ರಮೇಶ್ ಕೋಟೆ
ಶಾಲಾಮಟ್ಟದಲ್ಲಿಯೇ ಮಕ್ಕಳಿಗೆ ಹಾಕಿ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು
ವಿಶ್ವವಾಣಿ ಸಂದರ್ಶನದಲ್ಲಿ ಪಿ.ಆರ್.ಶ್ರೀಜೇಶ್ ಮನದಾಳದ ಮಾತು
ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂಬ ಹೆಗ್ಗಳಿಕೆ ಇದ್ದರೂ, ದೇಶದಲ್ಲಿ ಕ್ರಿಕೆಟ್ ಹೆಚ್ಚಿನ ಜನಮನ್ನಣೆಯನ್ನು ಪಡೆದುಕೊಂಡಿದೆ. ಭಾರತ ಹಾಕಿ ತಂಡ ಒಟ್ಟು 8 ಬಾರಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರೂ ಐಪಿಎಲ್ ಸೇರಿದಂತೆ ಇತರ ಕ್ರಿಕೆಟ್‌ನಿಂದಾಗಿ ಹಾಕಿ ಕ್ರೀಡೆಗೆ ಸಿಗಬೇಕಾದ ರಾಷ್ಟ್ರ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಇತ್ತೀಚೆಗೆ ಮುಗಿದಿದ್ದ ‘ಸುಬ್ರೋತೋ ಕಪ್ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಿ’ಯ ಫೈನಲ್ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದ ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ‘ವಿಶ್ವವಾಣಿ’ ಜೊತೆ ಮಾತನಾಡಿದರು.
ಪ್ರಸ್ತುತ ಭಾರತದಲ್ಲಿನ ಹಾಕಿ ಕ್ರೀಡೆಯ ಸ್ಥಿತಿ-ಗತಿ, ಬೆಳವಣಿಗೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಅವರು ಇಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಹಾಕಿ ದಿಗ್ಗಜನ ಜೊತೆಗಿನ ಮಾತುಕತೆಯ ಪ್ರಮುಖ ಅಂಶಗಳು ಇಲ್ಲಿವೆ:
ಭಾರತೀಯ ವಾಯುಸೇನೆಯು ದಶಕಗಳಿಂದ ಸೊಬ್ರತೋ ಕಪ್ ಟೂರ್ನಿ ನಡೆಸುತ್ತಿದೆ. ಈ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯ?
ಬಾಲ್ಯದಿಂದಲೂ ಈ ಟೂರ್ನಿಯ ಬಗ್ಗೆ ನನಗೆ ಗೊತ್ತು. ನಾನು ಮೂಲತಃ ಕೇರಳದವನಾಗಿದ್ದು, ಶಾಲಾ ಹಂತದ ಕಲಿಕೆಯ ವೇಳೆಯೇ ಹಲವು ಕ್ರೀಡೆಗಳತ್ತ ಒಲವನ್ನು ಬೆಳೆಸಿಕೊಂಡವನು. ಸುಬ್ರತೋ ಕಪ್ ಫುಟ್ಬಾಲ್ ಅದ್ಭುತ ಟೂರ್ನಿಯಾಗಿದೆ. ಪ್ರತಿಯೊಂದು ರಾಜ್ಯ ಈ ಟೂರ್ನಿಯಲ್ಲಿ ಭಾಗವಹಿಸಲು ಹಾತೊರೆಯುತ್ತದೆ. ಶಾಲಾ ಬಾಲಕರು ಅದ್ಭುತ ಪ್ರದರ್ಶನವನ್ನು ತೋರ್ಪಡಿಸಲು ಪೂರಕವಾದ ವಾತಾವರಣ ಈ ಟೂರ್ನಿಯಿಂದ ದೊರೆಯುತ್ತದೆ.
ಇದನ್ನೂ ಓದಿ: Asia Cup 2025: ತಾವು ಖರೀದಿಸಿದ ಮೊಟ್ಟ ಮೊದಲ ಕಾರು ಯಾವುದೆಂದು ರಿವೀಲ್ ಮಾಡಿದ ಶುಭಮನ್ ಗಿಲ್!
ನಿಮ್ಮ ಹಾಕಿ ಕ್ರೀಡಾ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಯಾವುದು?
200455ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಹಾಕಿ ತಂಡದ ಜೆರ್ಸಿ ಹಾಕಿದ್ದು ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣ. ಇದಲ್ಲದೆ ಏಷ್ಯಾ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್‌ನಲ್ಲಿ ನಮ್ಮ ಭಾರತ ಹಾಗೂ ಪಾಕಿಸ್ತಾನ ತಂಡಗಳು ಚಿನ್ನದ ಪದಕವನ್ನು ಗೆದ್ದಿದ್ದೆವು. ಅಲ್ಲದೆ 2021 ಹಾಗೂ 2024ರ ಸತತ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕಂಚಿನ ಪದಕ ಗೆದ್ದಿದ್ದು ಕೂಡ ಅದ್ಭುತವಾಗಿತ್ತು. ಈ ಎರಡೂ ಕ್ರೀಡಾಕೂಟಗಳಲ್ಲಿ ಭಾರತ ಹಾಕಿ ತಂಡದ ಸದಸ್ಯನಾಗಿದ್ದು ನನ್ನ ಪಾಲಿಗೆ ಅದೃಷ್ಟ ಎಂದೇ ಹೇಳಬಹುದು.
ಭಾರತದಲ್ಲಿ ಕ್ರಿಕೆಟ್‌ಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಆದರೆ ಹಾಕಿ ಕ್ರೀಡೆಗೆ ಕ್ರಿಕೆಟ್‌ನಷ್ಟೇ ದೊಡ್ಡ ಪ್ರಮಾಣದ ಬೆಂಬಲ ಏಕೆ ಸಿಗುತ್ತಿಲ್ಲ?
