ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದಿನಿಂದ ಮಹಿಳಾ ಟಿ20 ವಿಶ್ವಕಪ್‌; ಭಾರತದ ಸಾಧನೆ ಹೇಗಿದೆ?

women's t20 wc: 12 ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನೆದರ್‌ಲೆಂಡ್ಸ್‌, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ‘ಎ’ ಗುಂಪಿನಲ್ಲಿದ್ದು, ಆತಿಥೇಯ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ‘ಬಿ’ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ.

India Women T20 World Cup

ಬರ್ಮಿಂಗ್‌ಹ್ಯಾಮ್‌, ಜೂ.12: 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌(women's t20 wc) ಟೂರ್ನಿ ಶುಕ್ರವಾರ ತಡರಾತ್ರಿ ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ ಹಾಗೂ ವೇಲ್ಸ್‌ನ ಜಂಟಿ ಆತಿಥ್ಯದಲ್ಲಿ ಆರಂಭಗೊಳ್ಳಲಿದೆ. ಭಾರತ ಸೇರಿದಂತೆ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಈ ಬಾರಿ 2 ದೇಶಗಳ ಒಟ್ಟು 7 ಕ್ರೀಡಾಂಗಣಗಳಲ್ಲಿ ಆಯೋಜನೆಗೊಳ್ಳಲಿದ್ದು, 33 ಪಂದ್ಯಗಳು ನಡೆಯಲಿವೆ. ಜುಲೈ 5ರಂದು ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಿಗದಿಯಾಗಿದೆ. ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್‌ ಭಾರತ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಲು ಹೋರಾಡಲಿದೆ.

2009ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಬರೋಬ್ಬರಿ 17 ವರ್ಷ ಬಳಿಕ ಮತ್ತೊಮ್ಮೆ ಚಾಂಪಿಯನ್‌ ಆಗಲು ಕಾಯುತ್ತಿದ್ದರೆ, ಆಸ್ಟ್ರೇಲಿಯಾ ತಂಡ ದಾಖಲೆಯ 7ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ನ್ಯೂಜಿಲೆಂಡ್ ತಂಡ ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಟೂರ್ನಿಗೆ ಕಾಲಿಡಲಿದೆ.

ಫಿಫಾ ವಿಶ್ವಕಪ್‌ ಮಧ್ಯೆ ಮಹಿಳಾ ಟಿ20 ವಿಶ್ವಕಪ್‌ ಕೌತುಕ; ನಾಳೆಯಿಂದ ಟೂರ್ನಿ ಆರಂಭ

ಎರಡು ಗುಂಪುಗಳು

12 ತಂಡಗಳನ್ನು ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನೆದರ್‌ಲೆಂಡ್ಸ್‌, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ‘ಎ’ ಗುಂಪಿನಲ್ಲಿದ್ದು, ಆತಿಥೇಯ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ‘ಬಿ’ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಒಂದು ತಂಡಕ್ಕೆ 5 ಪಂದ್ಯಗಳಿರಲಿವೆ. ಪ್ರತಿ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

22.4 ಕೋಟಿ ಬಹುಮಾನ

ಈ ಬಾರಿ ಮಹಿಳಾ ವಿಶ್ವಕಪ್‌ ಐಸಿಸಿ ಬರೋಬ್ಬರಿ ₹83.93 ಕೋಟಿ ನಗದು ಬಹುಮಾನ ಪ್ರಕಟಿಸಿದೆ. ಇದು ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು. ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ತಂಡಕ್ಕೆ ₹22.4 ಕೋಟಿ ನಗದು ಪಡೆಯಲಿದ್ದು, ರನ್ನರ್‌-ಅಪ್‌ ತಂಡಕ್ಕೆ ₹11.2 ಕೋಟಿ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಗಳಿಗೆ ತಲಾ ₹6.46 ಕೋಟಿ ಲಭಿಸಲಿದೆ. ಉಳಿದಂತೆ ಗುಂಪು ಹಂತದ ಪಂದ್ಯದಲ್ಲಿ ಗೆಲ್ಲುವ ತಂಡಗಳಿಗೆ ತಲಾ ₹29 ಲಕ್ಷ ಸಿಗಲಿದೆ.

ಭಾರತದ ಶೂಟಿಂಗ್ ದಂತಕಥೆ, ಕೋಚ್ ಜಸ್ಪಾಲ್ ರಾಣಾ 49ನೇ ವಯಸ್ಸಿನಲ್ಲಿ ನಿಧನ

ಎಲ್ಲಾ ಪಂದ್ಯಗಳು ಭಾರತದಲ್ಲಿ ಸ್ಟಾರ್‌ಸ್ಪೋರ್ಟ್ಸ್‌ ಚಾನೆಲ್‌ ಹಾಗೂ ಜಿಯೋ ಹಾಟ್‌ಸ್ಟಾರ್‌ ಆ್ಯಪ್‌ನಲ್ಲಿ ಪ್ರಸಾರಗೊಳ್ಳಲಿವೆ. ಭಾರತದ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ(ಭಾರತೀಯ ಕಾಲಮಾನ) ಆರಂಭಗೊಳ್ಳಲಿದೆ. ಭಾರತೀಯ ಕಾಲಮಾನದಂತೆ ಇಂದು ರಾತ್ರಿ 11 ಗಂಟೆಗೆ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಸಾಧನೆ ಹೇಗಿದೆ?

ಭಾರತ ಉದ್ಘಾಟನ ಆವೃತ್ತಿಯಿಂದ ಈವರೆಗೆ ನಡೆದ ಎಲ್ಲ ಆವೃತ್ತಿಯಲ್ಲೂ ಆಡಿದೆ. ಒಂದು ಬಾರಿ ಫೈನಲ್‌ ಪ್ರವೇಶಿಸಿದ್ದರೂ ಅಲ್ಲಿ ಸೋಲು ಕಂಡಿತ್ತು. ಕಳೆದ ಆವೃತ್ತಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಆದರೆ ಹಾಲಿ ಏಕದಿನ ಚಾಂಪಿಯನ್‌ ಆಗಿರುವ ಕಾರಣ ಈ ಬಾರಿ ತಂಡದ ಮೇಲೆ ನಂಬಿಕೆಯೊಂದನ್ನು ಇಡಬಹುದಾಗಿದೆ.

ಒಟ್ಟಾರೆ ಭಾರತದ ಸಾಧನೆ ಹೇಗಿದೆ?

2009- ಸೆಮಿಫೈನಲ್‌

2010-ಸೆಮಿಫೈನಲ್

2012- ಗುಂಪು ಹಂತ

2014- ಗುಂಪು ಹಂತ

2016- ಗುಂಪು ಹಂತ

2018- ಸೆಮಿಫೈನಲ್‌ಗಳು

2020- ರನ್ನರ್ ಅಪ್

2023- ಸೆಮಿಫೈನಲ್‌

2024- ಗುಂಪು ಹಂತ