ಬೆಂಗಳೂರು, ಡಿ. 25: 2026ರಿಂದ 2027ರವರೆಗೆ ನಡೆಯುವ ಐಸಿಸಿಯ ಪ್ರತಿಷ್ಠಿತ ಟೂರ್ನಮೆಂಟ್‌ಗಳಿಗೆ ಪ್ರತಿಷ್ಠಿತ ಅಟೋಮೊಬೈಲ್ ಕಂಪನಿ ಆಗಿರುವ ಹ್ಯುಂಡೈ (Hyundai Motor) ಮೋಟಾರ್ ಕಂಪನಿ ಪ್ರೀಮಿಯರ್ ಪಾರ್ಟನರ್ ಆಗಿ ಕಾರ್ಯನಿರ್ವಹಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆಗೆ ಪಾಲುದಾರಿಕೆ ಮಾಡಿರುವುದಾಗಿ ಘೋಷಿಸಿದೆ.
ಈ ಪಾಲುದಾರಿಕೆಯು ಕ್ರಿಕೆಟ್ ಜಗತ್ತಿನಲ್ಲಿ ಹ್ಯುಂಡೈ ಮೋಟಾರ್ ಹೊಂದಿರುವ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. 2011ರಿಂದ 2015ರವರೆಗೆ ಐಸಿಸಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದ ಕಂಪನಿಯು, ಇದೀಗ ಮತ್ತೆ ಐಸಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಪ್ರೀಮಿಯರ್ ಪಾರ್ಟನರ್ ಆಗಿ ಹ್ಯುಂಡೈ ಮೋಟಾರ್, ಐಸಿಸಿಯ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ವಿಶೇಷ ಹಕ್ಕುಗಳು ಮತ್ತು ಅವಕಾಶಗಳನ್ನು ಪಡೆದುಕೊಂಡಿದೆ. ಇದರಲ್ಲಿ 2027ರ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಕೂಡ ಸೇರಿದೆ. ಟಾಸ್ ಹಾಕುವುದು, ಸ್ಟೇಡಿಯಂನಲ್ಲಿ ಬ್ರ್ಯಾಂಡಿಂಗ್ ಮಾಡುವುದು ಮತ್ತು ಅಭಿಮಾನಿಗಳಿಗೆ ವಿಶೇಷ ಅನುಭವಗಳನ್ನು ನೀಡುವುದು ಸೇರಿದಂತೆ ವಿಶೇಷ ಹಕ್ಕುಗಳನ್ನು ಹ್ಯುಂಡೈ ಸಂಸ್ಥೆಯು ತನ್ನದಾಗಿಸಿಕೊಂಡಿದೆ.
ಈ ಕುರಿತು ಮಾತನಾಡಿದ ಹ್ಯುಂಡೈ ಮೋಟಾರ್ ಕಂಪನಿಯ ಅಧ್ಯಕ್ಷ ಮತ್ತು ಸಿಇಓ ಜೋಸ್ ಮುನೋಜ್ ಅವರು, “ಕ್ರಿಕೆಟ್ ಮತ್ತು ಹ್ಯುಂಡೈ ಇಬ್ಬರೂ ಅತ್ಯುತ್ತಮವಾಗಿ ಡ್ರೈವ್ ಮಾಡುತ್ತಿದ್ದು, ಪ್ರತೀ ಸವಾಲನ್ನು ಎದುರಿಸಿ ಎದ್ದೇಳುವ ಸ್ಥೈರ್ಯವನ್ನು ಹೊಂದಿವೆ. ಐಸಿಸಿ ಜೊತೆಗಿನ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಮತ್ತು ಜಾಗತಿಕವಾಗಿ ಎರಡು ಬಿಲಿಯನ್‌ಗೂ ಹೆಚ್ಚು ಉತ್ಸಾಹಿ ಅಭಿಮಾನಿಗಳ ಜೊತೆ ಗಾಢ ಸಂಪರ್ಕ ಹೊಂದುತ್ತೇವೆ. ಕ್ರಿಕೆಟ್ ಜೀವನಶೈಲಿಯೇ ಆಗಿರುವ ಭಾರತದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಪಾಲುದಾರಿಕೆಯು ನಮ್ಮ ಗ್ರಾಹಕರು ಮತ್ತು ಪ್ರೇಕ್ಷಕರ ಜೊತೆ ನಮ್ಮ ಸಂಪರ್ಕವನ್ನು ಗಾಢಗೊಳಿಸುತ್ತದೆ. ಈ ಮಹತ್ವದ ಪಂದ್ಯಾವಳಿಗಳಲ್ಲಿ ಒಟ್ಟಿಗೆ ಅವಿಸ್ಮರಣೀಯ ಅನುಭವಗಳನ್ನು ಸೃಷ್ಟಿಸಲು ಎದುರುನೋಡುತ್ತಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ 190 ರನ್ ಸಿಡಿಸಿದ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂದ ಶಶಿ ತರೂರ್!
“ಕ್ರಿಕೆಟ್ ಜಾಗತಿಕವಾಗಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಎರಡು ಬಿಲಿಯನ್‌ಗೂ ಹೆಚ್ಚು ಅಭಿಮಾನಿಗಳು ಐಸಿಸಿಯ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾರೆ. ಈ ಜಾಗತಿಕ ಮಟ್ಟದ ಪಂದ್ಯಾವಳಿಗಳು ಡಿಜಿಟಲ್ ಮತ್ತು ಸ್ಟೇಡಿಯಂಗಳಲ್ಲಿ ಅಭಿಮಾನಿಗಳ ಜೊತೆ ತೊಡಗಿಸಿಕೊಳ್ಳಲು ಅತ್ಯುತ್ತಮ ಅವಕಾಶ ನೀಡುತ್ತವೆ. ಹ್ಯುಂಡೈಯನ್ನು ಪ್ರೀಮಿಯರ್ ಪಾರ್ಟನರ್ ಆಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಜೊತೆಯಾಗಿ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಲು ಎದುರುನೋಡುತ್ತಿದ್ದೇವೆ. ಇದೀಗ ನಾವು ಒಗ್ಗಟ್ಟಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇವೆ” ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದರು.