ಮುಂಬಯಿ, ನ.26: ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವರ್ಗಾವಣೆಯಾಗುವ ಬದಲು ಪಂಜಾಬ್ ಕಿಂಗ್ಸ್ ತಂಡಕ್ಕೆ ಹೇಗೆ ಸೇರ್ಪಡೆಗೊಂಡರು ಎಂಬ ವಿಚಾರ ಬಹಿರಂಗವಾಗಿದೆ.
ಹಾರ್ದಿಕ್, ಚೆನ್ನೈ ಸೂಪರ್ ಕಿಂಗ್ಸ್ (CSK), ರಾಜಸ್ಥಾನ್ ರಾಯಲ್ಸ್ (RR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸೇರಿದಂತೆ ಹಲವು ಫ್ರಾಂಚೈಸಿಗಳಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಂತಿಮವಾಗಿ, ಪಂಜಾಬ್ ಕಿಂಗ್ಸ್ ಈ ಪ್ರಮುಖ ವರ್ಗಾವಣೆಯನ್ನು ಪೂರ್ಣಗೊಳಿಸಿತು. ಬದಲಿಗೆ ಅವರು ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಟ್ಟರು.
ಒಪ್ಪಂದ ಪೂರ್ಣಗೊಂಡ ಕೆಲ ವಾರಗಳ ನಂತರ, ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸುವರ್ಣಾವಕಾಶವನ್ನು ರಾಜಸ್ಥಾನ್ ರಾಯಲ್ಸ್ (RR) ಕಳೆದುಕೊಂಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಮುಂಬೈ ಇಂಡಿಯನ್ಸ್ (MI) ಮುಂದಿಟ್ಟ ಬೇಡಿಕೆಗಳಿಂದಾಗಿ ರಾಜಸ್ಥಾನ್ ರಾಯಲ್ಸ್ ಮಾತುಕತೆಯನ್ನು ಮೊಟಕುಗೊಳಿಸಿತು ಎಂದು ಹೇಳಲಾಗಿದೆ.
'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, ಹಾರ್ದಿಕ್ಗೆ ಬದಲಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಫ್ರಾ ಆರ್ಚರ್ ಇಬ್ಬರನ್ನೂ ಮುಂಬೈ ಇಂಡಿಯನ್ಸ್ ಬಯಸಿತ್ತು. ಆದರೆ, ರಾಜಸ್ಥಾನ್ ರಾಯಲ್ಸ್ ಈ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿರಲಿಲ್ಲ, ಹೀಗಾಗಿ ಅವರು ಈ ಒಪ್ಪಂದವನ್ನು ಮುಂದುವರಿಸದಿರಲು ನಿರ್ಧರಿಸಿದರು.
ಹಾರ್ದಿಕ್ ಅವರನ್ನು ಪಡೆಯಲು ಸಾಧ್ಯವಾಗದಿದ್ದರೂ, ರಾಜಸ್ಥಾನ್ ರಾಯಲ್ಸ್ ಒಂದು ಪ್ರಮುಖ ವಿನಿಮಯವನ್ನು ಯಶಸ್ವಿಯಾಗಿ ನಡೆಸಿತು. ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ಗೆ ಬಿಟ್ಟುಕೊಟ್ಟಿತು. ಬದಲಿಗೆ, ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು.
ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ
ಎಲ್ಎಸ್ಜಿ ತಂಡವು 10 ಕೋಟಿ ರೂಪಾಯಿಗೆ ಖರೀದಿಸಿದ್ದ ಶಮಿ, ಈಗ 8 ಕೋಟಿ ರೂಪಾಯಿಯ ಪರಿಷ್ಕೃತ ಮೊತ್ತಕ್ಕೆ ರಾಜಸ್ಥಾನ ತಂಡವನ್ನು ಸೇರಲಿದ್ದಾರೆ. ಇದರ ಜೊತೆಗೆ, ಎಡಗೈ ಸ್ಪಿನ್ನರ್ ಎಂ. ಸಿದ್ಧಾರ್ಥ್ ಕೂಡ ಎಲ್ಎಸ್ಜಿಯಿಂದ ರಾಜಸ್ಥಾನ ತಂಡಕ್ಕೆ ಮ್ಮ ಈಗಿನ 75 ಲಕ್ಷ ರೂಪಾಯಿ ಸಂಭಾವನೆಯೊಂದಿಗೆ ವರ್ಗಾವಣೆಗೊಳ್ಳಲಿದ್ದಾರೆ. ಇತ್ತ ಕರನ್ ವರನ್ನು ಅವರ ಈಗಿನ 2.4 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎಲ್ಎಸ್ಜಿ ತಂಡಕ್ಕೆ ವರ್ಗಾಯಿಸಲಾಗಿದೆ (ಟ್ರೇಡ್ ಮಾಡಲಾಗಿದೆ).
ಈ ನಡೆ ರಾಜಸ್ಥಾನದ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಶಮಿ ಅವರು ಜೋಫ್ರಾ ಆರ್ಚರ್ ಅವರೊಂದಿಗೆ ಸೇರಿ ಮಾರಕ ಜೋಡಿಯನ್ನು ರಚಿಸುವ ಸಾಧ್ಯತೆಯಿದೆ. ಆರ್ಚರ್ 2024ರ ಆವೃತ್ತಿಯಲ್ಲಿ ಈ ಫ್ರಾಂಚೈಸಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅನುಭವಿ ವೇಗದ ಬೌಲರ್ ಆಗಿರುವ ಶಮಿ, 132 ಐಪಿಎಲ್ ಪಂದ್ಯಗಳಲ್ಲಿ 145 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇವರು ರಾಯಲ್ಸ್ ತಂಡದ ಬೌಲಿಂಗ್ ವಿಭಾಗಕ್ಕೆ ಅಪಾರ ಅನುಭವ ತಂದುಕೊಡಲಿದ್ದಾರೆ.