ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫಿಫಾ ರ‍್ಯಾಂಕಿಂಗ್‌: ಅರ್ಜೆಂಟೀನಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಶ್ವ ಚಾಂಪಿಯನ್‌ ಸ್ಪೇನ್

FIFA Rankings: ಬೆಲ್ಜಿಯಂ ತಂಡವು ಎಂಟನೇ ಸ್ಥಾನಕ್ಕೆ ಏರಿದರೆ, ನೆದರ್ಲೆಂಡ್ಸ್‌ ತಂಡವು ಒಂಬತ್ತನೇ ಸ್ಥಾನಕ್ಕೆ ಕುಸಿಯಿತು. ಮೆಕ್ಸಿಕೊ ನಾಲ್ಕು ಸ್ಥಾನಗಳ ಬಡ್ತಿಯೊಂದಿಗೆ ಅಗ್ರ 10 ರಲ್ಲಿ ಸ್ಥಾನ ಪಡೆಯಿತು. ನಾರ್ವೆ ತಂಡವು 12 ಸ್ಥಾನಗಳ ಜಿಗಿತದೊಂದಿಗೆ 19ನೇ ಸ್ಥಾನಕ್ಕೆ ತಲುಪಿದೆ.

FIFA Rankings

ಜ್ಯೂರಿಚ್‌ (ಎಪಿ/ಎಎಫ್‌ಪಿ), ಜು. 21: ನೂತನ ಫಿಫಾ ಪುರುಷರ ರ‍್ಯಾಂಕಿಂಗ್‌ನಲ್ಲಿ ವಿಶ್ವಕಪ್ ಚಾಂಪಿಯನ್‌ ಸ್ಪೇನ್ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದೆ. ಈ ಹಿಂದೆ ಅಗ್ರಸ್ಥಾನಿಯಾಗಿದ್ದ, ಸ್ಫೇನ್‌ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಎನಿಸಿದ ಅರ್ಜೆಂಟೀನಾ ಎರಡನೇ ಸ್ಥಾನಕ್ಕೆ ಕುಸಿಯಿತು. ಸ್ಪೇನ್‌ ತಂಡವು 2026ರ ಜನವರಿಯ ನಂತರ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಮರಳಿತು.

ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ್ದ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಬ್ರೆಜಿಲ್ ತಂಡವು ಐದನೇ ಸ್ಥಾನಕ್ಕೆ ಮತ್ತು ಮೊರಾಕ್ಕೊ ತಂಡ ಆರನೇ ಸ್ಥಾನಕ್ಕೆ ಏರಿವೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲೇ ಹೊರಬಿದ್ದ ಪೋರ್ಚುಗಲ್ ತಂಡವು ಎರಡು ಸ್ಥಾನ ಕುಸಿದು ಏಳನೇ ಸ್ಥಾನದಲ್ಲಿದೆ.

ಉಳಿದಂತೆ ಬೆಲ್ಜಿಯಂ ತಂಡವು ಎಂಟನೇ ಸ್ಥಾನಕ್ಕೆ ಏರಿದರೆ, ನೆದರ್ಲೆಂಡ್ಸ್‌ ತಂಡವು ಒಂಬತ್ತನೇ ಸ್ಥಾನಕ್ಕೆ ಕುಸಿಯಿತು. ಮೆಕ್ಸಿಕೊ ನಾಲ್ಕು ಸ್ಥಾನಗಳ ಬಡ್ತಿಯೊಂದಿಗೆ ಅಗ್ರ 10 ರಲ್ಲಿ ಸ್ಥಾನ ಪಡೆಯಿತು. ನಾರ್ವೆ ತಂಡವು 12 ಸ್ಥಾನಗಳ ಜಿಗಿತದೊಂದಿಗೆ 19ನೇ ಸ್ಥಾನಕ್ಕೆ ತಲುಪಿದೆ.

ಅಗ್ರ 10ರಿಂದ ಹೊರಬಿದ್ದ ಜರ್ಮನಿ

ಜರ್ಮನಿ ತಂಡವು ಅಗ್ರ 10ರಿಂದ ಹೊರಬಿದ್ದು, 12ನೇ ಸ್ಥಾನಕ್ಕೆ ಸರಿದಿದೆ. ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಇಟಲಿ ತಂಡವು15ನೇ ಸ್ಥಾನಕ್ಕೆ ಕುಸಿದಿದೆ. ಮಹಿಳೆಯರ ವಿಭಾಗದಲ್ಲಿ 2023ರ ವಿಶ್ವಕಪ್‌ ಚಾಂಪಿಯನ್‌ ಸ್ಪೇನ್‌ ತಂಡವು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅಮೆರಿಕ ಮತ್ತು ಜರ್ಮನಿ ತಂಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ನಾಲ್ಕನೇ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಸೋತು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಜೆಂಟೀನಾ!



ಭಾನುವಾರ ಮಧ್ಯರಾತ್ರಿ ನ್ಯೂಜೆರ್ಸಿಯಲ್ಲಿ ನಡೆದಿದ್ಧ ಫಿಫಾ ಫೈನಲ್‌ ಪಂದ್ಯದಲ್ಲಿ ಸ್ಪೇನ್ ಅದ್ಭುತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಅರ್ಜೆಂಟೀನಾ ತಂಡವು ಸ್ಪೇನ್‌ನ ದಾಳಿಯನ್ನು ತಡೆಯಲು ಹೆಚ್ಚಾಗಿ ಫೌಲ್‌ಗಳನ್ನೇ ಅವಲಂಬಿಸಿತ್ತು. 120 ನಿಮಿಷಗಳ ಆಟದಲ್ಲಿ ಅರ್ಜೆಂಟೀನಾ ಗೋಲ್‌ಪೋಸ್ಟ್‌ನತ್ತ ಒಂದೇ ಒಂದು ಶಾಟ್ ಹೊಡೆಯಲು ಆಗಲಿಲ್ಲ ಎನ್ನುವುದೇ ಅವರ ಕಳಪೆ ಆಟಕ್ಕೆ ಸಾಕ್ಷಿ. ಹೆಚ್ಚುವರಿ ಸಮಯದಲ್ಲಿ ಪೆಡ್ರೊ ಪೊರೊ ನೀಡಿದ ಕ್ರಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡ್ ಮಾಡಿ ಪಾಸ್ ನೀಡಿದರು. ಅದನ್ನು ಫೆರಾನ್ ಟೊರೆಸ್ ಅರ್ಜೆಂಟೀನಾ ಗೋಲ್‌ಬಲೆಗೆ ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.