ಕೋಲ್ಕತಾ, ಅ. 2: ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ ಬಿಗಿ ಭದ್ರತೆಯ ನಡುವೆ ಕೋಲ್ಕತ್ತಾಗೆ ಆಗಮಿಸಿತು. ತಂಡವು ತಂಗಿದ್ದ ಹೋಟೆಲ್‌ನ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈ ತಂಡವು ಶನಿವಾರ ಇಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.
ತಂಡದ ಸ್ಟಾರ್ ಆಟಗಾರ ವಿನಿಸಿಯಸ್ ಜೂನಿಯರ್ ಅವರು ಹಳದಿ ಟೋಪಿ ಧರಿಸಿ ಬರುತ್ತಿದ್ದಂತೆ ಲಾಬಿಯಲ್ಲಿ ‘ವಿನಿ, ವಿನಿ’ ಎಂಬ ಜಯಘೋಷಗಳು ಮೊಳಗಿದವು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬಲ ತೊಡೆಗೆ ಗಾಯಗೊಂಡಿದ್ದ ರಫೆಲ್ ಡಯಾಸ್ ಚಿಕಿತ್ಸೆಗಾಗಿ ಸ್ಪೇನ್‌ಗೆ ತೆರಳಿದ್ದಾರೆ. ಹೀಗಾಗಿ ಅವರು ಭಾರತಕ್ಕೆ ಆಗಮಿಸಿಲ್ಲ.
ಕಳೆದ ವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫಿಫಾ ಸ್ನೇಹಪರ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 1–1ರಲ್ಲಿ ಪನಾಮಾ ಜೊತೆಗೆ ಡ್ರಾ ಸಾಧಿಸಿತ್ತು. ಫಿಫಾ ವಿಶ್ವ ರ್‍ಯಾಂಕಿಂಗ್‌ನಲ್ಲಿ ಪ್ರಸ್ತುತ 44ನೇ ಸ್ಥಾನದಲ್ಲಿರುವ ಪನಾಮಾ ಜೊತೆಗೆ ಸಮಬಲ ಸಾಧಿಸಿದ್ದು ಭಾರತೀಯ ಫುಟ್‌ಬಾಲ್‌ನಲ್ಲಿ ಬೆಳ್ಳಿ ರೇಖೆ ಮೂಡಿಸಿತು. ಹೀಗಾಗಿ ಬ್ರೆಜಿಲ್ ವಿರುದ್ಧದ ಪಂದ್ಯವೂ ಅತ್ಯಂತ ಕುತೂಹಲಕಾರಿಯಾಗಿದೆ.
26 ಸದಸ್ಯರ ಭಾರತ ತಂಡದಲ್ಲಿ ನಾಲ್ವರು ಗೋಲ್‌ಕೀಪರ್‌ಗಳು, ಎಂಟು ಡಿಫೆಂಡರ್‌ಗಳು, ಎಂಟು ಮಿಡ್‌ಫೀಲ್ಡರ್‌ಗಳು ಮತ್ತು ಆರು ಫಾರ್ವರ್ಡ್‌ಗಳಿದ್ದಾರೆ. ಗುರುಪ್ರೀತ್ ಸಿಂಗ್ ಸಂಧು, ಅನಿರುದ್ಧ್ ಥಾಪಾ, ಅನ್ವರ್ ಅಲಿ ಮತ್ತು ಮನ್ವೀರ್ ಸಿಂಗ್ ಅವರಂತಹ ಅನುಭವಿ ಹೆಸರುಗಳು ಸೇರಿವೆ.
ಏಷ್ಯನ್ ಗೇಮ್ಸ್; 10 ಬಾರಿ ಚಾಂಪಿಯನ್ ಕೊರಿಯಾವನ್ನು ಮಣಿಸಿ ಐತಿಹಾಸಿಕ ಚಿನ್ನ ಗೆದ್ದ ಭಾರತೀಯ ಮಹಿಳಾ ರಿಕರ್ವ್ ತಂಡ
ಭಾರತ ತಂಡ
ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ಅಲ್ಬಿನೋ ಗೋಮ್ಸ್, ಸೋಮ್ ಕುಮಾರ್, ಪ್ರಭುಸುಖಾನ್ ಸಿಂಗ್ ಗಿಲ್.
ಡಿಫೆಂಡರ್ಸ್: ಆಕಾಶ್ ಮಿಶ್ರಾ, ಅಭಿಷೇಕ್ ಸಿಂಗ್ ಟೆಕ್ಚಾಮ್, ಬಿಜೋಯ್ ವರ್ಗೀಸ್, ಅನ್ವರ್ ಅಲಿ, ಜೇ ಗುಪ್ತಾ, ಹ್ಮಿಂಗ್ಥನ್ಮಾವಿಯಾ ರಾಲ್ಟೆ, ಪ್ರಮ್ವೀರ್, ರಿಕಿ ಮೀಟೆ ಹಾಬಾಮ್.
ಮಿಡ್‌ಫೀಲ್ಡರ್‌ಗಳು: ಮ್ಯಾಕಾರ್ಟನ್ ನಿಕ್ಸನ್, ಆಶಿಕ್ ಕುರುನಿಯನ್, ಫಾರೂಖ್ ಚೌಧರಿ, ಅನಿರುದ್ಧ್ ಥಾಪಾ, ಲಾಲೆಂಗ್‌ಮಾವಿಯಾ ರಾಲ್ಟೆ, ಸಹಲ್ ಅಬ್ದುಲ್ ಸಮದ್, ಮೊಹಮ್ಮದ್ ಸನನ್, ರಿಕಿ ಶಾಬಾಂಗ್.
ಫಾರ್ವರ್ಡ್‌ಗಳು: ಇರ್ಫಾನ್ ಯಾದವಾಡ, ಎಡ್ಮಂಡ್ ಲಾಲ್ರಿಂಡಿಕಾ, ರಹೀಮ್ ಅಲಿ, ಮನ್ವಿರ್ ಸಿಂಗ್, ರಿಯಾನ್ ವಿಲಿಯಮ್ಸ್, ವಿಕ್ರಮ್ ಪರತಾಪ್ ಸಿಂಗ್.