ನವದೆಹಲಿ, ಫೆ.4: ಈ ವರ್ಷ ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup Winners)ನ 10 ನೇ ಆವೃತ್ತಿ ನಡೆಯುತ್ತಿದ್ದು, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿರುವುದರಿಂದ ಪಂದ್ಯಾವಳಿ ಉಪಖಂಡಕ್ಕೆ ಮರಳಲಿದೆ.
2024 ರ ಪ್ರಶಸ್ತಿಯನ್ನು ಗೆದ್ದುಕೊಂಡ ನಂತರ ಹಾಲಿ ಚಾಂಪಿಯನ್ ಭಾರತವು ಇತಿಹಾಸ ನಿರ್ಮಿಸಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು. ರೋಹಿತ್ ಶರ್ಮಾ ನೇತೃತ್ವದ ಆ ಗೆಲುವು ಭಾರತಕ್ಕೆ ಎರಡನೇ T20 ವಿಶ್ವಕಪ್ ಕಿರೀಟವನ್ನು ಖಚಿತಪಡಿಸಿತು ಮತ್ತು ಸ್ವರೂಪದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ತನ್ನ ಸ್ಥಾನಮಾನವನ್ನು ಪುನರುಚ್ಚರಿಸಿತು. ಈ ಬಾರಿಯೂ ಗೆದ್ದು ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಕಪ್ ಎತ್ತಿ ಹಿಡಿಯಲಿದೆಯಾ ಎಂದು ಕಾದು ನೋಡಬೇಕಿದೆ.
ಟಿ20 ವಿಶ್ವಕಪ್ ವಿಜೇತ ತಂಡಗಳು ಮತ್ತು ಅವುಗಳ ನಾಯಕರ ಪಟ್ಟಿ
2007: ಭಾರತ
ನಾಯಕ: ಮಹೇಂದ್ರ ಸಿಂಗ್ ಧೋನಿ
2009: ಪಾಕಿಸ್ತಾನ
ನಾಯಕ: ಯೂನಿಸ್ ಖಾನ್
2010: ಇಂಗ್ಲೆಂಡ್
ನಾಯಕ: ಪಾಲ್ ಕಾಲಿಂಗ್‌ವುಡ್
2012: ವೆಸ್ಟ್ ಇಂಡೀಸ್
ನಾಯಕ: ಡೇರೆನ್ ಸ್ಯಾಮಿ
2014: ಶ್ರೀಲಂಕಾ
ನಾಯಕ: ಲಸಿತ್ ಮಾಲಿಂಗ
2016: ವೆಸ್ಟ್ ಇಂಡೀಸ್
ನಾಯಕ: ಡೇರೆನ್ ಸ್ಯಾಮಿ
2021: ಆಸ್ಟ್ರೇಲಿಯಾ
ನಾಯಕ: ಆರನ್ ಫಿಂಚ್
2022: ಇಂಗ್ಲೆಂಡ್
ನಾಯಕ: ಜೋಸ್ ಬಟ್ಲರ್
2024: ಭಾರತ
ನಾಯಕ: ರೋಹಿತ್ ಶರ್ಮಾ
2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಅವರು ಈ ಬಾರಿಯ ಟೂರ್ನಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಭಾರತ ಪಂದ್ಯ ಬಹಿಷ್ಕರಿಸಿದ ಪಾಕ್‌ಗೆ ಕೊಲಂಬೊದಲ್ಲಿ ಮಳೆ ಭೀತಿ!
ಇದೇ ಮೊದಲ ಬಾರಿಗೆ ಇಟಲಿ ತಂಡವು ಆಡಲಿದೆ. ಒಟ್ಟು ನಾಲ್ಕು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿಯೂ ಐದು ತಂಡಗಳಿವೆ. ಒಟ್ಟು ಎಂಟು ತಂಡಗಳು ಸೂಪರ್ ಏಯ್ಟ್ ಹಂತ ಪ್ರವೇಶಿಸಲಿವೆ. ಈ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಆಡಲಿವೆ. ನಾಲ್ಕರ ಘಟ್ಟದ ಪಂದ್ಯಗಳು ಕೋಲ್ಕತ್ತ ಅಥವಾ ಕೊಲಂಬೊ ಮತ್ತು ಮುಂಬೈನಲ್ಲಿ ನಡೆಯಲಿವೆ.