ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್: ಸೆಮಿ ಪ್ರವೇಶಿಸಿದ ಸಾತ್ವಿಕ್–ಚಿರಾಗ್ ಜೋಡಿ

ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಕ್ರಮಾಂಕದಲ್ಲಿರುವ ಈ ಜೋಡಿಯು, ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಟೂರ್ನಿ ಸೇರಿದಂತೆ ಈ ವರ್ಷ ನಡೆದ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ಟೂರ್ನಿಯಲ್ಲಿಯೂ ಪ್ರಶಸ್ತಿ ಭರವಸೆ ಇರಿಸಲಾಗಿದೆ. ಶನಿವಾರ ನಡೆಯುವ ಸೆಮಿ ಕಾದಾಟದಲ್ಲಿ ಚೀನಾ ತೈಪೆಯ ಲಿನ್ ಬಿಂಗ್-ವೀ ಮತ್ತು ಚೆನ್ ಚೆಂಗ್ ಕುವಾನ್ ಸವಾಲು ಎದುರಿಸಲಿದ್ದಾರೆ.

ಹಾಂಗ್‌ಕಾಂಗ್‌: ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Satwik-Chirag) ಅವರು ಹಾಂಗ್‌ ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್(Hong Kong Open) ಟೂರ್ನಿಯಲ್ಲಿ ಸೆಮಿ ಫೈನಲ್‌ ಪ್ರವೇಶಿಸಿದ್ದು ಪ್ರಶಸ್ತಿಯತ್ತ ಚಿತ್ತ ನೆಟ್ಟಿದ್ದಾರೆ. ಪ್ರಶಸ್ತಿ ಸುತ್ತಿಗೆ ಇನ್ನೊಂದು ಹೆಜ್ಜೆ ದೂರಲ್ಲಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತೀಯ ಜೋಡಿ ಮಲೇಷ್ಯಾದ ಜುನೈದಿ ಆರಿಫ್ ಮತ್ತು ರಾಯ್ ಕಿಂಗ್ ಯಾಪ್ ಅವರನ್ನು 21-14, 20-22, 21-16 ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಮೂರು ಗೇಮ್‌ಗಳ ಮ್ಯಾರಥಾನ್‌ ಪೈಪೋಟಿಯಲ್ಲಿ ಭಾರತೀಯ ಜೋಡಿ ಮೊದಲ ಗೇಮ್‌ ಅನ್ನು ಅತ್ಯಂತ ಸುಲಭವಾಗಿ ಗೆದ್ದಿತು. ಆದರೆ ಎರಡನೇ ಗೇಮ್‌ನಲ್ಲಿ ಗೆಲುವಿಗೆ ಉಭಯ ತಂಡಗಳ ಆಟಗಾರರು ತೀವ್ರ ಪೈಪೋಟಿ ನಡೆಸಿದರು. ಅಂತಿಮವಾಗಿ ಮಲೇಷ್ಯಾ ಜೋಡಿ 22-20 ಅಂತರದಿಂದ ಗೆದ್ದು ಸಮಬಲ ಸಾಧಿಸಿತು.

ಮೂರನೇ ಹಾಗೂ ನಿರ್ಣಾಯಕ ಗೇಮ್‌ ಕೂಡ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಭಾರತೀಯ ಜೋಡಿಯ ಆಕ್ರಮಣಕಾರಿ ಆಟದ ಮುಂದೆ ಮಲೇಷ್ಯಾ ಜೋಡಿ ಸಂಪೂರ್ಣ ಮಂಕಾಯಿತು. 16 ಅಂಕಕ್ಕೆ ಸೀಮಿತವಾಗಿ ಶರಣಾದರು.

ಇದನ್ನೂ ಓದಿ Asia Cup 2025: ಪಾಕ್‌ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