ದುಬೈ: ಏಷ್ಯಾ ಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಯಾವುದೇ ಕಿರಿಕ್ ಮಾಡದ ಆಡಿದ್ದ ಭಾರತ ಮತ್ತು ಪಾಕ್ ಕ್ರಿಕೆಟ್ ತಂಡದ ಆಟಗಾರರು ಸೂಪರ್-4 ಪಂದ್ಯದಲ್ಲಿ ಹೈವೋಲ್ಟೇಜ್ ರೀತಿಯಲ್ಲೇ ಪಂದ್ಯವನ್ನಾಡಿದ್ದರು. ಸ್ಲೆಡ್ಜಿಂಗ್, ಮಾತಿನ ಚಕಮಕಿ, ಸಂಭ್ರಮಾಚರಣೆ ಹೀಗೆ ಹಲವು ಕ್ಷಣಗಳು ಕಂಡುಬಂತು. ಸ್ಲೆಡ್ಜಿಂಗ್ ಮಾಡುತ್ತಿದ್ದ ಪಾಕಿಸ್ತಾನ ಬೌಲರ್‌ಗಳಿಗೆ ಅಭಿಶೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು.
ಒಂದು ಹಂತದಲ್ಲಿ ರೌಫ್ ಮತ್ತು ಅಭಿಷೇಕ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಉಭಯ ಆಟಗಾರರನ್ನು ಸಮಾಧಾನ ಪಡಿಸಿದರು. ಇಲ್ಲಿಗೆ ಸುಮ್ಮನಾಗದ ಭಾರತೀಯ ಬ್ಯಾಟರ್‌ಗಳು ಪಾಕ್ ಬೌಲರ್‌ಗಳಿಗೆ ಸಿಕ್ಸರ್ ಮತ್ತು ಬೌಂಡರಿ ಬಾರಿಸುತ್ತಿದ್ದ ವೇಳೆ ತಿರುಗೇಟು ನೀಡುತ್ತಿದ್ದರು.
ಶುಭಮನ್ ಗಿಲ್ ಕೂಡ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಸಿಡಿಸಿ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ಹೆಕ್ಕಿ ತೆಗೆದುಕೊಂಡು ಬಾ ಎಂದಿದ್ದಾರೆ. ಪಾಕ್ ಬೌಲರಗಳ ಚಳಿ ಬಿಡಿಸಿದ ಗಿಲ್ ಮತ್ತು ಅಭಿಷೇಕ್ ಮೊದಲ ವಿಕೆಟ್‌ಗೆ 105 ರನ್ ಜತೆಯಾಟ ನಡೆಸಿದರು. 6 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 39 ಎಸತದಲ್ಲಿ ಅಭಿಶೇಕ್ ಶರ್ಮಾ 74 ರನ್ ಸಿಡಿಸಿರು. ಶುಭಮನ್ ಗಿಲ್ 47 ರನ್ ಗಳಿಸಿದರು.