ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Happy Birthday Virat Kohli: 37ನೇ ವಸಂತಕ್ಕೆ ಕಾಲಿಟ್ಟ ‘ಕಿಂಗ್’ ಕೊಹ್ಲಿ

ಕಿಂಗ್ ಕೊಹ್ಲಿಗೆ 37 ವರ್ಷ! ಭಾರತೀಯ ಕ್ರಿಕೆಟ್‌ನ ನಿಜವಾದ ದಂತಕಥೆ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರಯಾಣವನ್ನು ಆಚರಿಸಲಾಗುತ್ತಿದೆ! ಅವರಿಗೆ ಹೆಚ್ಚಿನ ದಾಖಲೆಗಳು, ವಿಜಯಗಳು ಮತ್ತು ಸಂತೋಷದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ! ಜನ್ಮದಿನದ ಶುಭಾಶಯಗಳು ವಿರಾಟ್ ಕೊಹ್ಲಿ ಎಂದು ಮಾಜಿ ಆಟಗಾರ ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.

37ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ ಕೊಹ್ಲಿ

37ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ ಕೊಹ್ಲಿ -

Abhilash BC Abhilash BC Nov 5, 2025 10:01 AM

ಮುಂಬಯಿ: ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ(Virat Kohli) ಅವರಿಗೆ ಇಂದು (ಬುಧವಾರ) 37ನೇ ಹುಟ್ಟುಹಬ್ಬದ ಸಂಭ್ರಮ. ಕಿಂಗ್‌ ಕೊಹ್ಲಿ ಹುಟ್ಟುಹಬ್ಬದ(Happy Birthday Virat Kohli) ಅಂಗವಾಗಿ ಹಿರಿಯ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ವಿಶ್ವ ಕ್ರಿಕೆಟ್‌ನ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ ‘ನಮ್ಮ ವಿರಾಟ ರಾಜ’ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ.

ಕಿಂಗ್ ಕೊಹ್ಲಿಗೆ 37 ವರ್ಷ! ಭಾರತೀಯ ಕ್ರಿಕೆಟ್‌ನ ನಿಜವಾದ ದಂತಕಥೆ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರಯಾಣವನ್ನು ಆಚರಿಸಲಾಗುತ್ತಿದೆ! ಅವರಿಗೆ ಹೆಚ್ಚಿನ ದಾಖಲೆಗಳು, ವಿಜಯಗಳು ಮತ್ತು ಸಂತೋಷದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ! ಜನ್ಮದಿನದ ಶುಭಾಶಯಗಳು ವಿರಾಟ್ ಕೊಹ್ಲಿ ಎಂದು ಮಾಜಿ ಆಟಗಾರ ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.



ಐಪಿಎಲ್‌ ಫ್ರಾಂಚೈಸಿಗಳಾದ ಕೆಕೆಆರ್‌, ಪಂಜಾಬ್‌, ರಾಜಸ್ಥಾನ್‌ ಸೇರಿ ಎಲ್ಲ ತಂಡಗಳು ಕೊಹ್ಲಿಗೆ ಶುಭ ಕೋರಿದ್ದಾರೆ. ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ.



2011ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್‌ ಆಡಿದ್ದು, 40ರಲ್ಲಿ ಗೆದ್ದಿದ್ದರೆ, ಕೇವಲ 17 ಪಂದ್ಯಗಳಲ್ಲಿ ಸೋತಿತ್ತು. ಈ ಮೂಲಕ ಭಾರತದ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 60 ಟೆಸ್ಟ್‌ಗಳಲ್ಲಿ 27ರಲ್ಲಿ ಗೆದ್ದಿದ್ದರೆ, ಗಂಗೂಲಿ ಅವಧಿಯಲ್ಲಿ 49 ಟೆಸ್ಟ್‌ನಲ್ಲಿ 21ರಲ್ಲಿ ಜಯಗಳಿಸಿತ್ತು. ಒಟ್ಟಾರೆ ವಿಶ್ವದಲ್ಲೇ 4ನೇ ಗರಿಷ್ಠ ಟೆಸ್ಟ್‌ ಪಂದ್ಯ ಗೆದ್ದ ಖ್ಯಾತಿ ಕೊಹ್ಲಿಗಿದೆ. ದ.ಆಫ್ರಿಕಾ ತಂಡ ಗ್ರೇಮ್‌ ಸ್ಮಿತ್‌ ನಾಯಕತ್ವದಲ್ಲಿ 109 ಟೆಸ್ಟ್‌ನಲ್ಲಿ 53, ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ 77 ಪಂದ್ಯಗಳಲ್ಲಿ 48, ಸ್ಟೀವ್‌ ವಾ 57 ಪಂದ್ಯಗಳಲ್ಲಿ 41ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ ಕೊಹ್ಲಿ-ರೋಹಿತ್‌ ಅವರೇ..... ಇನ್ನೂ ಸ್ವಲ್ಪ ದಿನ ಆಡಬಹುದಿತ್ತಲ್ವಾ? ಯಾಕಿಷ್ಟು ಆತುರ!



ರನ್‌ ಮೆಷಿನ್‌ ಖ್ಯಾತಿಯ ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ತಮ್ಮ ರನ್‌ ಸಾಧನೆ ಮೂಲಕ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡರೂ, ಟೆಸ್ಟ್‌ನಲ್ಲಿ ಅವರು ವಿಶೇಷ ಕಾರಣಕ್ಕೆ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. 2014-15ರಲ್ಲಿ ಟೆಸ್ಟ್‌ ನಾಯಕನಾಗಿ ನೇಮಕಗೊಂಡ ಕೊಹ್ಲಿ, ಕೆಲ ವರ್ಷಗಳಲ್ಲೇ ಭಾರತೀಯ ಟೆಸ್ಟ್‌ ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿಬಿಟ್ಟರು. 2014ರಿಂದ 2022ರ ವರೆಗಿನ ಅವರ ನಾಯಕತ್ವದ ಅವಧಿಯನ್ನು ಭಾರತೀಯ ಟೆಸ್ಟ್‌ನ ಸ್ವರ್ಣಯುಗ ಎಂದೇ ಕರೆಯಲಾಗುತ್ತದೆ. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ(2018-19) ಗೆದ್ದ ಏಷ್ಯಾದ ಮೊದಲ ನಾಯಕ ಎನಿಸಿಕೊಂಡಿರುವ ಕೊಹ್ಲಿ, 2020-21ರಲ್ಲಿ ಮತ್ತೊಮ್ಮೆ ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟಿದ್ದರು. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾದಲ್ಲೂ ಭಾರತ ಟೆಸ್ಟ್‌ ಪಂದ್ಯಗಳಲ್ಲಿ ಗೆದ್ದಿತ್ತು.



ಕೊಹ್ಲಿ ಆಟ ಇನ್ನು ಏಕದಿನ, ಐಪಿಎಲ್‌ನಲ್ಲಿ ಮಾತ್ರ

ಕಳೆದ ವರ್ಷ ಅಂ.ರಾ. ಟಿ20 ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದ ಕೊಹ್ಲಿ, ಇನ್ನು ಏಕದಿನ ಹಾಗೂ ಐಪಿಎಲ್‌ನಲ್ಲಿ ಮಾತ್ರ ಕಾಣಸಿಗಲಿದ್ದಾರೆ. ಅವರು 2027ರ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದ್ದು, ಆ ಬಳಿಕವೇ ಏಕದಿನದಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಇನ್ನೂ 2-3 ವರ್ಷ ಆಡುವ ನಿರೀಕ್ಷೆಯಿದೆ.