ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GT vs KKR: ಉತ್ಸಾಹಿ ಗುಜರಾತ್‌ ಟೈಟಾನ್ಸ್‌ಗೆ ಹತಾಶ ಕೆಕೆಆರ್‌ ಸವಾಲು

GT vs KKR Match Preview: ನರೇಂದ್ರ ಮೋದಿ ಕ್ರೀಡಾಂಗಣವು ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರವಾದ ಮೇಲ್ಮೈಯನ್ನು ಹೊಂದಿದ್ದು, ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಪಂದ್ಯದ ಆರಂಭಿಕ ಹಂತಗಳಲ್ಲಿ. ಆದಾಗ್ಯೂ, ಆಟ ಮುಂದುವರೆದಂತೆ, ಪಿಚ್ ನಿಧಾನಗೊಳ್ಳುತ್ತದೆ.

GT vs KKR

ಅಹಮದಾಬಾದ್‌, ಎ.16: ಈ ಋತುವಿನ ಐಪಿಎಲ್‌(IPL 2026)ನಲ್ಲಿ ಒಂದೂ ಗೆಲುವನ್ನು ಕಾಣದೇ ಹತಾಶ ಮನಃಸ್ಥಿತಿಯಲ್ಲಿರುವ ಕೋಲ್ಕತ್ತ ನೈಟ್‌ ರೈಡರ್ಸ್(GT vs KKR Match Preview) ತಂಡವು ಮೊದಲ ಗೆಲುವಿನ ಇರಾದೆಯೊಂದಿಗೆ ಶುಕ್ರವಾರ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ(Narendra Modi Stadium)ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಸವಾಲು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಅಜಿಂಕ್ಯ ರಹಾನೆ ಪಡೆಗೆ ಪ್ಲೇ ಆಫ್‌ ಆಸೆ ಜೀವಂತವಿರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಬಿಡ್‌ನಲ್ಲಿ ಭಾರಿ ಮೊತ್ತ ಪಡೆದ ಕ್ಯಾಮರೂನ್ ಗ್ರೀನ್ ತಮ್ಮ ಮೌಲ್ಯಕ್ಕೆ ತಕ್ಕಂತೆ ಆಟವಾಡಿಲ್ಲ. ಎರಡು ಪಂದ್ಯಗಳಲ್ಲಿ ಗೋಲ್ಡನ್‌ ಡಕ್‌ ಸೇರಿ ಒಟ್ಟಾರೆ 20 ರನ್‌ ಗಡಿ ದಾಟಿಲ್ಲ. ಬೌಲಿಂಗ್‌ನಲ್ಲಿಯೂ ದುಬಾರಿಯಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಸಹ ರನ್‌ಗಳಿಗೆ ತಿಣುಕಾಡುತ್ತಿದ್ದಾರೆ. ಇದ್ದುದರಲ್ಲಿ ಅಂಗ್‌ಕ್ರಿಷ್‌ ರಘುವಂಶಿ ಬಿಟ್ಟರೆ ಅಜಿಂಕ್ಯ ರಹಾನೆ ಮಾತ್ರ ತಂಡದ ಪರ ಯಶಸ್ಸು ಕಾಣುತ್ತಿರುವ ಬ್ಯಾಟರ್‌. ಬೌಲಿಂಗ್‌ ವಿಭಾಗವಂತೂ ತೀರಾ ಕಳಪೆಯಾಗಿದೆ. ಅನುಭವಿ ವರುಣ್‌ ಚಕ್ರವರ್ತಿ, ಸುನಿಲ್‌ ನರೈನ್‌ ಸ್ಪಿನ್‌ ಜಾದೂ ನಡೆಯುತ್ತಿಲ್ಲ. ಜತೆಗೆ ತಂಡದ ಫೀಲ್ಡಿಂಗ್‌ ಕೂಡ ಸುಧಾರಣೆ ಕಾಣಬೇಕಿದೆ. ಇದರ ಹೊರತು ಗೆಲುವು ಕಷ್ಟ ಸಾಧ್ಯ.

ಆರಂಭಿಕ ಹಂತದಲ್ಲಿ ಎಡವಿದರೂ ಆ ಬಳಿಕ ಗೆಲುವಿನಮ ಹಳಿಗೆ ಮರಳಿದ ಗುಜರಾತ್‌ ಟೈಟಾನ್ಸ್‌ ತವರಿನಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಆರಂಭಿಕ ಬ್ಯಾಟರ್‌ ಸಾಯಿ ಸುದರ್ಶನ್‌ ವೈಫಲ್ಯದ ಮಧ್ಯೆಯೂ ನಾಯಕ ಶುಭಮನ್‌ ಗಿಲ್‌ ಮತ್ತು ಜಾಸ್‌ ಬಟ್ಲರ್‌ ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಪ್ರತಿ ಪಂದ್ಯದಲ್ಲಿಯೂ ಘಾತಕ ಬೌಲಿಂಗ್‌ ಮೂಲಕ ಮಿಂಚುತ್ತಿದ್ದಾರೆ. 10 ವಿಕೆಟ್‌ ಕಿತ್ತು ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ ಆಡಲು ಕಮಿನ್ಸ್‌ಗೆ ಗ್ರೀನ್‌ ಸಿಗ್ನಲ್‌; ಚೆನ್ನೈ ಪಂದ್ಯದಲ್ಲಿ ಆಡುವ ಸಾಧ್ಯತೆ?

ಪಿಚ್‌ ರಿಪೋರ್ಟ್‌

ನರೇಂದ್ರ ಮೋದಿ ಕ್ರೀಡಾಂಗಣವು ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರವಾದ ಮೇಲ್ಮೈಯನ್ನು ಹೊಂದಿದ್ದು, ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಪಂದ್ಯದ ಆರಂಭಿಕ ಹಂತಗಳಲ್ಲಿ. ಆದಾಗ್ಯೂ, ಆಟ ಮುಂದುವರೆದಂತೆ, ಪಿಚ್ ನಿಧಾನಗೊಳ್ಳುತ್ತದೆ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇರದ ಕಾರಣ ಸಂಪೂರ್ಣವಾಗಿ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಮುಖಾಮುಖಿ

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡುವಾಗ ಗುಜರಾತ್‌ ಟೈಟಾನ್‌ ಬಲಿಷ್ಠವಾಗಿದೆ. ಈವರೆಗೆ ಆಡಿದ 4 ಪಂದ್ಯಗಳ ಪೈಕಿ 3 ಪಂದ್ಯ ಗೆದ್ದಿದೆ. ಕೆಕೆಆರ್‌ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ.

ಸಂಭಾವ್ಯ ತಂಡಗಳು

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಬ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ,, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ

ಇಂಪ್ಯಾಕ್ಟ್ ಪ್ಲೇಯರ್: ಶಾರುಖ್ ಖಾನ್

ಕೋಲ್ಕತ್ತಾ ನೈಟ್ ರೈಡರ್ಸ್: ಫಿನ್ ಅಲೆನ್, ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ವಿ.ಕೀ.), ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ

ಇಂಪ್ಯಾಕ್ಟ್‌ ಆಟಗಾರ: ವೈಭವ್ ಅರೋರಾ