ಅಹಮದಾಬಾದ್, ಮೇ 16: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ತನ್ನ ಮುಂಬರುವ ತ್ರೈಮಾಸಿಕ ಸಭೆಗಳನ್ನು ಭಾರತದಲ್ಲಿ ಕರೆಯಲಿದ್ದು, ಮುಖ್ಯ ಕಾರ್ಯನಿರ್ವಾಹಕರ ಸಮಿತಿಯು ಮೇ 21 ರಂದು ವರ್ಚುವಲ್ ಅಧಿವೇಶನ ನಡೆಸಲಿದೆ. ನಂತರ ಮೇ 30-31 ರಂದು ಅಹಮದಾಬಾದ್(ICC meeting in Ahmedabad)ನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 final) ಫೈನಲ್ ವೇಳೆ ಐಸಿಸಿ ಮಂಡಳಿಯ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲತಃ ಮಾರ್ಚ್-ಏಪ್ರಿಲ್‌ನಲ್ಲಿ ಕತಾರ್‌ನ ದೋಹಾದಲ್ಲಿ ನಿಗದಿಯಾಗಿದ್ದ ಸಭೆಗಳನ್ನು ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಮರು ನಿಗದಿಪಡಿಸಿ ಭಾರತಕ್ಕೆ ಸ್ಥಳಾಂತರಿಸಲಾಯಿತು. ಆದಾಗ್ಯೂ, ಅಹಮದಾಬಾದ್‌ಗೆ ಸ್ಥಳಾಂತರಗೊಂಡಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಭಾಗವಹಿಸುವಿಕೆ ಸಂದೇಹಕ್ಕೆ ದೂಡಿದೆ.
ಸಾಮಾನ್ಯವಾಗಿ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಉನ್ನತ ಮಟ್ಟದ ಮಂಡಳಿ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ಮತ್ತು ಆಯಾ ಕ್ರಿಕೆಟ್ ಮಂಡಳಿಗಳ ನಡುವಿನ ದೀರ್ಘಕಾಲಿಕ ಉದ್ವಿಗ್ನ ಸಂಬಂಧಗಳನ್ನು ಗಮನಿಸಿದರೆ, ನಖ್ವಿ ಅವರ ಪ್ರಯಾಣವು ಹೆಚ್ಚು ಅನಿಶ್ಚಿತವಾಗಿಯೇ ಉಳಿದಿದೆ.
ಐಪಿಎಲ್ ಫೈನಲ್‌ನಲ್ಲಿ ಮೊಹ್ಸಿನ್ ನಖ್ವಿ?
ಪಾಕಿಸ್ತಾನದ ವರದಿಗಳ ಪ್ರಕಾರ, ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ಗೆ ಹಾಜರಾಗಲು ನಖ್ವಿ ಅವರಿಗೆ ಅಧಿಕೃತ ಆಹ್ವಾನವೂ ಬಂದಿದೆ ಎಂದು ಹೇಳಿದೆ. ಆದಾಗ್ಯೂ, ಈ ಬೆಳವಣಿಗೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಅಥವಾ ದೃಢೀಕರಿಸಲು ಸಾಧ್ಯವಿಲ್ಲ.
ಪಾಕಿಸ್ತಾನ ಮಂಡಳಿಯ ಉಸ್ತುವಾರಿ ವಹಿಸಿಕೊಂಡಾಗಿನಿಂದ ನಖ್ವಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವಿನ ಸಂಬಂಧಗಳು ಸ್ಪಷ್ಟವಾಗಿ ವಿವಾದಗಳಿಂದಲೇ ತುಂಬಿದೆ.
RCB vs PBKS: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿಯ ಪ್ಲೇಯಿಂಗ್ 11 ಹೇಗಿರಲಿದೆ?
ದುಬೈನಲ್ಲಿ ನಡೆದ ಏಷ್ಯಾ ಕಪ್‌ನ ಕೊನೆಯಲ್ಲಿ ವಿಲಕ್ಷಣ ಮತ್ತು ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿತು, ಅಲ್ಲಿ ವಿಜೇತ ಭಾರತೀಯ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಮತ್ತು ಪಾಕಿಸ್ತಾನದ ಫೆಡರಲ್ ಆಂತರಿಕ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ನಖ್ವಿ ಅವರಿಂದ ವಿಜೇತರ ಟ್ರೋಫಿಯನ್ನು ಪಡೆಯಲು ನಿರಾಕರಿಸಿತು. ವೇದಿಕೆಯಲ್ಲಿನ ಬಿಕ್ಕಟ್ಟಿನ ನಂತರ, ನಖ್ವಿ ಟ್ರೋಫಿ ಮತ್ತು ಪದಕಗಳೊಂದಿಗೆ ಕ್ರೀಡಾಂಗಣವನ್ನು ತೊರೆದರು. ಅವರ ಸೂಚನೆಯ ಮೇರೆಗೆ ಈಗಲೂ ಟ್ರೋಫಿ ದುಬೈನಲ್ಲಿ ಲಾಕ್ ಆಗಿವೆ. ತರುವಾಯ ಬಿಸಿಸಿಐ ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸಿತು ಮತ್ತು ಐಸಿಸಿಗೂ ದೂರು ನೀಡಿತ್ತು. ಆದರೆ ಇದುವರೆಗೂ ನಖ್ವಿ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಿಲ್ಲ.