Mahieka Sharma: ಹಾರ್ದಿಕ್ ಪಾಂಡ್ಯ ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಯಾರು?
ಮಹೀಕಾ ಮಾಡೆಲ್ ಆಗಿದ್ದು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ವರ್ಷದ ಮಾಡೆಲ್ (ನವಯುಗ) ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

-

ಮುಂಬಯಿ: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಕಳೆದ ವರ್ಷ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ ಆ ಬಳಿಕ ಪಾಂಡ್ಯ, ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್ ತಾರೆ ಜಾಸ್ಮಿನ್ ವಾಲಿಯಾ(Jasmin Walia) ಜತೆ ಡೇಟಿಂಗ್ ಆರಂಭಿಸಿದ್ದರು. ಆದರೆ ಇತ್ತೀಚೆಗೆ ಈ ಜೋಡಿ ಬ್ರೇಕಪ್ ಆಗಿತ್ತು. ಇದೀಗ ಪಾಂಡ್ಯ ಮಾಡೆಲ್ ಕಮ್ ನಟಿ ಮಹಿಕಾ ಶರ್ಮಾ(Mahieka Sharma) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿಬಂದಿದೆ.
ಹೌದು, ಮಹಿಕಾ ಶರ್ಮಾ ಮಾಡಿರುವ ಕೆಲವು ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್‌ನಲ್ಲಿ ಅವರ ಜತೆ ಹಾರ್ದಿಕ್ ಪಾಂಡ್ಯ ಕೂಡ ಇರುವುದು ಬೆಳಕಿಗೆ ಬಂದಿದೆ. ಒಂದು ಪೋಸ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಜೆರ್ಸಿ ಸಂಖ್ಯೆ 33 ಇರುವುದು ಪತ್ತೆಯಾದರೆ, ಮತ್ತೊಂದು ಸೆಲ್ಫಿ ಪೋಸ್ಟ್‌ನಲ್ಲಿ ಹಾರ್ದಿಕ್ ಮತ್ತು ಮಹಿಕಾ ಒಂದೇ ಬಾತ್‌ರೋಬ್ ಧರಿಸಿರುವುದು ಕಾಣಿಸಿಕೊಂಡಿದೆ. ಪಾಂಡ್ಯ ಅವರ ಫೋಟೊವನ್ನು ಮಹಿಕಾ ಶರ್ಮಾ ಬ್ಲರ್ ಮಾಡಿದ್ದು ಕೂಡ ಕಂಡುಬಂದಿದೆ.
ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯದ ವೇಳೆಯೂ ಮಹಿಕಾ ಶರ್ಮಾ ಹಾಜರಿದ್ದು ಟೀಂ ಇಂಡಿಯಾ ಮತ್ತು ಹಾರ್ಧಿಕ್ ಪಾಂಡ್ಯ ಅವರಿಗೆ ಬೆಂಬಲ ನೀಡಿದ್ದು ಕೂಡ ಈ ಜೋಡಿ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪುಷ್ಠಿ ನೀಡಿದಂತಾಗಿದೆ.
ಯಾರು ಈ ಮಹಿಕಾ?
ಮಹೀಕಾ ಮಾಡೆಲ್ ಆಗಿದ್ದು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ವರ್ಷದ ಮಾಡೆಲ್ (ನವಯುಗ) ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಮಹೀಕಾ ಅರ್ಥಶಾಸ್ತ್ರ ಮತ್ತು ಹಣಕಾಸಿನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮಾಡೆಲಿಂಗ್ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.