ಲಂಡನ್, ಜೂ. 26: ಗುರುವಾರ (ಜೂನ್ 25) ನಡೆದ 2026ರ ಮಹಿಳಾ ಟಿ20 ವಿಶ್ವಕಪ್(T20 World Cup 2026)ನಲ್ಲಿ ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದರೂ ಭಾರತದ ಸೆಮಿಫೈನಲ್ ಟಿಕೆಟ್ ಇನ್ನೂ ಅಧಿಕೃತವಾಗಿಲ್ಲ. ಭಾರತಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಭಾರತದ ಸೆಮಿ ಲೆಕ್ಕಾಚಾರ ಹೇಗಿದೆ ಎಂಬ ವರದಿಯೊಂದು ಇಲ್ಲಿದೆ.
ಸದ್ಯ 'ಎ' ಗುಂಪಿನಲ್ಲಿರುವ ಭಾರತ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಜೇಯ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದರೂ ತಂಡ ಸೆಮಿಗೆ ಲಗ್ಗೆಯಿಟ್ಟಿಲ್ಲ. ರನ್‌ರೇಟ್‌ನಲ್ಲಿ ಹಿಂದಿರುವ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಭಾರತ ತಂಡಕ್ಕೆ ಸೆಮಿ ಫೈನಲ್ ಪ್ರವೇಶ ಪಡೆಯಬೇಕಿದ್ದರೆ ಭಾನುವಾರ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕು.
ಭಾರತವನ್ನು ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದರೂ ದಕ್ಷಿಣ ಆಫ್ರಿಕಾದ ಸೆಮಿಫೈನಲ್ ಖಚಿತವಾಗುದಿಲ್ಲ. ಆಸ್ಟ್ರೇಲಿಯಾ ಭಾರತ ವಿರುದ್ಧ ಸೋತರೆ ಆಗ ಮೂರು ತಂಡಗಳ ಅಂಕ ತಲಾ 8 ಆಗಲಿದೆ. ಆಗ ರನ್‌ರೇಟ್ ಆಧಾರದಲ್ಲಿ ಮುಂದಿರುವ ತಂಡಕ್ಕೆ ಅವಕಾಶ ಸಿಗಲಿದೆ. ಆಸ್ಟ್ರೇಲಿಯಾದ ರನ್‌ರೇಟ್ +4 ಇರುವ ಕಾರಣ ಭಾರತ ವಿರುದ್ಧ ಸೋತರೂ ತಂಡಕ್ಕೆ ದೊಡ್ಡ ಹಾನಿ ಉಂಟಾಗುವುದು ಅನುಮಾನ. ಭಾರತ ಸೋತರಷ್ಟೇ ದಕ್ಷಿಣ ಆಫ್ರಿಕಾಗೆ ಅವಕಾಶ ಸಿಗಲಿದೆ.
ʻಸಿಂಹಗಳಂತೆ ಆಡೋಣʼ: ಮೊದಲನೇ ಟಿ20ಐಗೂ ಮುನ್ನ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಲಹೆ!
ಮತ್ತೊಂದು ಲೆಕ್ಕಾಚಾರದ ಪ್ರಕಾರ, ಒಂದೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತರೆ, ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಗೆದ್ದರೆ ಆಗ ಭಾರತವೇ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ. ಸದ್ಯ ಇಂಗ್ಲೆಂಡ್ ತಂಡವೊಂದೆ ಅಧಿಕೃತವಾಗಿ ಸೆಮಿಗೆ ಲಗ್ಗೆಯಿಟ್ಟಿದೆ. ಅದು 'ಬಿ'ಗುಂಪಿನಿಂದ.
ಬಾಂಗ್ಲಾ ವಿರುದ್ಧ 5 ವಿಕೆಟ್ ಅಂತರದ ಗೆಲುವು
ಗುರುವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಗೆಲ್ಲಲ್ಲೇ ಬೇಕಾದ ಪಂದ್ಯದಲ್ಲಿ ಭಾರತ 5 ವಿಕೆಟ್ ಅಂತರದ ಗೆಲುವು ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ರಾಧಾ ಯಾದವ್(28ಕ್ಕೆ3) ಮತ್ತು ಶ್ರೀ ಚರಣಿ (21ಕ್ಕೆ2) ಸ್ಪಿನ್ ಬಲೆಗೆ ಬಿದ್ದು 8 ವಿಕೆಟ್‌ಗೆ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 16.5 ಓವರ್‌ಗಳಲ್ಲಿ 5 ವಿಕೆಟ್‌ಗೆ 139 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತ ಪರ ಶಫಾಲಿ ವರ್ಮಾ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.