ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashes Test: ಸಿಡ್ನಿ ಟೆಸ್ಟ್‌ನಿಂದ ಹೊರಬಿದ್ದ‌ ಇಂಗ್ಲೆಂಡ್‌ ವೇಗಿ ಗಸ್ ಅಟ್ಕಿನ್ಸನ್

Gus Atkinson: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆಲುವಿಗಾಗಿ 5,468 ದಿನಗಳ ದೀರ್ಘ ಕಾಯುವಿಕೆಯನ್ನು ಕೊನೆಗೂ ಕೊನೆಗೊಳಿಸಿದ ಇಂಗ್ಲೆಂಡ್, ಈಗಾಗಲೇ ಸರಣಿಯನ್ನು 1-3 ಅಂತರದಲ್ಲಿ ಸೋತಿದ್ದರೂ, ಐದನೇ ಹಾಗೂ ಅಂತಿಮ ಟೆಸ್ಟ್ ಗೆದ್ದು ಸರಣಿಯನ್ನು ಭರ್ಜರಿಯಾಗಿ ಮುಗಿಸಲು ಉತ್ಸುಕವಾಗಿದೆ.

Gus Atkinson

ಸಿಡ್ನಿ, ಡಿ.29: ಆ್ಯಶಸ್‌ ಸರಣಿಯ(Ashes Test) ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡಕ್ಕೆ 5ನೇ ಹಾಗೂ ಅಂತಿಮ ಪಂದ್ಯಕ್ಕೂ ಮುನ್ನ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ಗಸ್ ಅಟ್ಕಿನ್ಸನ್(Gus Atkinson) ಮಂಡಿರಜ್ಜು ಸೆಳೆತದಿಂದಾಗಿ ಪಂದ್ಯದಿಂ ಹೊರಬಿದಿದ್ದಾರೆ. ಆದ್ಯಾಗೂ ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗಲಿಲ್ಲ.

"ಇಂಗ್ಲೆಂಡ್ ಪುರುಷರ ಸೀಮರ್ ಗಸ್ ಅಟ್ಕಿನ್ಸನ್ ಎಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ಸ್ಕ್ಯಾನ್‌ಗಳು ದೃಢಪಡಿಸಿದ ನಂತರ ಅವರನ್ನು ಆಶಸ್ ಪ್ರವಾಸದ ಉಳಿದ ಪಂದ್ಯಗಳಿಗೆ ಹೊರಗಿಡಲಾಗಿದೆ. ಸರ್ರೆಯ ಬಲಗೈ ಬೌಲರ್ ನಾಲ್ಕನೇ ಟೆಸ್ಟ್‌ನಲ್ಲಿ MCGಯಲ್ಲಿ ಇಂಗ್ಲೆಂಡ್ ಗೆಲುವಿನ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನ ಐದನೇ ಓವರ್ ಎಸೆದ ನಂತರ ಮೈದಾನವನ್ನು ತೊರೆದರು. ಜನವರಿ 4 ರಂದು ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್‌ಗೆ ಇಂಗ್ಲೆಂಡ್ ಬದಲಿ ಆಟಗಾರನನ್ನು ಕರೆಯುವುದಿಲ್ಲ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸರಣಿಯಲ್ಲಿ ಮೂರು ಟೆಸ್ಟ್‌ಗಳನ್ನು ಆಡಿದ ಅಟ್ಕಿನ್ಸನ್, ಮೆಲ್ಬೋರ್ನ್‌ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಐದು ಇನ್ನಿಂಗ್ಸ್‌ಗಳಿಂದ ಬ್ಯಾಟಿಂಗ್‌ನಲ್ಲಿ 73 ರನ್‌ಗಳನ್ನು ಗಳಿಸಿದ್ದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 37 ಆಗಿತ್ತು.

ಇದನ್ನೂ ಓದಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬುಮ್ರಾ, ಹಾರ್ದಿಕ್‌ಗೆ ವಿಶ್ರಾಂತಿ

ಈ ಸರಣಿಯಿಂದ ಹೊರಗುಳಿದ ಮೂರನೇ ಇಂಗ್ಲಿಷ್ ಬೌಲರ್ ಆಗಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ವೇಗಿ ಜೋಫ್ರಾ ಆರ್ಚರ್ ಬದಲಿಗೆ ಅಟ್ಕಿನ್ಸನ್ ಅವರನ್ನು ಆಡುವ XI ಗೆ ಸೇರಿಸಲಾಯಿತು. ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆಯಿಂದಾಗಿ ಆಶಸ್ ಸರಣಿಯ ಉಳಿದ ಪಂದ್ಯಗಳಿಂದ ಆರ್ಚರ್ ಹೊರಗುಳಿದಿದ್ದರು.

ಇದಕ್ಕೂ ಮೊದಲು, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಎಡ ಮೊಣಕಾಲಿನ ಗಾಯ ಮರುಕಳಿಸಿದ ನಂತರ ಮಾರ್ಕ್ ವುಡ್ ಅವರನ್ನು ಆಶಸ್‌ನಿಂದ ಹೊರಗಿಡಲಾಯಿತು. ಏತನ್ಮಧ್ಯೆ, ಅಟ್ಕಿನ್ಸನ್ ಅನುಪಸ್ಥಿತಿಯಲ್ಲಿ, ಜನವರಿ 4 ರಂದು ಪ್ರಾರಂಭವಾಗಲಿರುವ ಸಿಡ್ನಿ ಟೆಸ್ಟ್‌ಗೆ ಮ್ಯಾಥ್ಯೂ ಪಾಟ್ಸ್ ಅಥವಾ ಮ್ಯಾಥ್ಯೂ ಫಿಶರ್ ಆಯ್ಕೆಗಾಗಿ ಸ್ಪರ್ಧೆಯಲ್ಲಿರುತ್ತಾರೆ.

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಗೆಲುವಿಗಾಗಿ 5,468 ದಿನಗಳ ದೀರ್ಘ ಕಾಯುವಿಕೆಯನ್ನು ಕೊನೆಗೂ ಕೊನೆಗೊಳಿಸಿದ ಇಂಗ್ಲೆಂಡ್, ಈಗಾಗಲೇ ಸರಣಿಯನ್ನು 1-3 ಅಂತರದಲ್ಲಿ ಸೋತಿದ್ದರೂ, ಐದನೇ ಟೆಸ್ಟ್ ಗೆದ್ದು ಸರಣಿಯನ್ನು ಭರ್ಜರಿಯಾಗಿ ಮುಗಿಸಲು ಉತ್ಸುಕವಾಗಿದೆ.