ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಐಪಿಎಲ್‌ ನಿಯಮ ಉಲ್ಲಂಘನೆ: ಹಾರ್ದಿಕ್‌ ಪಾಂಡ್ಯಗೆ ದಂಡದ ಬಿಸಿ ಮುಟ್ಟಿಸಿದ ಬಿಸಿಸಿಐ

Hardik Pandya: ಪಂದ್ಯದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ಸಂಭವಿಸಿತು, ಹಾರ್ದಿಕ್ ಪಾಂಡ್ಯ ತನ್ನ ರನ್-ಅಪ್‌ಗೆ ಹಿಂತಿರುಗುವಾಗ, ವಿಕೆಟ್‌ನ ಬೇಲ್ಸ್‌ಗಳನ್ನು ಬಲವಾಗಿ ಕೆಡವಿದರು. ಹಾರ್ದಿಕ್ ಪಾಂಡ್ಯ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿ ರಾಜೀವ್ ಸೇಠ್ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದರು.‌

Hardik Pandya

ಕೋಲ್ಕತಾ, ಮೇ 21: ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದlಲ್ಲಿ ಐಪಿಎಲ್(IPL 2026) ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರಿಗೆ ಪಂದ್ಯ ಶುಲ್ಕದ ಶೇ.10ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಹಾರ್ದಿಕ್ ಪಾಂಡ್ಯ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು "ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ"ಕ್ಕೆ ಸಂಬಂಧಿಸಿದೆ.

ಪಂದ್ಯದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ಸಂಭವಿಸಿತು, ಹಾರ್ದಿಕ್ ಪಾಂಡ್ಯ ತನ್ನ ರನ್-ಅಪ್‌ಗೆ ಹಿಂತಿರುಗುವಾಗ, ವಿಕೆಟ್‌ನ ಬೇಲ್ಸ್‌ಗಳನ್ನು ಬಲವಾಗಿ ಕೆಡವಿದರು. ಹಾರ್ದಿಕ್ ಪಾಂಡ್ಯ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಪಂದ್ಯದ ರೆಫರಿ ರಾಜೀವ್ ಸೇಠ್ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದರು.‌

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ 8 ವಿಕೆಟ್‌ ನಷ್ಟದಲ್ಲಿ 147 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್‌ 18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 148 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್‌ ವೇಳೆ ಮನೀಶ್‌ ಪಾಂಡೆ, ರೋವ್ಮನ್‌ ಪೊವೆಲ್‌ ತಂಡಕ್ಕೆ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 64 ರನ್‌ ಸೇರಿಸಿತು. ಪೊವೆಲ್ 30 ಎಸೆತಕ್ಕೆ 40, ಮನೀಶ್‌ 33 ಎಸೆತಕ್ಕೆ 45 ರನ್‌ ಗಳಿಸಿದರು. ತಂಡ 18.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಕಾರ್ಬಿನ್‌ 3 ವಿಕೆಟ್‌ ಕಿತ್ತರು.

GT vs CSK: ಗುಜರಾತ್‌ ವಿರುದ್ಧದ ಕೊನೆಯ ಪಂದ್ಯದಲ್ಲಾದರೂ ಆಡಲಿದ್ದಾರಾ ಧೋನಿ?

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8ಕ್ಕೆ 147 (ರೋಹಿತ್ ಶರ್ಮಾ 15, ಸೂರ್ಯಕುಮಾರ್ ಯಾದವ್ 15, ತಿಲಕ್ ವರ್ಮಾ 20, ಹಾರ್ದಿಕ್ ಪಾಂಡ್ಯ 26, ಕಾರ್ಬಿನ್ ಬಾಷ್ ಔಟಾಗದೇ 32, ಸೌರಭ್ ದುಬೆ 34ಕ್ಕೆ2, ಕ್ಯಾಮರಾನ್ ಗ್ರೀನ್ 23ಕ್ಕೆ2). ಕೋಲ್ಕತ್ತ ನೈಟ್ ರೈಡರ್ಸ್: 18.5 ಓವರ್‌ಗಳಲ್ಲಿ 6 ವಿಕೆಟ್‌ಗೆ 148 (ಅಜಿಂಕ್ಯ ರಹಾನೆ 21, ಮನೀಷ್‌‌ ಪಾಂಡೆ 45, ರೋವ್‌ಮನ್‌ ಪಾವೆಲ್‌ 40; ಕಾರ್ಬಿನ್‌ ಬಾಷ್‌ 30ಕ್ಕೆ3).