ವೆಲ್ಲಿಂಗ್ಟನ್, ನ.19: ಇಲ್ಲಿನ ಬೇಸಿನ್ ರಿಸರ್ವ್ನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ, ನ್ಯೂಜಿಲೆಂಡ್ ಬ್ಯಾಟರ್ಗಳಾದ ಗ್ಲೆನ್ ಫಿಲಿಪ್ಸ್ ಮತ್ತು ಹೆನ್ರಿ ನಿಕೋಲ್ಸ್ ದಾಖಲೆಯೊಂದನ್ನು ನಿರ್ಮಿಸಿದರು.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಫಿಲಿಪ್ಸ್, ಪ್ರಸ್ತುತ 2026ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ವಿರುದ್ಧ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಇದೀಗ ಅಗ್ರಸ್ಥಾನಕ್ಕೇರಿದರು.
ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ (T20I) ಸರಣಿಯಲ್ಲಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಗೆದ್ದ ಫಿಲಿಪ್ಸ್, 2026ರಲ್ಲಿ ಭಾರತದ ವಿರುದ್ಧ ಆಡಿದ 18 ಅಂತರರಾಷ್ಟ್ರೀಯ ಪಂದ್ಯಗಳ 17 ಇನ್ನಿಂಗ್ಸ್ಗಳಲ್ಲಿ ಒಟ್ಟು 756* ರನ್ಗಳನ್ನು ಕಲೆಹಾಕಿದ್ದಾರೆ. ಡೇರಿಲ್ ಮಿಚೆಲ್ 17 ಇನ್ನಿಂಗ್ಸ್ಗಳಲ್ಲಿ 754 ರನ್ಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.
2026ರಲ್ಲಿ ಭಾರತದ ವಿರುದ್ಧ ಫಿಲಿಪ್ಸ್ 11 ಟಿ20 ಅಂತರರಾಷ್ಟ್ರೀಯ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದು, ಇಲ್ಲಿಯವರೆಗೆ ಕ್ರಮವಾಗಿ 522, 180 ಮತ್ತು 55 ರನ್ಗಳನ್ನು ಗಳಿಸಿದ್ದಾರೆ.
ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ರನ್ಗಳನ್ನು ಗಳಿಸಿದ ವಿಶ್ವ ದಾಖಲೆಯು ವೆಸ್ಟ್ ಇಂಡೀಸ್ನ ಮಾಜಿ ಆರಂಭಿಕ ಆಟಗಾರ ಗಾರ್ಡನ್ ಗ್ರೀನಿಡ್ಜ್ ಅವರ ಹೆಸರಿನಲ್ಲಿದೆ.
ದಿಗ್ಗಜ ಜಾವಗಲ್ ಶ್ರೀನಾಥ್ ಟೆಸ್ಟ್ ದಾಖಲೆ ಹಿಂದಿಕ್ಕಿದ ಜಸ್ಪ್ರೀತ್ ಬುಮ್ರಾ
1983ರಲ್ಲಿ ಗ್ರೀನಿಡ್ಜ್ ಭಾರತದ ವಿರುದ್ಧ 22 ಪಂದ್ಯಗಳನ್ನು ಆಡಿ, 28 ಇನ್ನಿಂಗ್ಸ್ಗಳಲ್ಲಿ ಒಟ್ಟು 1,337 ರನ್ಗಳನ್ನು ಗಳಿಸಿದ್ದರು. ಗ್ರೀನಿಡ್ಜ್ ಅವರ ನಂತರದ ಸ್ಥಾನಗಳಲ್ಲಿ ಸನತ್ ಜಯಸೂರ್ಯ, ವಿವ್ ರಿಚರ್ಡ್ಸ್, ಶಿವನರೈನ್ ಚಂದ್ರಪಾಲ್, ಕ್ಲೈವ್ ಲಾಯ್ಡ್ ಮತ್ತು ಡೇವಿಡ್ ಬೂನ್ ಇದ್ದಾರೆ.
ನಿಕೋಲ್ಸ್ ಸಾವಿರ ರನ್
ಹೆನ್ರಿ ನಿಕೋಲ್ಸ್ ಪಂದ್ಯದಲ್ಲಿ 77 ರನ್ ಗಳಿಸುತ್ತಿದ್ದಂತೆ ನ್ಯೂಜಿಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ 1,000 ರನ್ಗಳನ್ನು ಪೂರ್ಣಗೊಳಿಸಿದರು. ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿರುವ ನಿಕೋಲ್ಸ್, ಒಂದೇ ಮೈದಾನದಲ್ಲಿ 1,000ಕ್ಕೂ ಹೆಚ್ಚು ಟೆಸ್ಟ್ ರನ್ಗಳನ್ನು ಪೂರೈಸಿದ ನ್ಯೂಜಿಲೆಂಡ್ನ ಏಳನೇ ಬ್ಯಾಟರ್ ಆಗಿದ್ದಾರೆ. ಇವರಿಗಿಂತ ಮೊದಲು ಜಾನ್ ರೈಟ್, ಮಾರ್ಟಿನ್ ಕ್ರೋ, ಬ್ರೆಂಡನ್ ಮೆಕಲಮ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಈ ಸಾಧನೆ ಮಾಡಿದ್ದರು.
ಜೂನ್ 2026ರಲ್ಲಿ ಕ್ರಿಕೆಟ್ನ ಎಲ್ಲಾ ಮಾದರಿಗಳಿಂದ ನಿವೃತ್ತಿ ಘೋಷಿಸಿದ ವಿಲಿಯಮ್ಸನ್, ಹ್ಯಾಮಿಲ್ಟನ್ನ ಸೆಡ್ಡಾನ್ ಪಾರ್ಕ್ನಲ್ಲಿ 1,614 ರನ್ಗಳನ್ನು ಹಾಗೂ ಬೇಸಿನ್ ರಿಸರ್ವ್ನಲ್ಲಿ 18 ಟೆಸ್ಟ್ ಪಂದ್ಯಗಳ 30 ಇನ್ನಿಂಗ್ಸ್ಗಳಲ್ಲಿ 1,591 ರನ್ಗಳನ್ನು ಗಳಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದರು.