ಮುಂಬಯಿ, ಎ.30: ಹಾಲಿ ಆವೃತ್ತಿಯ ಐಪಿಎಲ್(IPL 2026)ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ತಂಡ ಆ ಬಳಿಕ ಸತತ ಸೋಲಿಗೆ ತುತ್ತಾಯಿತು. ಋತುವಿನ ಆರನೇ ಸೋಲನ್ನು ಅನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು 6 ಪಂದ್ಯಗಳು ಬಾಕಿ ಇವೆ. ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಎಂಬ ವರದಿ ಇಲ್ಲಿದೆ.
8 ಪಂದ್ಯಗಳ ಪೈಕಿ 2 ಪಂದ್ಯ ಗೆದ್ದಿರುವ ಮುಂಬೈ ನಾಲ್ಕು ಅಂಕಗಳನ್ನು ಹೊಂದಿದೆ. ತಂಡ ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ, 16 ಅಂಕ ಗಳಿಸಲಿದೆ. ತಮ್ಮ ಉಳಿದ ಆರು ಪಂದ್ಯಗಳಲ್ಲಿ ಐದು ಗೆದ್ದರೆ, 14 ಅಂಕಗಳನ್ನು ಹೊಂದಿರುತ್ತಾರೆ. ಅದು ಪ್ಲೇ ಆಫ್ ಪ್ರವೇಶಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಮುಂಬೈಗೆ ಮುಂದಿನ ಎಲ್ಲ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಮುಂಬೈ ತಂಡವು ಮೇ 2 ರಂದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದು, ನಂತರ ಮೇ 4 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿಗೆ ಮರಳಲಿದೆ. ನಂತರ ಅವರು ತಮ್ಮ ಮುಂದಿನ ಮೂರು ಪಂದ್ಯಗಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 10 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ, ಮೇ 14 ರಂದು ಧರ್ಮಶಾಲಾದಲ್ಲಿ ಪಿಬಿಕೆಎಸ್ ವಿರುದ್ಧ ಮತ್ತು ಮೇ 20 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧ. ಮೇ 24 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕೊನೆಯ ಗುಂಪು ಪಂದ್ಯಕ್ಕಾಗಿ ಮುಂಬೈ ತಂಡವು ತವರಿನಲ್ಲಿ ಆಡಲಿದೆ.
GT vs RCB: ಇಂದಿನ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಹಾರ್ದಿಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ರಿಕೆಲ್ಟನ್ (ಔಟಾಗದೇ 123) ಅಜೇಯ ಶತಕ ದಾಖಲಿಸಿದರು. ಅವರ ಅಮೋಘ ಆಟದ ಬಲದಿಂದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 243 ರನ್ ಗಳಿಸಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಆರಂಭಿಕರಾದ ಅಭಿಷೇಕ್ ಶರ್ಮಾ (45) ಹಾಗೂ ಟ್ರಾವಿಸ್ ಹೆಡ್ (76) ಬಿರುಸಿನ ಬ್ಯಾಟಿಂಗ್ ಮೂಲಕ ಮೊದಲ ವಿಕೆಟ್‌ಗೆ ಕೇವಲ 8.4 ಓವರ್‌ಗಳಲ್ಲಿ 129 ರನ್ ಸೇರಿಸಿದರು. ಅವರಿಬ್ಬರ ನಿರ್ಗಮನದ ಬಳಿಕ, ಹೆನ್ರಿಚ್ ಕ್ಲಾಸೆನ್ (ಔಟಾಗದೇ 65) ಕೂಡ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿರು. ಅಂತಿಮವಾಗಿ ತಂಡ 18.4 ಓವರ್‌ಗಳಲ್ಲಿ 249 ರನ್ ಬಾರಿಸಿ 6 ವಿಕೆಟ್ ಅಂತರದ ಗೆಲುವು ಸಾಧಿಸಿತು.