IND vs ENG 5th Test: ಗೆಲುವು ಕಂಡು ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿದ ಕೋಚ್ ಗಂಭೀರ್; ವಿಡಿಯೊ ವೈರಲ್
ತಂಡ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್, ಮಾರ್ನೆ ಮಾರ್ಕೆಲ್ ಸೇರಿ ಕೋಚಿಂಗ್ ಸಿಬ್ಬಂದಿಗಳು ತಬ್ಬಿಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅದರಲ್ಲೂ ಗಂಭೀರ್ ಭಾವುಕರಾಗಿ ಕಣ್ಣೀರು ಕೂಡ ಸುರಿಸಿದರು. ಭಾರತದ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದಕ್ಕಿಂತಲ್ಲೂ ಕೋಚಿಂಗ್ ಸಿಬ್ಬಂದಿಗಳ ಸಂಭ್ರಮ 4 ಪಟ್ಟು ಹೆಚ್ಚಾಗಿತ್ತು. ಈ ಎಲ್ಲ ಸುಂದರ ಕ್ಷಣದ ವಿಡಿಯೊವನ್ನು ಬಿಸಿಸಿಐ ಸೆರೆ ಹಿಡಿದು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಲಂಡನ್: ಭಾರೀ ಕುತೂಹಲ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್(IND vs ENG 5th Test) ನಡುವಣ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತು. ಅಂತಿಮ ಟೆಸ್ಟ್ ಗೆಲ್ಲುತ್ತಿದ್ದಂತೆ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ಕೊಚಿಂಗ್ ಸಿಬ್ಬಂದಿಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೊ ಭಾರೀ ವೈರಲ್ ಆಗಿದೆ.
ಅಂತಿಮ ದಿನದಾಟದ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಹೋದರೂ, ಆ ಬಳಿಕ ಪ್ರಸಿದ್ಧ್ ಹಾಗೂ ಸಿರಾಜ್ ಎಸೆದ ಪ್ರತಿ ಎಸೆತವೂ ನೋಡುಗರ ಎದೆಬಡಿತ ಹೆಚ್ಚಿಸುತ್ತಿತ್ತು. ಪ್ರತಿ ಎಸೆತ, ಪ್ರತಿ ರನ್‌ಗೂ ರೋಚಕತೆ ಹೆಚ್ಚುತ್ತಲೇ ಹೋಯಿತು. ಮತ್ತೊಂದೆಡೆ ಗಸ್ ಆಟ್ಕಿನ್ಸನ್ ಸಿರಾಜ್‌ರ ಎಸೆತವನ್ನು ಸಿಕ್ಸರ್‌ಗಟ್ಟಿ ಭಾರತೀಯರಲ್ಲಿ ಸೋಲಿನ ಭೀತಿ ಉಂಟು ಮಾಡಿದರು. ಆದರೆ ಗೆಲುವಿಗೆ 7 ರನ್ ಬೇಕಿದ್ದಾಗ, ಇನ್ನಿಂಗ್ಸ್‌ನ 86ನೇ ಓವರ್‌ನ ಮೊದಲ ಎಸೆತದಲ್ಲೇ ಆಟ್ಕಿನ್ಸನ್‌ರನ್ನು ಸಿರಾಜ್ ಬೌಲ್ಡ್ ಮಾಡಿದರು. ಇದರೊಂದಿಗೆ ಇಂಗ್ಲೆಂಡ್ ಇನ್ನಿಂಗ್ಸ್‌ಗೆ ತೆರೆಬಿತ್ತು.
𝗕𝗲𝗹𝗶𝗲𝗳. 𝗔𝗻𝘁𝗶𝗰𝗶𝗽𝗮𝘁𝗶𝗼𝗻. 𝗝𝘂𝗯𝗶𝗹𝗮𝘁𝗶𝗼𝗻!
— BCCI (@BCCI) August 4, 2025
Raw Emotions straight after #TeamIndia's special win at the Kennington Oval 🔝#ENGvIND pic.twitter.com/vhrfv8ditL