ಮಂಬಯಿ, ಮಾ.15: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು 12 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫೆರಾರಿ 12 ಸಿಲಿಂಡ್ರಿಯ(Ferrari 12Cilindri) ಕಾರನ್ನು ಖರೀದಿಸಿದ್ದಾರೆ. ತಮ್ಮ ಗೆಳತಿ ಮಹಿಕಾ ಶರ್ಮ(Mahieka Sharma) ಜತೆ ಪಾಂಡ್ಯ ಈ ಕಾರಿನಲ್ಲಿ ಸಂಚರಿಸುವ ವಿಡಿಯೊ ವೈರಲ್ ಆಗಿದೆ.
ವರದಿಗಳ ಪ್ರಕಾರ, ಹಾರ್ದಿಕ್ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಆಡಿ ಎ6, ರೇಂಜ್ ರೋವರ್ ವೋಗ್, ಲಂಬೋರ್ಘಿನಿ ಉರುಸ್ ಎಸ್ಇ ಮತ್ತು ಮರ್ಸಿಡಿಸ್ ಬೆಂಜ್ ಕಾರುಗಳಿವೆ. ಹೊಸ ಫೆರಾರಿ ಖಂಡಿತವಾಗಿಯೂ ಅವರ ಕಾರುಗಳ ಸಂಗ್ರಹಕ್ಕೆ ಹೆಚ್ಚಿನ ಶಕ್ತಿ ಮತ್ತು ಕೌಶಲ್ಯವನ್ನು ಸೇರಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಹಾರ್ದಿಕ್ ತನ್ನ ಗೆಳತಿ ಮಹಿಕಾ ಶರ್ಮಾ ಜೊತೆ ಈ ಅದ್ಭುತ ವಾಹನವನ್ನು ಸವಾರಿ ಮಾಡುತ್ತಿರುವುದನ್ನು ಕಾಣಬಹುದು.
ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ವಕೀಲರೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿದ್ದರು.
ಪಾಂಡ್ಯ ಗೆಳತಿ ಮಹೀಕಾ ಮಾಡೆಲ್ ಆಗಿದ್ದು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ವರ್ಷದ ಮಾಡೆಲ್ (ನವಯುಗ) ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ರಾಷ್ಟ್ರಧ್ವಜಕ್ಕೆ ಅವಮಾನ; ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು
ಮಹೀಕಾ ಅರ್ಥಶಾಸ್ತ್ರ ಮತ್ತು ಹಣಕಾಸಿನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮಾಡೆಲಿಂಗ್ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.