ಕ್ರೀಡೆಯನ್ನು ಪ್ರಚಾರ ಮಾಡುವ ಹಾದಿ ಹಾಗೂ ಜನರು ಕ್ರೀಡೆಯನ್ನು ನೋಡುವ ದೃಷ್ಟಿಯ ಮೇಲೆ ಇದು ನಿರ್ಧಾರವಾಗುತ್ತದೆ. ಕ್ರಿಕೆಟ್ ತುಂಬಾ ಖ್ಯಾತಿಯನ್ನು ಪಡೆದಿದೆ, ಆದರೆ ಹಾಕಿ ಪಂದ್ಯ ವು ಭಾವನೆಗಳಿಂದ ಕೂಡಿರುವ ಒಂದು ಆಟ. ಹಾಕಿ ಟೂರ್ನಿ ನಡೆದಾಗ ಭಾರತೀಯ ಅಭಿಮಾನಿ ಗಳಿಂದ ನಮಗೆ ದೊಡ್ಡ ಮಟ್ಟದ ಬೆಂಬಲ ಸಿಗುತ್ತದೆ. ಅದರಲ್ಲಿಯೂ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತವಾಗಿ ಎರಡು ಪದಕ ಗೆದ್ದಾಗಲೂ ಪ್ರಧಾನಿ ಮೋದಿ ಅವರು ನಮ್ಮನ್ನು ಆಹ್ವಾನಿಸಿ, ಶ್ಲಾಘಿಸಿದ್ದರು. ಯಾವುದೇ ಪದಕ ಗೆದ್ದರೂ ಅದು ನಮಗೆ ವಿಶೇಷ ಹಾಗೂ ಭಾವನಾತ್ಮ ಕತೆಯಿಂದ ಕೂಡಿದೆ ಎಂದು ಅವರು ಉಲ್ಲೇಖಿಸಿದ್ದರು.
ಹಾಕಿ ಟೂರ್ನಿಗಳನ್ನು ಟಿವಿ ಯಲ್ಲಿ ಪ್ರಸಾರ ಮಾಡಲಾಗುತ್ತಿದೆ ಹಾಗೂ ಈಗೀಗ ಹೆಚ್ಚಿನ ಸಂಖ್ಯೆ ಯಲ್ಲಿ ಹಾಕಿಯನ್ನು ವೀಕ್ಷಿಸುತ್ತಿದ್ದಾರೆ. ಆ ಮೂಲಕ ಹಾಕಿ ಕೂಡ ಹೆಚ್ಚಿನ ಪ್ರಚಾರವನ್ನು ಪಡೆಯ ತೊಡಗಿದೆ.
ನಿಮ್ಮ ಮುಂದಿನ ಪಯಣ ಏನು?
ಹಾಕಿ ವೃತ್ತಿ ಜೀವನವನ್ನು ಮುಗಿಸಿದ್ದೇನೆ. ಇದೀಗ ಕೋಚಿಂಗ್ ವೃತ್ತಿ ಜೀವನವನ್ನು ಆರಂಭಿಸಿದ್ದೇನೆ. ೨೧ರ ವಯೋಮಾನದ ತಂಡಕ್ಕೆ ಕೋಚ್ ಆಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕೋಚಿಂಗ್ ಮೂಲಕ ಹಾಕಿಗೆ ಇನ್ನಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಎದುರು ನೋಡು ತ್ತಿದ್ದೇನೆ.
ಹಾಕಿ ಇಂಡಿಯಾ ಕಾರ್ಯ ಶ್ಲಾಘನೀಯ
ನಾವು ಹಾಕಿ ಕ್ರೀಡೆಯಲ್ಲಿ ಸರಿಯಾದ ಮಾರ್ಗದಲ್ಲಿದ್ದೇವೆ ಹಾಗೂ ಸತತ ಪದಕಗಳನ್ನು ಗೆಲ್ಲು ತ್ತಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಸತತ ಪದಕಗಳನ್ನು ಜಯಿಸಿದ್ದೇವೆ. ಇತ್ತೀಚೆಗೆ ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದೇವೆ. ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳನ್ನು ನಾವು ಹಾಕಿ ಕ್ರೀಡೆಗೆ ಪರಿಚಯಿಸಬೇಕಾಗಿದೆ ಹಾಗೂ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಉತ್ತಮ ವೇದಿಕೆಯನ್ನೂ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ‘ಹಾಕಿ ಇಂಡಿಯಾ’ ಅದ್ಭುತ ಕೆಲಸವನ್ನು ಮಾಡುತ್ತಿದೆ ಎಂದು ಪಿ.ಆರ್.ಶ್ರೀಜೇಶ್ ಹೇಳಿದ್ದಾರೆ.
*
ಸುಬ್ರತೋ ಕಪ್ -ಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಅದ್ಭುತ ಪಾಠ ಸಿಕ್ಕಿದಂತಾ ಗುತ್ತದೆ. ಪ್ರೇಕ್ಷಕರ ಒತ್ತಡ ಹಾಗೂ ಫೈನಲ್ ಪಂದ್ಯದ ಒತ್ತಡವನ್ನು ಹೇಗೆ ನಿಭಾಯಿಸ ಬೇಕೆಂಬು ದನ್ನು ಇಂತಹ ಟೂರ್ನಿಗಳಲ್ಲಿ ಕಲಿಯಲು ಸಾಧ್ಯ.
-ಪಿ.ಆರ್.ಶ್ರೀಜೇಶ್, ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್