ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ಚಾಂಪಿಯನ್‌ಶಿಪ್‌ ಜಾವೆಲಿನ್; ನೀರಜ್‌ ಸೇರಿ ಫೈನಲ್‌ ಮೇಲೆ ಕಣ್ಣಿಟ್ಟ ನಾಲ್ವರು ಭಾರತೀಯರು

World Athletics Championships: ಬುಧವಾರ ನೀರಜ್ ಮತ್ತು ಅರ್ಷದ್ ವಿಭಿನ್ನ ಗುಂಪುಗಳಲ್ಲಿ ಡ್ರಾ ಆಗಿರುವುದರಿಂದ ನೇರ ಹೋರಾಟದಿಂದ ತಪ್ಪಿಸಿಕೊಳ್ಳಲಿದ್ದಾರೆ. ಇಬ್ಬರೂ ತಮ್ಮ ಆರಂಭಿಕ ಥ್ರೋಗಳೊಂದಿಗೆ ಅರ್ಹತೆ ಪಡೆಯುವ ಭರವಸೆಯಲ್ಲಿದ್ದಾರೆ. 37 ಕ್ರೀಡಾಪಟುಗಳಲ್ಲಿ ಕನಿಷ್ಠ 12 ಮಂದಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ನೀರಜ್‌ ಸೇರಿ ಫೈನಲ್‌ ಮೇಲೆ ಕಣ್ಣಿಟ್ಟ ನಾಲ್ವರು ಭಾರತೀಯರು

-

Abhilash BC Abhilash BC Sep 17, 2025 10:06 AM

ಟೋಕಿಯೊ: ಭಾರತದ, ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಸೆಪ್ಟೆಂಬರ್ 17, ಬುಧವಾರ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇಂಉ ನಡೆಯುವ ಅರ್ಹತಾ ಸುತ್ತಿನಲ್ಲಿ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ನಾಲ್ಕು ವರ್ಷಗಳ ಹಿಂದೆ ತನ್ನ ಐತಿಹಾಸಿಕ ಒಲಿಂಪಿಕ್ ಪದಕವನ್ನು ಗೆದ್ದ ನಗರಕ್ಕೆ ಮತ್ತೆ ಮರಳುತ್ತಿದು ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.

ಬುಧವಾರ ನೀರಜ್ ಮತ್ತು ಅರ್ಷದ್ ವಿಭಿನ್ನ ಗುಂಪುಗಳಲ್ಲಿ ಡ್ರಾ ಆಗಿರುವುದರಿಂದ ನೇರ ಹೋರಾಟದಿಂದ ತಪ್ಪಿಸಿಕೊಳ್ಳಲಿದ್ದಾರೆ. ಇಬ್ಬರೂ ತಮ್ಮ ಆರಂಭಿಕ ಥ್ರೋಗಳೊಂದಿಗೆ ಅರ್ಹತೆ ಪಡೆಯುವ ಭರವಸೆಯಲ್ಲಿದ್ದಾರೆ. 37 ಕ್ರೀಡಾಪಟುಗಳಲ್ಲಿ ಕನಿಷ್ಠ 12 ಮಂದಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. 84.50 ಮೀ.ಗಿಂತ ಹೆಚ್ಚಿನ ದೂರ ಎಸೆಯುವ ಮೂಲಕ ನೇರ ಅರ್ಹತೆಯನ್ನು ಸಾಧಿಸಬಹುದು. ಇಲ್ಲದಿದ್ದರೆ, 12 ಅತ್ಯುತ್ತಮ ಪ್ರದರ್ಶನ ನೀಡುವವರು ಮುನ್ನಡೆಯುತ್ತಾರೆ. ಫೈನಲ್‌ ಗುರುವಾರ ನಡೆಯಲಿದೆ.

ಎರಡು ವರ್ಷಗಳ ಹಿಂದೆ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ, ಮೂವರು ಭಾರತೀಯರು - ನೀರಜ್, ಡಿಪಿ ಮನು ಮತ್ತು ಕಿಶೋರ್ ಜೆನಾ ಫೈನಲ್ ತಲುಪಿದ್ದರು. ಅಲ್ಲಿ ನೀರಜ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.

ಈ ವರ್ಷದ ಫೈನಲ್‌ನಲ್ಲಿ ನೀರಜ್ ಸ್ಥಾನ ಬಹುತೇಕ ಖಚಿತವಾಗಿದ್ದರೂ, ಸ್ಪರ್ಧೆಯಲ್ಲಿರುವ ಇತರ ಮೂವರು ಭಾರತೀಯರಾದ ಸಚಿನ್ ಯಾದವ್, ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಅವರ ಮೇಲೆಯೂ ಭರವಸೆ ಇರಿಸಲಾಗಿದೆ.