ದುಬೈ, ಸೆ.11: ಬಾಂಗ್ಲಾದೇಶದ ವಿರುದ್ಧದ ಮಹಿಳಾ ಏಷ್ಯಾ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪ್ರಮುಖ ಎಡಗೈ ಸ್ಪಿನ್ನರ್ ಶ್ರೀ ಚರಣಿ ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಅವರು ಈ ಸಾಧನೆ ಮಾಡಲು ಕೇವಲ 29 ಪಂದ್ಯಗಳನ್ನು ತೆಗೆದುಕೊಂಡರು.
ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಆಟಗಾರ್ತಿಯೊಬ್ಬರು ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಕೂಡ ಅವರು ಸರಿಗಟ್ಟಿದರು. ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಈ ಸಾಧನೆಗೆ ಪಾತ್ರರಾದರು.
ನಿಗದಿಯಂತೆಯೇ ನಡೆಯಲಿದೆ ಭಾರತ-ಅಫ್ಘಾನಿಸ್ತಾನ ಮೊದಲ ಟಿ20 ಪಂದ್ಯ; ಡಿಡಿಸಿಎ ಸ್ಪಷ್ಟನೆ
ಅತಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಒಟ್ಟಾರೆ ಪಟ್ಟಿಯಲ್ಲಿ ಚರಣಿ ಜಂಟಿ-ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೇವಲ 28 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಚೀನಾದ ಮೆಂಗ್‌ಟಿಂಗ್ ಲಿಯು ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಲೀ ಕ್ಯಾಸ್ಪರೆಕ್ ಮತ್ತು ವೆಸ್ಟ್ ಇಂಡೀಸ್‌ನ ಅನಿಸಾ ಮೊಹಮ್ಮದ್ 29 ಪಂದ್ಯಗಳಲ್ಲಿ 50 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ್ದರು.
22 ವರ್ಷ ಮತ್ತು 37 ದಿನಗಳ ವಯಸ್ಸಿನಲ್ಲಿ, ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಪಡೆದ ಎರಡನೇ ಅತಿ ಕಿರಿಯ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೂ ಚರಣಿ ಪಾತ್ರರಾದರು. 20 ವರ್ಷ ಮತ್ತು 334 ದಿನಗಳ ವಯಸ್ಸಿನಲ್ಲಿ ಈ ಮೈಲಿಗಲ್ಲನ್ನು ತಲುಪಿದ ರಾಧಾ ಯಾದವ್, ಭಾರತದ ಪರವಾಗಿ ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.
ವಿಶ್ವ ದಾಖಲೆ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಹೆಸರಿನಲ್ಲಿದೆ. ಅವರು, 20 ವರ್ಷ ಮತ್ತು 300 ದಿನಗಳ ವಯಸ್ಸಿನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದರು.
ಪೂನಂ ಯಾದವ್ ದಾಖಲೆ ಸರಿಗಟ್ಟಿದ ಚರಣಿ
ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರು 2018ರಲ್ಲಿ 35 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದ 35 ವಿಕೆಟ್‌ಗಳ ದಾಖಲೆಯನ್ನು ಚರಣಿ ಸರಿಗಟ್ಟಿದರು. ಕೇವಲ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.