ಮುಂಬಯಿ, ಎ.13: ಸತತ ಮೂರು ಪಂದ್ಯಗಳ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ತಂಡವು "ಆಯ್ಕೆಗಳನ್ನು ಅನ್ವೇಷಿಸುತ್ತದೆ" ಎಂದು ಹೇಳಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs MI) ವಿರುದ್ಧ 18 ರನ್ ಅಂತರದ ಸೋಲು ಕಂಡಿತ್ತು.
ಸೋಲಿನ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, "ನಾವು ಚೇಸಿಂಗ್ ವೇಳೆ ಆರಂಭದಲ್ಲೇ ಹಲವಾರು ವಿಕೆಟ್‌ಗಳನ್ನು ಕಳೆದುಕೊಂಡೆವು ಮತ್ತು ಅದೇ ಸಮಯದಲ್ಲಿ, ನಾವು ಹಲವಾರು ರನ್‌ಗಳನ್ನು ಬಿಟ್ಟುಕೊಟ್ಟೆವು ಎಂದು ನಾನು ಭಾವಿಸುತ್ತೇನೆ. ಅದು ಯಾವಾಗಲೂ ಪಂದ್ಯಕ್ಕೆ ಹಿನ್ನಡೆ ಆಗಿರುತ್ತದೆ. ಬಹಳಷ್ಟು ವಿಷಯಗಳಿಗೆ ಪುನರ್ವಿಮರ್ಶೆ ಅಗತ್ಯವಿದೆ. ಆದರೆ ಬ್ಯಾಟ್ ಮತ್ತು ಚೆಂಡಿನೊಂದಿಗೆ ನಮಗೆ ಇರುವ ಇತರ ಆಯ್ಕೆಗಳನ್ನು ನಾವು ನೋಡಬೇಕಾಗಿದೆ. ನಾವು ಇನ್ನೂ ಚೆನ್ನಾಗಿ ಬ್ಯಾಟಿಂಗ್ ಮಾಡಬೇಕು ಮತ್ತು ಚೆನ್ನಾಗಿ ಬೌಲಿಂಗ್ ಮಾಡಬೇಕಿದೆ. ಮುಂದಿನ ಪಂದ್ಯದಲ್ಲಿ ನಾವು ಏನು ಮಾಡಬಹುದು ಎಂದು ನೋಡೋಣ" ಎಂದು ತಂಡದ ಪ್ರದರ್ಶನದ ಬಗ್ಗೆ ಅಸಾಮಾಧಾನ ಹೊರಹಾಕಿದರು.
RCB vs MI: ಮುಂಬೈ ಇಂಡಿಯನ್ಸ್‌ಗೆ ಮಣ್ಣು ಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಶರಣಾಯಿತು. ಮುಂಬೈ ಶೆರ್ಫಾನ್ ರುದರ್ಫೋರ್ಡ್ (ಔಟಾಗದೆ 71, 31 ಎಸೆತ, 1 ಬೌಂಡರಿ, 9 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರ ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ ತಲಾ 6 ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 78 ರನ್ ಸಿಡಿಸಿದರು. ಇನ್ನು ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್ ಮಾಡಲಿಳಿದ ನಾಯಕ ರಜತ್ ಪಾಟೀದಾರ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 53 ರನ್ ಚಚ್ಚಿದರು. ಇನ್ನು ಕೊನೆಯಲ್ಲಿ ಟಿಮ್ ಡೇವಿಡ್ ಚುರುಕಿನ 34 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ಮುಟ್ಟಿಸಿದರು.