ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್

Harmanpreet Kaur: ಜೆಮಿಮಾ ರಾಡ್ರಿಗಸ್‌ ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 44 ಎಸೆತಗಳಿಂದ ಅಜೇಯ 69 ರನ್‌ ಪೇರಿಸಿದರು. ಅವರ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 10 ಬೌಂಡರಿ ಒಳಗೊಂಡಿತ್ತು. ನಾಯಕಿ ಕೌರ್‌ 19 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸ್ಮೃತಿ ಮಂಧಾನ 25 ರನ್‌ ಗಳಿಸಿದರು.

harmanpreet kaur

ವಿಶಾಖಪಟ್ಟಣಂ ಡಿ. 22: ಭಾನುವಾರ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಶ್ರೀಲಂಕಾ(India Women vs Sri Lanka Women) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ ಅಂತರದ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಬೃಹತ್ ದಾಖಲೆ ನಿರ್ಮಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು.

ಮೊದಲ ಟಿ20ಐನಲ್ಲಿ ಆಡುವ ಮೂಲಕ, ಕೌರ್ 350 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸೂಜಿ ಬೇಟ್ಸ್ ನಂತರ 350 ಅಥವಾ ಅದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ವಿಶ್ವದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯ ಆಡಿರುವ ಆಟಗಾರ್ತಿಯರು

ಸುಜೀ ಬೇಟ್ಸ್: 355 ಪಂದ್ಯಗಳು

ಹರ್ಮನ್‌ಪ್ರೀತ್‌ ಕೌರ್: 350 ಪಂದ್ಯಗಳು

ಎಲ್ಲಿಸ್ ಪೆರ್ರಿ: 347 ಪಂದ್ಯಗಳು

ಮಿಥಾಲಿ ರಾಜ್: 333 ಪಂದ್ಯಗಳು

ಸೋಫಿ ಡಿವೈನ್: 305 ಪಂದ್ಯಗಳು

ಇದನ್ನೂ ಓದಿ ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ; ಲಂಕಾ ವಿರುದ್ಧ ಗೆದ್ದ ಭಾರತ

8 ವಿಕೆಟ್‌ ಗೆಲುವು

ಪಂದ್ಯದ ಬಗ್ಗೆ ಹೇಳುವುದಾದರೆ ಭಾರತ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜವಾಬಿತ್ತ ಭಾರತ ಜೆಮಿಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ 14.4 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 122 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಜೆಮಿಮಾ ರಾಡ್ರಿಗಸ್‌ ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 44 ಎಸೆತಗಳಿಂದ ಅಜೇಯ 69 ರನ್‌ ಪೇರಿಸಿದರು. ಅವರ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 10 ಬೌಂಡರಿ ಒಳಗೊಂಡಿತ್ತು. ನಾಯಕಿ ಕೌರ್‌ 19 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸ್ಮೃತಿ ಮಂಧಾನ 25 ರನ್‌ ಗಳಿಸಿದರು.

ಭಾರತ ಪರ ಪದಾರ್ಪಣೆ ಮಾಡಿದ ವೈಷ್ಣವಿ ಶರ್ಮಾ ವಿಕೆಟ್‌ ಪಡೆಯಲು ವಿಫಲರಾದರೂ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು. 4 ಓವರ್‌ಗೆ ಕೇವಲ 16 ರನ್‌ ಮಾತ್ರ ಬಿಟ್ಟುಕೊಟ್ಟರು. ಶ್ರೀಲಂಕಾ ಪರ ಆರಂಭಿಕ ಆಟಗಾರ್ತಿ ವಿಷ್ಮಿ ಗುಣರತ್ನೆ ಹೊರತುಪಡಿಸಿ ಉಳಿದವರೆಲ್ಲರೂ ವಿಫಲರಾದರು. 39 ರನ್‌ ಬಾರಿಸಿದ ಅವರು ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.