ICC women’s ODI Rankings: ಬ್ಯಾಟಿಂಗ್ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನಕ್ಕೇರಿದ ಮಂಧನಾ
ದೀಪ್ತಿ ಶರ್ಮಾ ಕೂಡ ಒಂದು ಸ್ಥಾನ ಬಡ್ತಿ ಪಡೆದು ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ 353 ರೇಟಿಂಗ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ತ್ರಿಕೋನ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್‌ಗಳಿಂದ 146 ರನ್ ಮತ್ತು ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಬೌಲಿಂಗ್ ಶ್ರೇಯಾಂಕದಲ್ಲಿ ದೀಪ್ತಿ 4ನೇ ಸ್ಥಾನಿಯಾಗಿದ್ದಾರೆ.


ಮುಂಬಯಿ: ಇತ್ತೀಚೆಗೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ(tri-series) ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಅವರು ನೂತನ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC women’s ODI Rankings) ಎರಡನೇ ಸ್ಥಾನಕ್ಕೆ ಏರಿದ್ದಾರೆ. ಭಾನುವಾರ ನಡೆದಿದ್ದ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಅಮೋಘ ಶತಕ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮಂಧನಾ ಅವರು ಇಂಗ್ಲೆಂಡ್‌ನ ನ್ಯಾಟ್ ಸ್ಕಿವರ್ ಬ್ರಂಟ್ ಅವರನ್ನು ಹಿಂದಿಕ್ಕಿ 727 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದರು. 738 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್‌ಗಿಂತ ಮಂಧನಾ ಕೇವಲ 11 ಪಾಯಿಂಟ್‌ಗಳ ದೂರದಲ್ಲಿದ್ದಾರೆ. 28 ವರ್ಷದ ಮಂಧನಾ 2019 ರಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು.
ತ್ರಿಕೋನ ಸರಣಿಯಲ್ಲಿ ಮಂಧನಾ ಐದು ಇನ್ನಿಂಗ್ಸ್‌ಗಳಿಂದ 52.80 ಸರಾಸರಿಯಲ್ಲಿ 264 ರನ್ ಗಳಿಸಿ ಸರಣಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದ್ದರು. ಇದರಲ್ಲಿ ತಲಾ ಒಂದು ಶತಕ ಅರ್ಧಶತಕಗಳು ಸೇರಿವೆ.
ಮಂಧನಾ ಮಾತ್ರವಲ್ಲದೆ ಸ್ಪಿನ್ ಆಲ್‌ರೌಂಡರ್‌ಗಳಾದ ಸ್ನೇಹ ರಾಣಾ ಮತ್ತು ದೀಪ್ತಿ ಶರ್ಮಾ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ. ಸ್ನೇಹ್ ರಾಣಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳ ಏರಿಕೆ ಕಂಡು 440 ರೇಟಿಂಗ್ ಅಂಕದೊಂದಿಗೆ 34ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ INDW vs SLW: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿದ ಸ್ಮೃತಿ ಮಂಧಾನಾ!
ದೀಪ್ತಿ ಶರ್ಮಾ ಕೂಡ ಒಂದು ಸ್ಥಾನ ಬಡ್ತಿ ಪಡೆದು ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ 353 ರೇಟಿಂಗ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ತ್ರಿಕೋನ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್‌ಗಳಿಂದ 146 ರನ್ ಮತ್ತು ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಜೂನ್ 28 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ಅಗ್ರ ಮೂರನೇ ಸ್ಥಾನಕ್ಕೇರುವ ಅವಕಾಶವಿದೆ. ಬೌಲಿಂಗ್ ಶ್ರೇಯಾಂಕದಲ್ಲಿ ದೀಪ್ತಿ 4ನೇ ಸ್ಥಾನಿಯಾಗಿದ್ದಾರೆ.