ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ

Asia Cup 2025: ಸಾಹಿಬ್‌ಜಾದಾ ಫರ್ಹಾನ್‌ ಅವರು ಟಿ20ಯಲ್ಲಿ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಎದುರು ಸಿಕ್ಸರ್‌ ಸಿಡಿಸಿದ ಮೊದಲ ಪಾಕಿಸ್ತಾನಿ ಬ್ಯಾಟರ್‌ ಎನಿಸಿದರು. ಈ ಹಿಂದೆ ಪಾಕ್‌ ವಿರುದ್ಧ 92 ಎಸೆತ ಎಸೆದಿದ್ದ ಬುಮ್ರಾ ಒಂದೂ ಸಿಕ್ಸರ್‌ ನೀಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಒಟ್ಟು ಮೂರು ಸಿಕ್ಸರ್‌ ಬಿಟ್ಟುಕೊಟ್ಟರು.

ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಟಿ20 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತಿದ್ದ ಹಾರ್ದಿಕ್‌ ಪಾಂಡ್ಯ ಅವರು ಈ ಸಾಧನೆ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ 2ನೇ ಭಾರತೀಯ ಬೌಲರ್‌ ಎನಿಸಿಕೊಂಡರು. ಅರ್ಶ್‌ದೀಪ್‌ ಸಿಂಗ್‌ ಮೊದಲಿಗ. 2024ರಲ್ಲಿ ಅಮೆರಿಕ ಎದುರು ಈ ಸಾಧನೆ ಮಾಡಿದ್ದರು.

ಸಾಹಿಬ್‌ಜಾದಾ ಫರ್ಹಾನ್‌ ಅವರು ಟಿ20ಯಲ್ಲಿ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ ಎದುರು ಸಿಕ್ಸರ್‌ ಸಿಡಿಸಿದ ಮೊದಲ ಪಾಕಿಸ್ತಾನಿ ಬ್ಯಾಟರ್‌ ಎನಿಸಿದರು. ಈ ಹಿಂದೆ ಪಾಕ್‌ ವಿರುದ್ಧ 92 ಎಸೆತ ಎಸೆದಿದ್ದ ಬುಮ್ರಾ ಒಂದೂ ಸಿಕ್ಸರ್‌ ನೀಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಒಟ್ಟು ಮೂರು ಸಿಕ್ಸರ್‌ ಬಿಟ್ಟುಕೊಟ್ಟರು.

ಪಾಕಿಸ್ತಾನ ನೀಡಿದ 128 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಕೇವಲ 15.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 131 ರನ್‌ ಗಳಿಸಿ ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಸಿಡಿಸಿದರು. ಇನ್ನು ತಿಲಕ್ ವರ್ಮಾ 31 ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 47 ರನ್ ಸಿಡಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಭಾರತ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಕುಲ್‌ದೀಪ್‌ ಯಾದವ್‌ 18 ರನ್‌ಗೆ 3 ವಿಕೆಟ್‌ ಕಿತ್ತರು. ಉಳಿದಂತೆ ಅಕ್ಷರ್‌ ಪಟೇಲ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ತಲಾ ಎರಡು ವಿಕೆಟ್‌ ಉರುಳಿಸಿದರು. ವರುಣ್‌ ಚರ್ಕವರ್ತಿ ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು. ಪಾಂಡ್ಯ ಮೊದಲ ಮೂರು ಓವರ್‌ ಉತ್ತಮವಾಗಿ ಸಂಘಟಿಸಿದರೂ, ಅಂತಿಮ ಎಸೆತದಲ್ಲಿ ಸತತ ಎರಡು ಸಿಕ್ಸರ್‌ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.

ಇದನ್ನೂ ಓದಿ IND vs PAK: 'ಹಣ ಗಳಿಸಲು ರಾಷ್ಟ್ರೀಯತೆಯನ್ನು ಬಳಸಿಕೊಳ್ಳಲಾಗುತ್ತಿದೆ'; ಬಿಸಿಸಿಐ ವಿರುದ್ಧ ಅಭಿಮಾನಿಗಳ ಆಕ್ರೋಶ