ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಪಾನ್‌ಗೆ ಶಾಕ್‌ ನೀಡಿದ ಬ್ರೆಜಿಲ್‌; ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಪೆರುಗ್ವೆ

FIFA World Cup 2026: ಬೋಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ತೀವ್ರ ಪೈಪೋಟಿಗೆ ಸಾಕ್ಷಿಯಾದ ಮತ್ತೊಂದು ಪಂದ್ಯದಲ್ಲಿ ಪ್ರಬಲ ಜರ್ಮನಿ ಎದುರು ಪೆರುಗ್ವೆ ಜಯ ಸಾಧಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ 1–1 ಗೋಲು ಅಂತರದ ಸಮಬಲದ ಹೋರಾಟ ನಡೆಸಿದ್ದವು. ಜರ್ಮನಿ ಪರ ಕಾಯ್ ಹವೆರ್ಟ್ಜ್‌ (54ನೇ ನಿಮಿಷ), ಪೆರುಗ್ವೆ ಪರ ಜೂಲಿಯೊ ಎನ್ಸಿಸೊ (42ನೇ ನಿಮಿಷ) ಒಂದೊಂದು ಗೋಲು ಬಾರಿಸಿದರು.

Martinelli

ಲಾಸ್‌ಏಂಜಲೀಸ್‌, ಜೂ.30: ಹೆಚ್ಚುವರಿ ಸಮಯದ ಕೊನೆಯ ಕ್ಷಣದಲ್ಲಿ ಗೆಬ್ರಿಯಲ್ ಮಾರ್ಟಿನೆಲ್‌ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಬಲಿಷ್ಠ ಜಪಾನ್‌ ವಿರುದ್ಧ 2-1 ಗೋಲಿನ ಅಂತರದಿಂದ ಬ್ರೆಜಿಲ್‌ ತಂಡ ಗೆಲುವು ಸಾಧಿಸಿತು. ದಿನದ ಮತ್ತೊಂದು ರೋಚಕ ಪಂದ್ಯದಲ್ಲಿ ಜರ್ಮನಿ ಎದುರು ಪೆರುಗ್ವೆ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 4–3ರಿಂದ ಗೆದ್ದು ಬೀಗಿತು. ಜಯ ಸಾಧಿಸಿರುವ ಬ್ರೆಜಿಲ್‌ ಹಾಗೂ ಪೆರುಗ್ವೆ, ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.

ಹ್ಯೂಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಪಾನ್‌ 29ನೇ ನಿಮಿಷದಲ್ಲೇ ಗೋಲು ಬಾರಿಸಿತು. ಕೈಶು ಸಾನೊ ಈ ಗೋಲು ಬಾರಿಸಿ ಜಪಾನ್‌ ಪಡೆಗೆ ಮುನ್ನಡೆ ತಂದುಕೊಟ್ಟರು. 54ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದ ಕ್ಯಾಸೆಮಿರೊ ಬ್ರೆಜಿಲ್‌ಗೆ ನೆರವಾದರು. ಆ ಬಳಿಕ ಪಂದ್ಯದ ನಿಗದಿತ ಸಮಯದವರೆಗೂ ಉಭಯ ತಂಡಗಳು ಗೋಲು ಬಾರಿಸಲು ಸಾಧ್ಯವಾಗಿಲ್ಲ.

ಇನ್ನೇನು ಶೂಟೌಟ್‌ಗೆ ಪಂದ್ಯ ಸಾಗಲಿದೆ ಎನ್ನುವಾಗ ಪಂದ್ಯದ ದ್ವಿತೀಯಾರ್ಧದ ವೇಳೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಗೆಬ್ರಿಯಲ್ ಮಾರ್ಟಿನೆಲ್‌ ಹೆಚ್ಚುವರಿ ಅವಧಿಯಲ್ಲಿ ಗೋಲು ದಾಖಲಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.



ಶೂಟೌಟ್‌ನಲ್ಲಿ ಗೆದ್ದ ಪೆರುಗ್ವೆ

ಬೋಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ತೀವ್ರ ಪೈಪೋಟಿಗೆ ಸಾಕ್ಷಿಯಾದ ಮತ್ತೊಂದು ಪಂದ್ಯದಲ್ಲಿ ಪ್ರಬಲ ಜರ್ಮನಿ ಎದುರು ಪೆರುಗ್ವೆ ಜಯ ಸಾಧಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ 1–1 ಗೋಲು ಅಂತರದ ಸಮಬಲದ ಹೋರಾಟ ನಡೆಸಿದ್ದವು. ಜರ್ಮನಿ ಪರ ಕಾಯ್ ಹವೆರ್ಟ್ಜ್‌ (54ನೇ ನಿಮಿಷ), ಪೆರುಗ್ವೆ ಪರ ಜೂಲಿಯೊ ಎನ್ಸಿಸೊ (42ನೇ ನಿಮಿಷ) ಒಂದೊಂದು ಗೋಲು ಬಾರಿಸಿದರು.

ಫಿಫಾ ನಾಕೌಟ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿಕ್ಕ ದೇಶ ಕೇಪ್‌ ವರ್ಡೆ

ಪಂದ್ಯ ಸಮಬಲಗೊಂಡ ಕಾರಣ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಇಲ್ಲಿ ಜರ್ಮನಿ ಮೂರು ಗೋಲು ಗಳಿಸಿದರೆ, ಪೆರುಗ್ವೆ ನಾಲ್ಕು ಗೋಲು ದಾಖಲಿಸಿ ಗೆದ್ದು ಬೀಗಿತು.