ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಧ್ರುವ್‌ ಜುರೆಲ್‌ ಬಳಿಕ ಆಸ್ಟ್ರೇಲಿಯಾ ಎ ವಿರುದ್ಧ ಭರ್ಜರಿ ಶತಕ ಬಾರಿಸಿದ ಕನ್ನಡಿಗ ದೇವದತ್‌ ಪಡಿಕ್ಕಲ್‌!

ಆಸ್ಟ್ರೇಲಿಯಾ ಎ ವಿರುದ್ದದ ಅನಧೀಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ಎ ತಂಡದ ದೇವದತ್‌ ಪಡಿಕ್ಕಲ್‌ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಅವರು ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದು ಇವರ ಏಳನೇ ಪ್ರಥಮ ದರ್ಜೆ ಕ್ರಿಕೆಟ್‌ನ ಶತಕವಾಗಿದೆ.

ಆಸ್ಟ್ರೇಲಿಯಾ ಎ ವಿರುದ್ಧ ಶತಕ ಬಾರಿಸಿದ ದೇವದತ್‌ ಪಡಿಕ್ಕಲ್‌!

ಆಸ್ಟ್ರೇಲಿಯಾ ಎ ವಿರುದ್ದ ಭರ್ಜರಿ ಶತಕ ಬಾರಿಸಿದ ದೇವದತ್‌ ಪಡಿಕ್ಕಲ್‌. -

Profile Ramesh Kote Sep 19, 2025 4:40 PM

ನವದೆಹಲಿ: ಕರ್ನಾಟಕದ ಸ್ಟಾರ್‌ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ (Devdutt Padikkal) ಅವರು ಆಸ್ಟ್ರೇಲಿಯಾ ಎ (Australia A) ವಿರುದ್ದದ ಪಂದ್ಯದಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಲಖನೌದಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಭಾರತ ಎ (India A) ತಂಡದ ಪಡಿಕ್ಕಲ್‌, ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಿದ್ದಾರೆ. ಅವರು ಶತಕವನ್ನು ಪೂರ್ಣಗೊಳಿಸಲು 198 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಕೋರಿ ರೋಚಿಸಿಯೋಲಿ ಅವರ ಎಸೆತದಲ್ಲಿ ಒಂದು ರನ್‌ ಪಡೆಯುವ ಮೂಲಕ ಕನ್ನಡಿಗ ಶತಕ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದರು.

ಭಾರತ ಎ ತಂಡ 222 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜೊತೆಯಾಗಿ ಧ್ರುವ್‌ ಜುರೆಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಅದ್ಭುತ ಜೊತೆಯಾಟವನ್ನು ಆಡಿದರು. ಒಂದು ತುದಿಯಲ್ಲಿ ಜುರೆಲ್‌ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಪಡಿಕ್ಕಲ್‌ ಜವಾಬ್ದಾರಿಯುತವಾಗಿ ಆಡಿದರು. ಈ ಇಬ್ಬರೂ ಮುರಿಯದ ಐದನೇ ವಿಕೆಟ್‌ಗೆ 200 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ಎ ತಂಡ 6 ವಿಕೆಟ್‌ ನಷ್ಟಕ್ಕೆ 532 ರನ್‌ಗಳನ್ನು ಗಳಿಸಿ ಡಿಕ್ಲೆರ್‌ ಮಾಡಿಕೊಂಡಿತು.

Asia Cup Super 4s Schedule: ಸೂಪರ್‌-4 ಪಂದ್ಯಗಳ ವೇಳಾಪಟ್ಟಿ ಪ್ರಕಟ

ದೇವದತ್‌ ಪಡಿಕ್ಕಲ್‌ ಅವರು ತಮ್ಮ ಶತಕದಲ್ಲಿ ಗಳಿಸಿದ್ದು ಕೇವಲ 9 ಬೌಂಡರಿಗಳು ಮಾತ್ರ ಹಾಗೂ ಅವರು ವೇಗವಾಗಿ ಆಡುವ ಬದಲು ತಾಳ್ಮೆಯುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ನಾಲ್ಕು ವಿಕೆಟ್‌ ಅನ್ನು ಕಳೆದುಕೊಂಡಿದ್ದ ಭಾರತ ಎ ತಂಡಕ್ಕೆ ಪಡಿಕ್ಕಲ್‌ ಆಸರೆಯಾಗಿದ್ದರು. ಈ ಶತಕದ ಮೂಲಕ ಕನ್ನಡಿಗ ದೇವದತ್‌ ಪಡಿಕ್ಕಲ್‌ ರೆಡ್‌ ಬಾಲ್‌ ಕ್ರಿಕೆಟ್‌ಗೆ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಪಡಿಕ್ಕಲ್‌ ಕೊನೆಯ ಬಾರಿ ಅರ್ಧಶತಕವನ್ನು ಬಾರಿಸಿದ್ದರು. ಧರ್ಮಶಾಲಾದಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು 65 ರನ್‌ಗಳನ್ನು ಗಳಿಸಿದ್ದರು. ಹಾಗಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಪಡಿಕ್ಕಲ್‌ ಸ್ಥಾನ ಪಡೆಯುವ ಸಾಧ್ಯತೆ ಇದೆ.

Asia Cup 2025: ಪಾಕ್‌ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ

ಇಂಗ್ಲೆಂಡ್‌ ವಿರುದ್ಧ ಧರ್ಮಶಾಲಾ ಟೆಸ್ಟ್‌ ಪಂದ್ಯದಲ್ಲಿಅರ್ಧಶತಕ ಸಿಡಿಸಿದ ಬಳಿಕ ದೇವದತ್‌ ಪಡಿಕ್ಕಲ್‌ಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ಅವಕಾಶವನ್ನು ನೀಡಲಾಗಿತ್ತು. ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದರು. ಈ ಸರಣಿಯಲ್ಲಿ ಅವರಿಗೆ ನಿಗದಿತ ಅವಕಾಶಗಳನ್ನು ನೀಡಲಾಗಿತ್ತು. ಈ ತಿಂಗಳ ಆರಂಭದಲ್ಲಿ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಅರ್ಧಶತಕ ಹಾಗೂ 16 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರಿಗೆ ಭಾರತ ಎ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್‌ ಟ್ರಾಟ್!

ವೆಸ್ಟ್ ಇಂಡೀಸ್ ಸರಣಿಗೆ ಭಾರತ ಟೆಸ್ಟ್ ತಂಡವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿರುವುದರಿಂದ, ಪಡಿಕ್ಕಲ್ ಅವರ ಪ್ರದರ್ಶನವು ಆಯ್ಕೆದಾರರಿಗೆ ಬಲವಾದ ಸಂಕೇತವನ್ನು ರವಾನಿಸುತ್ತದೆ. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡುವ ಮೂಲಕ ಅವರು ರೆಡ್-ಬಾಲ್ ಕ್ರಿಕೆಟ್‌ಗೆ ಅಗತ್ಯವಾದ ಮನೋಧರ್ಮ ಮತ್ತು ತಂತ್ರವನ್ನು ಪ್ರದರ್ಶಿಸಿದ್ದಾರೆ. ಇದು ಭಾರತದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಗಮನ ಸೆಳೆಯಬಹುದು.