ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕ್ರಿಕೆಟಿಗ ಅಯ್ಯರ್‌ ಜತೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದೇನೆ; ಬಾಲಿವುಡ್‌ ನಟಿಯ ಸ್ಫೋಟಕ ಹೇಳಿಕೆ

ಶ್ರೇಯಸ್‌ ಅಯ್ಯರ್‌ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದರು. ಪಂಜಾಬ್‌ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ 6 ರನ್‌ ಅಂತರದಿಂದ ಸೋತು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿತ್ತು.

ಮುಂಬಯಿ: ಭಾರತ ಕ್ರಿಕೆಟ್‌ ತಂಡ ಸ್ಟಾರ್‌ ಆಟಗಾರ ಶ್ರೇಯಸ್‌ ಅಯ್ಯರ್‌(Shreyas Iyer) ಕುರಿತು ಬಾಲಿವುಡ್​​ ನಟಿ ಎಡಿನ್‌ ರೋಸ್(Edin Rose) ಅಚ್ಚರಿಯ ಹೇಳಿಕೆ ನೀಡಿದ್ದು, ಅಯ್ಯರ್ ನನ್ನ ಪತಿ. ನಮ್ಮಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನಟಿಯ ಈ ಸ್ಫೋಟಕ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಎಡಿನ್ ರೋಸ್, ನನ್ನ ಮನಸ್ಸಿನಲ್ಲಿ, ನಾನು ಈಗಾಗಲೇ ಶ್ರೇಯಸ್ ಅಯ್ಯರ್​ರನ್ನು ಮದುವೆಯಾಗಿದ್ದೇನೆ. ನಾನು ಅವರ ಮಕ್ಕಳ ತಾಯಿ ಎಂದು ನಂಬಿದ್ದೇನೆ. ನಾನು ಅವರನ್ನು ಇಷ್ಟಪಡಲು ಬಲವಾದ ಕಾರಣಗಳಿವೆ. ಶ್ರೇಯಸ್​ಗೆ ಒಳ್ಳೆಯ ಎತ್ತರ ಮತ್ತು ಅವರಿಗೆ ಉತ್ತಮ ಮೈಬಣ್ಣವಿದೆ. ಅವರು ಯಾವಾಗಲೂ ಗಡ್ಡ ಬಿಡುತ್ತಾರೆ ಮತ್ತು ಉತ್ತಮ ಸ್ನಾಯುಗಳನ್ನು ಹೊಂದಿದ್ದಾರೆ. ಶ್ರೇಯಸ್ ಕೂಡ ನನ್ನ ತಂದೆಯಂತೆ ದಕ್ಷಿಣ ಭಾರತೀಯ. ಇನ್ನೇನು ಬೇಕು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಸಲಿಗೆ ಎಡಿನ್‌ ರೋಸ್ ಮತ್ತು ಶ್ರೇಯಸ್‌ ಅಯ್ಯರ್‌ಗೆ ಯಾವುದೇ ಸಂಬಂಧವಿಲ್ಲ. ಇವರಿಬ್ಬರು ಮದುವೆ ಕೂಡ ಆಗಿಲ್ಲ. ಆದರೆ ಎಡಿನ್ ರೋಸ್ ಅವರ ಈ ಹೇಳಿಕೆ ಭಾರೀ ವೈರಲ್‌ ಆಗಿದೆ.

ಆಗಸ್ಟ್ 20, 1998 ರಂದು ಜನಿಸಿದ ಎಡಿನ್ ರೋಸ್ ಬರ್ಮಾ ಮತ್ತು ಕರ್ನಾಟಕದ ನಂಟು ಕೂಡ ಇದೆ. 20 ನೇ ವಯಸ್ಸಿನಲ್ಲಿ, ಮುಂಬೈಗೆ ತೆರಳಿದ ಅವರು ಗಾಂಧಿ ಬಾತ್ ಎಂಬ ದಿಟ್ಟ ವೆಬ್ ಸರಣಿಯಲ್ಲಿ ವಸುಧಾ ಪಾತ್ರ ಮಾಡಿದ್ದರು. ತೆಲುಗು ಚಿತ್ರರಂಗದ ಮೂಲಕ ಇವರು ಖ್ಯಾತಿ ಗಳಿಸಿದರು. ನಟ-ನಿರ್ಮಾಪಕ ರವಿತೇಜ ಅವರ ರಾವಣಾಸುರ ಸಿನೆಮಾದಲ್ಲಿ ಐಟಂ ಸಾಂಗ್‌ ಒಂದರಲ್ಲಿ ಕಾಣಿಸಿಕೊಂಡಿದ್ದರು.

ಶ್ರೇಯಸ್‌ ಅಯ್ಯರ್‌ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದರು. ಪಂಜಾಬ್‌ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ 6 ರನ್‌ ಅಂತರದಿಂದ ಸೋತು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್‌ ನಡೆಸಿದ್ದ ಅಯ್ಯರ್‌ ಫೈನಲ್‌ನಲ್ಲಿ ಕೇವಲ ಒಂದು ರನ್‌ಗೆ ಔಟಾಗಿದ್ದರು. ಇವರ ವಿಕೆಟ್‌ ಪತನ ಪಂಜಾಬ್‌ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!