ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ': ಫ್ರಾಂಚೈಸಿ ನಂಬಿಕೆಗೆ ಯಶ್ ದಯಾಳ್ ಕೃತಜ್ಞತೆ

Yash Dayal: 2025ರಲ್ಲಿ ಆರ್‌ಸಿಬಿ (RCB) ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಾಗ ಅದರಲ್ಲಿ ದಯಾಳ್‌ ಪ್ರಮುಖ ಪಾತ್ರ ವಹಿಸಿದ್ದರು. ಅವರು ಆ ಆವೃತ್ತಿಯ 15 ಪಂದ್ಯಗಳಲ್ಲಿ 36.15ರ ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು ಮತ್ತು 9.59ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದರು.

Yash Dayal

ಮುಂಬೈ, ನ.23: ಕಳೆದ ಒಂದು ವರ್ಷದಲ್ಲಿ ತಾನು ಕಠಿಣ ಸನ್ನಿವೇಶಗಳನ್ನು ಎದುರಿಸಿದ್ದರೂ, ಐಪಿಎಲ್-2027ರ ಆವೃತ್ತಿಗೆ ತಮ್ಮನ್ನು 20 ಆಟಗಾರರ ಪ್ರಮುಖ ಗುಂಪಿನಲ್ಲಿ ಉಳಿಸಿಕೊಳ್ಳುವ ಮೂಲಕ ತಮ್ಮ ಮೇಲೆ ನಂಬಿಕೆ ಇರಿಸಿದ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ತಂಡಕ್ಕೆ ಯಶ್ ದಯಾಳ್ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಮುಂದಿನ ಆವೃತ್ತಿಯಲ್ಲಿ ತಮ್ಮ ತಂಡಕ್ಕಾಗಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡುವುದಾಗಿ ಅವರು ಭರವಸೆ ನೀಡಿದ್ದಾರೆ.

"ಇದು ನನಗೆ ಬಹಳ ದೊಡ್ಡ ವಿಷಯ. ಆರ್‌ಸಿಬಿ ನನ್ನನ್ನು ಉಳಿಸಿಕೊಳ್ಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆರ್‌ಸಿಬಿ ನನ್ನನ್ನು ಉಳಿಸಿಕೊಂಡು, ನನ್ನ ಮೇಲೆ ನಂಬಿಕೆ ಇಟ್ಟಿದೆ. ಹಾಗಾಗಿ, ಅವರಿಗಾಗಿ ಉತ್ತಮ ಪ್ರದರ್ಶನ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನನಗೆ ಇರುವ ಅನುಭವದ ಆಧಾರದ ಮೇಲೆ, ಈ ಋತುವಿನಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ನೂರಕ್ಕೆ ನೂರರಷ್ಟು ಶ್ರಮಿಸುತ್ತೇನೆ," ಎಂದು ದಯಾಳ್ ತಿಳಿಸಿದರು.

ಡಿಆರ್‌ಎಸ್ ನಿರ್ಧಾರ ಯಶಸ್ಸು; ಭಾಂಗ್ರಾ ನೃತ್ಯ ಮಾಡಿ ಸಂಭ್ರಮಿಸಿದ ಶುಭಮನ್ ಗಿಲ್

'ಟೈಮ್ಸ್ ಆಫ್ ಇಂಡಿಯಾ' (TOI) ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ದಯಾಳ್‌ ಈ ವಿಚಾರವನ್ನು ತಿಳಿಸಿದರು. ಪ್ರಸಕ್ತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ, ಹಾಲಿ ಚಾಂಪಿಯನ್ ಜಾರ್ಖಂಡ್ ವಿರುದ್ಧ ಉತ್ತರ ಪ್ರದೇಶ ತಂಡವು 12 ರನ್‌ಗಳ ಜಯ ಸಾಧಿಸುವಲ್ಲಿ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ನಾಲ್ಕು ಓವರ್‌ಗಳಲ್ಲಿ 29 ರನ್‌ ನೀಡಿ 2 ವಿಕೆಟ್‌ಗಳನ್ನು ಪಡೆದಿದ್ದರು.

ಈ ಎಡಗೈ ವೇಗದ ಬೌಲರ್, 2025ರಲ್ಲಿ ಆರ್‌ಸಿಬಿ (RCB) ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಾಗ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಆ ಆವೃತ್ತಿಯ 15 ಪಂದ್ಯಗಳಲ್ಲಿ 36.15ರ ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು ಮತ್ತು 9.59ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದರು. ಆದರೆ, ಕೆಲವು ಕಾನೂನು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರಿಂದ, ಅವರು ಐಪಿಎಲ್-2026 (IPL-2026) ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು.

ಉತ್ತರ ಪ್ರದೇಶ (UP) ಪರವಾಗಿ ದೇಶೀಯ ಪಂದ್ಯಾವಳಿಗಳಲ್ಲಿ ಮತ್ತೆ ಆಡುತ್ತಿರುವುದನ್ನು ದಯಾಳ್ ಸಹಜವಾಗಿಯೇ ಆನಂದಿಸುತ್ತಿದ್ದಾರೆ. ಈ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಅವರು, "ಹೌದು, ನಾನಿದನ್ನು ಆನಂದಿಸುತ್ತಿದ್ದೇನೆ. ನನಗೆ ಕೇವಲ ಕ್ರಿಕೆಟ್ ಆಡಬೇಕಿದೆ ಅಷ್ಟೇ. ಕ್ರಿಕೆಟ್ ನನಗೆ ಸರ್ವಸ್ವ. ನಾನು ಗೆಲ್ಲುತ್ತೇನೆಯೋ ಅಥವಾ ಸೋಲುತ್ತೇನೆಯೋ ಎಂಬುದು ಮುಖ್ಯವಲ್ಲ. ನನ್ನ ಪ್ರದರ್ಶನ ಹೇಗಿರುತ್ತದೆ ಎಂಬುದು ಕೂಡ ಮುಖ್ಯವಲ್ಲ. ನಾನು ನನ್ನ ಜೀವನವನ್ನು ಆನಂದಿಸಲು ಬಯಸುತ್ತೇನೆ, ಮತ್ತು ಕ್ರಿಕೆಟೇ ನನ್ನ ಜೀವನ," ಎಂದು ಹೇಳಿದರು.

ಆರ್‌ಸಿಬಿ ತಂಡದಲ್ಲಿ ಉಳಿದುಕೊಂಡ ಕ್ರಿಕೆಟಿಗರು

ರಜತ್ ಪಾಟೀದಾರ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ಕ್ರುನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ದೇವತದ್ ಪಡಿಕ್ಕಲ್ ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜೇಕಬ್ ಡುಫಿ, ಜೋರ್ಡನ್ ಕಾಕ್ಸ್, ರಸಿಕ್ ಸಲಾಮ್ ಧರ್, ಸುಯೇಶ್ ಶರ್ಮಾ, ವಿಕಿ ಒಟ್ಸಾವಾಲ್, ಅಭಿನಂದನ್ ಸಿಂಗ್, ಕಾನಿಶ್ಕ್ ಚೌಹ್ವಾಣ್, ಯಶ್ ದಯಾಳ್.