ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಬಾಲ್‌ನಲ್ಲಿ ಎರಡು ಬಾರಿ ನಿತೀಶ್ ರಾಣಾ ಔಟ್ ಆಗಿದ್ದೇಗೆ? ನಿಯಮ ಏನು ಹೇಳುತ್ತದೆ?

IPL 2026: ಮೇ 5 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಿಎಸ್‌ಕೆಗೆ 156 ರನ್‌ಗಳ ಗುರಿಯನ್ನು ನೀಡಿತ್ತು, ಸುಲಭವಾಗಿ ರನ್‌ ಬೆನ್ನತ್ತಿದ ಸಿಎಸ್‌ಕೆ ದೆಹಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ಸಂಗ್ರಹ ಚಿತ್ರ

ನವದೆಹಲಿ: ಮೇ 5 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವೆ ಪಂದ್ಯ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಿಎಸ್‌ಕೆಗೆ 156 ರನ್‌ಗಳ ಗುರಿಯನ್ನು ನೀಡಿತ್ತು, ಸುಲಭವಾಗಿ ರನ್‌ ಬೆನ್ನತ್ತಿದ ಸಿಎಸ್‌ಕೆ ದೆಹಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ ವೇಳೆ ಅಚ್ಚರಿ ಹಾಗೂ ವಿವಾದಾತ್ಮಕ ಘಟನೆ ನಡೆದಿದ್ದು, ನಿತೀಶ್ ರಾಣಾ (Nitish Kumar) ಒಂದೇ ಚೆಂಡಿನಲ್ಲಿ ಎರಡು ರೀತಿಯಲ್ಲಿ ಔಟ್ ಆಗಿದ್ದಾರೆ.

ವಿಡಿಯೋ ನೋಡಿ



ಮೂರನೇ ಕ್ರಮಾಂಕಕ್ಕೆ ಬ್ಯಾಟಿಂಗ್‌ಗೆ ಬಂದ ರಾಣಾ, 13 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದರು, ಎರಡು ಬೌಂಡರಿಗಳನ್ನು ಬಾರಿಸಿದ್ದರು. ಪಂದ್ಯದ ಹತ್ತನೇ ಓವರ್ ಅನ್ನು ನೂರ್ ಅಹ್ಮದ್ ಬೌಲಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ, ನಿತೀಶ್ ರಾಣಾ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಕಡೆಗೆ ಬ್ಯಾಟ್ ಬೀಸಿದರು. ಅಲ್ಲಿ ನಿಂತಿದ್ದ ಕಾರ್ತಿಕ್ ಶರ್ಮಾ ಈ ಚೆಂಡನ್ನು ಕ್ಯಾಚ್ ಹಿಡಿದರು, ಮತ್ತು ಔಟ್ ಆದರು. ಚೆಂಡು ಮತ್ತು ಬ್ಯಾಟ್ ಸಂಪರ್ಕಕ್ಕೆ ಬರುವ ಮೊದಲೇ ಸ್ಟಂಪ್‌ಗಳು ಬಿದ್ದಿದ್ದವು ಎಂದು ತಿಳಿದುಬಂದಿದೆ. ರಾಣಾ ಅವರ ಬ್ಯಾಟ್ ಸ್ಟಂಪ್‌ಗಳನ್ನು ತಗುಲಿ ಹಿಟ್ ವಿಕೆಟ್ ಆಗಿ ಔಟ್ ಆದರೊ ಅಥವಾ ಅವರ ಕಾಲು ವಿಕೆಟ್​ಗೆ ತಾಗಿದೆಯೇ ಎಂದು ಸ್ಪಷ್ಟವಾಗಿಲ್ಲ.

ಡೆಡ್ ಬಾಲ್ ಎಂದು ಕರೆಯಬೇಕಿತ್ತೇ?

ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಬೇಕೇ ಅಥವಾ ಬೇಡವೇ ಎಂಬುದು ಎಸೆತಕ್ಕೆ ಹೋಲಿಸಿದರೆ ಬೇಲ್ಸ್ ಬಿದ್ದ ನಿಖರವಾದ ಸಮಯವನ್ನು ಅವಲಂಬಿಸಿರುತ್ತದೆ. ಎಂಸಿಸಿ ನಿಯಮ 20 ರ ಅಡಿಯಲ್ಲಿ, ಗಮನಾರ್ಹವಾದ ಗೊಂದಲ ಉಂಟಾದರೆ ಅಥವಾ "ಬೌಲರ್ ಚೆಂಡನ್ನು ಬೀಳಿಸಿದರೆ ಅಥವಾ ಅದನ್ನು ತಲುಪಿಸದಿದ್ದರೆ" ಅಂಪೈರ್ ಡೆಡ್ ಬಾಲ್ ಎಂದು ಕರೆಯಬಹುದು. ಕಾನೂನು 20.4.2.6 ರ ಪ್ರಕಾರ, "ಸ್ಟ್ರೈಕರ್ ಎಸೆತವನ್ನು ಸ್ವೀಕರಿಸಲು ಅಥವಾ ಸ್ವೀಕರಿಸಲು ತಯಾರಿ ನಡೆಸುವಾಗ ಯಾವುದೇ ಶಬ್ದ ಅಥವಾ ಚಲನೆಯಿಂದ ಅಥವಾ ಇನ್ನಾವುದೇ ರೀತಿಯಲ್ಲಿ ವಿಚಲಿತನಾದಾಗ" ಅಂಪೈರ್ ಡೆಡ್ ಬಾಲ್ ಅನ್ನು ಕರೆ ಮಾಡಿ ಸಂಕೇತಿಸಬೇಕು. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು, ನಿತೀಶ್ ರಾಣಾ ಯಾವರೀತಿ ಔಟ್ ಆದರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

Vishakha Bhat Heggar

View all posts by this author