ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಗೌರವಕ್ಕೆ ಪಾತ್ರರಾದ ಹ್ಯಾರಿ ಕೇನ್‌

Ballon d'Or: 2001ರಲ್ಲಿ ಮೈಕೆಲ್ ಓವನ್ ಬ್ಯಾಲನ್ ಡಿ'ಓರ್ ಗೆದ್ದ ಬಳಿಕ ಇಂಗ್ಲೆಂಡ್‌ ನ ಯಾವುದೇ ಆಟಗಾರನಿಗೆ ಈ ಗೌರವ ಒಲಿದಿರಲಿಲ್ಲ. ಇದೀಗ ಕೇನ್ ಆ ಬರವನ್ನು ನೀಗಿಸಿದ್ದಾರೆ. 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ.

Harry Kane

ಲಂಡನ್‌, ಅ.27: ಕೈಲಿಯನ್ ಎಂಬಾಪೆ ಮತ್ತು ಲ್ಯಾಮೈನ್ ಯಮಾಲ್ ಅವರನ್ನು ಹಿಂದಿಕ್ಕಿ ಫುಟ್‌ಬಾಲ್‌ನ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಪ್ರಶಸ್ತಿಯಾದ 'ಬ್ಯಾಲನ್ ಡಿ ಓರ್' (Ballon d’Or) ಅನ್ನು ಗೆಲ್ಲುವ ಮೂಲಕ, 2001ರಲ್ಲಿ ಮೈಕೆಲ್ ಓವನ್ ನಂತರ ಈ ಸಾಧನೆ ಮಾಡಿದ ಮೊದಲ ಇಂಗ್ಲಿಷ್ ಆಟಗಾರ ಎಂಬ ಹೆಗ್ಗಳಿಕೆಗೆ ಹ್ಯಾರಿ ಕೇನ್ ಪಾತ್ರರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಪೇನ್‌ ನ ಮಿಡ್‌ಫೀಲ್ಡರ್ ಅಲೆಕ್ಸಿಯಾ ಪುಟೆಲ್ಲಾಸ್ ಪ್ರಶಸ್ತಿ ಗೆದ್ದಿದ್ದಾರೆ.

2001ರಲ್ಲಿ ಮೈಕೆಲ್ ಓವನ್ ಬ್ಯಾಲನ್ ಡಿ'ಓರ್ ಗೆದ್ದ ಬಳಿಕ ಇಂಗ್ಲೆಂಡ್‌ ನ ಯಾವುದೇ ಆಟಗಾರನಿಗೆ ಈ ಗೌರವ ಒಲಿದಿರಲಿಲ್ಲ. ಇದೀಗ ಕೇನ್ ಆ ಬರವನ್ನು ನೀಗಿಸಿದ್ದಾರೆ. 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ.

33 ವರ್ಷದ ಬೇಯರ್ನ್ ಮ್ಯೂನಿಚ್ ಸ್ಟ್ರೈಕರ್, ತಮ್ಮ ವೃತ್ತಿಜೀವನದ ಅತ್ಯಂತ ಯಶಸ್ವಿ ಋತುವಿಗಾಗಿ ಪುರಸ್ಕೃತರಾದರು. 2025-26ರ ಅವಧಿಯಲ್ಲಿ, ಕ್ಲಬ್ ಮತ್ತು ರಾಷ್ಟ್ರೀಯ ತಂಡಕ್ಕಾಗಿ ಆಡಿದ 65 ಪಂದ್ಯಗಳಲ್ಲಿ ಅವರು ಒಟ್ಟು 73 ಗೋಲುಗಳನ್ನು ಗಳಿಸಿದರು. ಅಲ್ಲದೆ, ಯುರೋಪ್‌ನ ದೇಶೀಯ ಲೀಗ್‌ಗಳಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ ಅವರು, 'ಯುರೋಪಿಯನ್ ಗೋಲ್ಡನ್ ಶೂ' ಪ್ರಶಸ್ತಿಯನ್ನೂ ಪಡೆದರು.



"ನನ್ನ ಬಳಿ ಮಾತನಾಡಲು ಪದಗಳೇ ಇಲ್ಲದಂತಾಗಿದೆ. ಲಂಡನ್‌ ನಲ್ಲಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ. ಇದು ನನಗೆ ಶುಭ ಸೂಚನೆಯಾಗಿದೆ. ನನಗಾಗಿ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ವರ್ಷ ವಿಜೇತರನ್ನು ಆಯ್ಕೆ ಮಾಡುವುದು ಕಷ್ಟವಾಗಿತ್ತು ಎಂದು ಊಹಿಸಬಲ್ಲೆ. ಇಲ್ಲಿ ವಿಶ್ವದರ್ಜೆಯ ಆಟಗಾರರು ಉಪಸ್ಥಿತರಿದ್ದಾರೆ. ವಿಜೇತರು ಮತ್ತು ನಾಮನಿರ್ದೇಶಿತರೆಲ್ಲರಿಗೂ ಅಭಿನಂದನೆಗಳು. ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ನಿಮ್ಮ ಸಾಧನೆಗಳೇ ಸಾಕ್ಷಿ" ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಹ್ಯಾರಿ ಕೇನ್ ಹೇಳಿದರು.

ʻ2027ರ ಏಕದಿನ ವಿಶ್ವಕಪ್‌ಗೂ ಮುನ್ನ ನಿವೃತ್ತಿಯಿಲ್ಲʼ: ವದಂತಿಗಳಿಗೆ ತೆರೆ ಎಳೆದ ರೋಹಿತ್ ಶರ್ಮಾ!

ಸ್ಪೇನ್‌ನ ಮಿಡ್‌ಫೀಲ್ಡರ್ ಅಲೆಕ್ಸಿಯಾ ಪುಟೆಲ್ಲಾಸ್ ಮೂರನೇ ಬಾರಿಗೆ ಬ್ಯಾಲನ್ ಡಿ'ಓರ್ ಫೆಮಿನಿನ್ ಪ್ರಶಸ್ತಿ ಗೆದ್ದರು. 2023 ಮತ್ತು 2024ರಲ್ಲಿ ಈ ಮೊದಲು ಅವರು ಪ್ರಶಸ್ತಿ ಗೆದ್ದಿದ್ದರು. 2025-26ರ ಋತುವಿನಲ್ಲಿ ಬಾರ್ಸಿಲೋನಾ ತಂಡದ ಪರ ತ್ರಿವಳಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಸ್ಪ್ಯಾನಿಷ್ ಸೂಪರ್ ಕಪ್ ಗೆಲುವಿನಲ್ಲೂ ಕೊಡುಗೆ ನೀಡಿದ್ದರು. ಬಾರ್ಸಿಲೋನಾ ತಂಡದೊಂದಿಗೆ 14 ವರ್ಷಗಳ ಸಂಬಂಧ ಹೊಂದಿದ್ದ ಪುಟೆಲ್ಲಾಸ್, ಜುಲೈನಲ್ಲಿ ಮಹಿಳಾ ಸೂಪರ್ ಲೀಗ್‌ನ ಲಂಡನ್ ಸಿಟಿ ಲಯನೆಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.