ನ್ಯೂಯಾರ್ಕ್, ಜು.24: ಇತ್ತೀಚೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ನಡೆದ 2026 ರ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ಸ್ಪೇನ್ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು. ಇದೀಗ ಫಿಫಾ ತನ್ನ ಟೂರ್ನಮೆಂಟ್‌ನ ತಂಡವನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ ಈ ತಂಡದಲ್ಲಿ ವಿಶ್ವ ಚಾಂಪಿಯನ್ ಸ್ಪೇನ್ ತಂಡದ ಲ್ಯಾಮಿನ್ ಯಮಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಮೊದಲ ಬಾರಿ ಫಿಫಾ ವಿಶ್ವಕಪ್ ಆಡಿದ ಕೇಪ್ ವರ್ಡೆಯ ತಡೆಗೋಡೆ ಎನಿಸಿಕೊಂಡಿದ್ದ ಗೋಲು ಕೀಪರ್ ವೊಜಿನ್ಹಾ ಹಾಗೂ ನಾರ್ವೆ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ‘ಡ್ರೀಮ್ ಟೀಮ್’ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 40 ವರ್ಷದ ವೊಜಿನ್ಹಾ ಗೋಲು ಕೀಪರ್ ಆಗಿ ಅತಿ ಹೆಚ್ಚು ಮತ ಪಡೆದಿದ್ದಾರೆ. ಪದಾರ್ಪಣೆಯ ವಿಶ್ವಕಪ್ ಪಂದ್ಯದಲ್ಲಿ ಸ್ಪೇನ್ ಎದುರು 7 ಗೋಲು ಸೇವ್ ಮಾಡಿದ್ದ ವೊಜಿನ್ಹಾ ಶೇ 39.6 ವೋಟ್ ಪಡೆದಿದ್ದಾರೆ.
ಭಾರತದಲ್ಲಿ ಪ್ರತಿಷ್ಠಿತ ಆ್ಯಶಸ್ ಸರಣಿ ಆಯೋಜನೆ ಸಾಧ್ಯತೆ!
ಟೂರ್ನಮೆಂಟ್‌ನ ಇಬ್ಬರು ದೊಡ್ಡ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂಬಪ್ಪೆ 10 ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಗೋಲ್ಡನ್ ಬೂಟ್ ಅನ್ನು ಪಡೆದರು, ಮೆಸ್ಸಿ ಬಹುತೇಕ ಏಕಾಂಗಿಯಾಗಿ ಎಂಟು ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಅರ್ಜೆಂಟೀನಾವನ್ನು ಸತತ ಎರಡನೇ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದರು.
ನಾರ್ವೆ ತಂಡದ ಹಾಲೆಂಡ್ ಶೇ 27.7 ಮತ ಪಡೆದಿದ್ದು, 5 ಪಂದ್ಯಗಳಲ್ಲಿ 7 ಗೋಲು ಗಳಿಸಿದ್ದರು. 26 ವರ್ಷದ ಹಾಲೆಂಡ್ ಜತೆಗೆ ಅಟ್ಯಾಕಿಂಗ್ ಆಟಗಾರರಾಗಿ ಲಿಯೋನೆಲ್ ಮೆಸ್ಸಿ, ಕೈಲಿಯಾನ್ ಎಂಬಾಪೆ ಇದ್ದಾರೆ.
ಡಿಫೆಂಡರ್‌ಗಳಾಗಿ ಪೆಡ್ರೊ ಪೊರೊ (ಸ್ಪೇನ್), ಲಿಸಾಂಡ್ರೊ ಮಾರ್ಟಿನೆಜ್ (ಅರ್ಜೆಂಟೀನಾ), ದಯೋತ್ ಯಪಮೆಕಾನೊ (ಫ್ರಾನ್ಸ್), ಮಾರ್ಕ್ ಕುಕುರೆಲ್ಲ (ಸ್ಪೇನ್); ಮಿಡ್‌ಫೀಲ್ಡರ್ಸ್‌ಗಳಾಗಿ ರೋಡ್ರಿ (ಸ್ಪೇನ್), ಮೈಕೆಲ್ ಒಲಿಸ್ (ಫ್ರಾನ್ಸ್), ಜೂಡ್ ಬೆಲ್ಲಿಂಗ್‌ಹ್ಯಾಂ (ಇಂಗ್ಲೆಂಡ್) ತಂಡದಲ್ಲಿದ್ದಾರೆ.