರಳತೆಯನ್ನು ನೋಡಿದರೆ ಇವರು ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ತಾರೆ ಎಂದು ಯಾರು ಹೇಳುತ್ತಾರೆ? ಎಂದು ಬರೆದುಕೊಂಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 2017ರಲ್ಲಿ ವಿವಾಹವಾದರು. 2021ರ ಜನವರಿ 11ರಂದು ಅವರ ಮೊದಲ ಮಗಳು ವಾಮಿಕಾ ಜನಿಸಿದ್ದು ನಂತರ, 2024ರ ಫೆಬ್ರವರಿ 15ರಂದು ಅನುಷ್ಕಾ ಎರಡನೇ ಮಗು ಅಕಾಯ್‌ಗೆ ಜನ್ಮ ನೀಡಿದರು.
ಅನುಷ್ಕಾ ಶರ್ಮಾ 2018ರ 'ಜೀರೋ' ಚಿತ್ರದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್ ಫೈನಲ್ ನಂತರ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಕೂಡ ಘೋಷಿಸಿದ್ದಾರೆ.