ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: ಹೈವೋಲ್ಟೇಜ್‌ ಭಾರತ-ಪಾಕ್‌ ಪಂದ್ಯಕ್ಕೆ ಭಾರೀ ಮಳೆ ಭೀತಿ!

IND vs PAK T20 World Cup: ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಭಾರತ ಮತ್ತು ಪಾಕ್ ನಡುವಣ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಎರಡೂ ತಂಡಗಳು ಒಟ್ಟು 5 ಅಂಕದೊಂದಿಗೆ ಎ ಗುಂಪಿನಿಂದ ಸೂಪರ್-‌8 ಪ್ರವೇಶ ಪಡೆಯಲಿದೆ.

Colombo forecast

ಕೊಲಂಬೊ, ಫೆ.14: ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಟಿ20 ವಿಶ್ವಕಪ್ 2026ರಲ್ಲಿ ಮುಖಾಮುಖಿಯಾಗಲು ಸಜ್ಜಾಗಿದ್ದು, ಎಲ್ಲರ ಕಣ್ಣುಗಳು ಆರ್. ಪ್ರೇಮದಾಸ ಕ್ರೀಡಾಂಗಣದ ಮೇಲೆ ನೆಟ್ಟಿವೆ. ಕೊಲಂಬೊ(vBig Colombo forecast)ದಲ್ಲಿ ನಡೆಯುವ ಪಂದ್ಯವು ಗ್ರೂಪ್ ಎ ನಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ.

ಪಂದ್ಯಕ್ಕೆ ಮಳೆಯಿಂದ ಗಂಭೀರ ಅಪಾಯ ಎದುರಾಗಬಹುದು ಎಂದು ಶ್ರೀಲಂಕಾದ ಹವಾಮಾನ ಇಲಾಖೆ ಪಂದ್ಯಕ್ಕೂ ಮುನ್ನವೇ ಘೋಷಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ನೈಸರ್ಗಿಕ ಅಪಾಯಗಳ ಮುನ್ನೆಚ್ಚರಿಕೆ ಕೇಂದ್ರದ ಮೂಲಕ ತಿಳಿಸಿದೆ.

"ಫೆಬ್ರವರಿ 15 ರ ಸುಮಾರಿಗೆ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿದೆ" ಎಂದು ಶ್ರೀಲಂಕಾದ ಹವಾಮಾನ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಕ್ಯೂವೆದರ್ ಪ್ರಕಾರ ಸಂಜೆ 5 ಗಂಟೆಗೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಜತೆಗೆ ಮೋಡ ಕವಿದ ವಾತಾವರಣವ ಇರಲಿದೆ ಎಂದಿದೆ.

ಗೂಗಲ್ ಹವಾಮಾನದ ಪ್ರಕಾರ, ಫೆಬ್ರವರಿ 15 ರ ಭಾನುವಾರ ಕೊಲಂಬೊದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.



ಹವಾಮಾನ ತಜ್ಞ ನವದೀಪ್ ದಹಿಯಾ ಪ್ರಕಾರ ಮಧ್ಯಾಹ್ನ ಮತ್ತು ಸಂಜೆಯ ನಡುವೆ ಒಂದು ಅಥವಾ ಎರಡು ಬಾರಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಸಂಜೆ 6 ಗಂಟೆಯ ನಂತರ ಹವಾಮಾನ ಪರಿಸ್ಥಿತಿ ಸುಧಾರಿಸುತ್ತದೆ. ಪಂದ್ಯದಾದ್ಯಂತ ಮಳೆ ಬೀಳುವ ನಿರೀಕ್ಷೆಯಿಲ್ಲ ಎಂದಿದ್ದಾರೆ.

IND vs PAK: 'ಇತಿಹಾಸ ಬದಲಿಸಲು ಸಾಧ್ಯವಿಲ್ಲ'; ಭಾರತ ವಿರುದ್ಧ ಕಳಪೆ ಸಾಧನೆ ಒಪ್ಪಿಕೊಂಡ ಪಾಕ್‌ ನಾಯಕ

ಮಳೆಯಿಂದ ಪಂದ್ಯ ರದ್ದಾದರೆ?

ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಇತ್ತಂಡಗಳ ನಡುವಣ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಆಗ ಎರಡೂ ತಂಡಗಳು ಒಟ್ಟು 5 ಅಂಕದೊಂದಿಗೆ ಎ ಗುಂಪಿನಿಂದ ಸೂಪರ್-‌8 ಪ್ರವೇಶ ಪಡೆಯಲಿದೆ.