ಗುವಾಹಟಿ, ಎ.10: ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಅಜೇಯ ತಂಡಗಳಾಗಿರುವ ರಾಜಸ್ಥಾನ್ ರಾಯಲ್ಸ್(RR vs RCB) ಮತ್ತು ಆರ್‌ಸಿಬಿ ಇಂದು(ಶುಕ್ರವಾರ) ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯಕ್ಕೆ ಮಳೆ(Guwahati Weather Prediction) ಭೀತಿಯೂ ಎದುರಾಗಿದೆ. ಇಲ್ಲೇ ನಡೆದಿದ್ದ ಮುಂಬೈ ಮತ್ತು ರಾಜಸ್ಥಾನ್ ವಿರುದ್ಧದ ಪಂದ್ಯ ಮಳೆಯಿಂದ ಅಡಚಣೆಯಾಗಿತ್ತು.
ಶುಕ್ರವಾರ ಮಧ್ಯಾಹ್ನ ಗುವಾಹಟಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಆದಾಗ್ಯೂ, ಸಂಜೆ ಸಮೀಪಿಸುತ್ತಿದ್ದಂತೆ, ಮಳೆಯಾಗುವ ಸಾಧ್ಯತೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಪಂದ್ಯ ನಡೆಯುತ್ತಿರುವಾಗ ಸಂಜೆ ಮಳೆಯಾಗುವ ಸಾಧ್ಯತೆ ಸರಿಸುಮಾರು ಶೇ. 14 ರಷ್ಟಿದೆ. ಒಂದೊಮ್ಮೆ ಮಳೆ ಬರದೇ ಹೋದರೆ, ಈ ಮೈದಾನದಲ್ಲಿ ಬ್ಯಾಟರ್‌ಗಳು ರನ್ ಹೊಳೆ ಸುರಿಸುವ ಸಾಧ್ಯತೆಯಿದೆ
ಸೂರ್ಯವಂಶಿ ಹೈಲೆಟ್ಸ್
ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ದಿಗ್ಗಜ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಎಸೆತಗಳನ್ನು ಲೀಲಾಜಾಲವಾಗಿ ಸಿಕ್ಸರ್‌ಗೆತ್ತಿದ ವೈಭವ್ ಸೂರ್ಯವಂಶಿಯ ಈ ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿದ್ದಾರೆ. ರಜತ್ ಪಾಟೀದಾರ್ ಬಳಗವು ಈ ಟೂರ್ನಿಯಲ್ಲಿ ತವರೂರಿನಿಂದ ಹೊರಗೆ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಒಂದೊಮ್ಮೆ ಜೈಸ್ವಾಲ್ ಮತ್ತು ವೈಭವ್ ಅವರನ್ನು ಬೇಗನೆ ಕಟ್ಟಿಹಾಕಿದರೂ, ರಾಜಸ್ಥಾನ ತಂಡದಲ್ಲಿ ಬ್ಯಾಟರ್‌ಗಳ ದೊಡ್ಡ ಪಟ್ಟಿ ಇದೆ. ವಿಕೆಟ್‌ಕೀಪರ್–ಬ್ಯಾಟರ್ ಧ್ರುವ ಜುರೇಲ್, ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜ, ನಾಯಕ ಪರಾಗ್, ಡೊನೊವನ್ ಪೆರೆರಾ ಅವರು ಉತ್ತಮ ಲಯದಲ್ಲಿದ್ಧಾರೆ. ಅವರನ್ನೂ ನಿಯಂತ್ರಿಸಲು ಬೌಲರ್‌ಗಳು ಗಮನ ಹರಿಸುವುದು ಅನಿವಾರ್ಯವಾಗಲಿದೆ.
ಮುಖಾಮುಖಿ ದಾಖಲೆ
ಉಭಯ ತಂಡಗಳು ಐಪಿಎಲ್‌ನಲ್ಲ ಒಟ್ಟು 34 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ರಾಜಸ್ಥಾನ್ ರಾಯಲ್ಸ್ 14 ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಗೆಲುವು ಕಂಡಿದೆ. ಮೂರು ಪಂದ್ಯ ಫಲಿತಾಂಶ ಕಂಡಿಲ್ಲ.
Who is Mukul Choudhary?: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಬಾರಿಸುವ ಮುಕುಲ್ ಚೌಧರಿ ಯಾರು?
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮಾಯೆರ್, ಡೊನೊವಾನ್ ಪೆರೆರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ರವಿ ಬಿಷ್ಣೋಯ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೇಕಬ್ ಡಫಿ
ಇಂಪ್ಯಾಕ್ಟ್ ಪ್ಲೇಯರ್: ಸೂಯೇಶ್ ಶರ್ಮಾ