ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್‌ ಫೈನಲ್‌ ಫೈಟ್‌; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?

WTC25: ಐತಿಹಾಸಿಕ ಲಾರ್ಡ್ಸ್ ಇತ್ತಂಡಗಳಿಗೂ ನೆಚ್ಚಿನ ಮೈದಾನವಾಗಿದೆ. ವರ್ಣಭೇದ ನೀತಿ ತೊರೆದು 1992ರಲ್ಲಿ ಕ್ರಿಕೆಟ್‌ಗೆ ಹರಿಣಗಳ ಪಡೆ ಪುನರಾಗಮನ ಸಾರಿದ ಬಳಿಕ ಇಲ್ಲಿ ಆಡಿರುವ ಏಳು ಟೆಸ್ಟ್‌ಗಳಲ್ಲಿ ಒಮ್ಮೆ ಮಾತ್ರ ಸೋತಿದೆ. ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಹೀಗಾಗಿ ಈ ಬಾರಿ ಲಾರ್ಡ್ಸ್‌ ಲಕ್‌ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಲಂಡನ್‌: ಮೂರನೇ ಆವೃತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌(ICC WTC 2025 Final) ಪಂದ್ಯಕ್ಕೆ ಕ್ರಿಕೆಟ್‌ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ ಮೈದಾನ(Lord's Cricket Ground) ಅಚ್ಚ ಹಸಿರಿನಿಂದ ಸಿಂಗರಿಸಿ ನಿಂತಿದೆ. ಬುಧವಾರ(ಜೂ.11) ದಿಂದ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ(AUS vs SA) ತಂಡಗಳ ನಡುವೆ ದೊಡ್ಡ ಮಟ್ಟದ ಹಣಾಹಣಿ ನಡೆಯಲಿದೆ. ಇಲ್ಲಿಯ ತನಕ ಐಪಿಎಲ್‌ ಗುಂಗಿನಲ್ಲಿ ತೇಲಾಡುತ್ತಿದ್ದವರೆಲ್ಲ 5 ದಿನಗಳ ಕ್ರಿಕೆಟ್‌ ಕದನವನ್ನು ಕಣ್ತುಂಬಿಸಿಕೊಳ್ಳುವ ಕಾಲವಿದು. ಟೆಸ್ಟ್‌ ಕ್ರಿಕೆಟ್‌ನಲ್ಲೂ ಚುಟುಕು ಕ್ರಿಕೆಟ್‌ನಷ್ಟೇ ರೋಚಕತೆ, ಕೌತುಕ, ಥ್ರಿಲ್‌ ಎಲ್ಲವೂ ಇದೆ ಎಂಬುದನ್ನು ನಿರೂಪಿಸಲು ಇತ್ತಂಡಗಳಿಗೆ ಸಿಕ್ಕಿರುವ ಅಪೂರ್ವ ಅವಕಾಶವೂ ಇದಾಗಿದೆ.

ಈ ಹಿಂದಿನ ಎರಡು ಆವೃತ್ತಿ ಕೂಡ ಇಂಗ್ಲೆಂಡ್‌ ನಲ್ಲಿಯೇ ನಡೆದಿತ್ತು. ಮೊದಲ ಆವೃತ್ತಿಯ ಫೈನಲ್‌ (2021) ಸೌತ್‌ಹ್ಯಾಂಪ್ಟನ್‌ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023)‌ ಓವಲ್‌ನಲ್ಲಿ ನಡೆದಿತ್ತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್‌ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್‌ ಆಗಿತ್ತು. ಈ ಬಾರಿ ಭಾರತ ಫೈನಲ್‌ಗೇರಲು ವಿಫಲವಾಗಿತ್ತು.

ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ಫೈನಲ್‌. ಚೋಕರ್ಸ್‌ ಎಂಬ ಹಣ್ಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ 1998ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಆವೃತ್ತಿಯಲ್ಲಿ ಯಶಸ್ಸು ಪಡೆದಿದ್ದು ಬಿಟ್ಟರೆ ಇದುವರೆಗೆ ಈ ತಂಡಕ್ಕೆ ವಿಶ್ವಕಪ್‌ ಪ್ರಶಸ್ತಿ ಗಗನಕುಸುಮವಾಗಿದೆ. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದ ಹರಿಣ ಪಡೆ ಭಾರತ ವಿರುದ್ಧ ಸೋಲು ಕಂಡಿತ್ತು.

ಅದೃಷ್ಟ ಕೈ ಹಿಡಿದರೆ ಕಪ್‌ ಖಚಿತ

ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನ ನೋಡುವಾಗ ಈ ಬಾರಿ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಳ್ಳುವ ಸಾಧ್ಯತೆಯೊಂದು ಕಂಡು ಬಂದಿದೆ. ಯಾರು ನೀರಿಕ್ಷೆಯೂ ಮಾಡದ ರೀತಿಯಲ್ಲಿ ಕೊನೆಯ ಏಳು ಟೆಸ್ಟ್‌ಗಳನ್ನು ಗೆದ್ದು ಫೈನಲ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದಿತ್ತು. ಇತರೆಲ್ಲ ತಂಡಗಳಿಗಿಂತ ಹೆಚ್ಚು 30 ಆಟಗಾರರನ್ನು ಪರೀಕ್ಷಿಸಿದ್ದು ಅಮೋಘ ಸಾಹಸಗಳಾಗಿವೆ. ಹೀಗಾಗಿ ಐಸಿಸಿ ಟ್ರೋಫಿಯ ಬರ ಎನ್ನುವುದು ಈ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದು ನಾಯಕ ತೆಂಬಾ ಬವುಮಾ ಅವರ ದೃಢ ನಂಬಿಕೆ. ಆದರೆ ಅದೃಷ್ಟ ಕೂಡ ಕೈ ಹಿಡಿಯಬೇಕು.

ಉಭಯ ತಂಡಗಳಿಗೂ ನೆಚ್ಚಿನ ಮೈದಾನ

ಐತಿಹಾಸಿಕ ಲಾರ್ಡ್ಸ್, ಇತ್ತಂಡಗಳಿಗೂ ನೆಚ್ಚಿನ ಮೈದಾನವಾಗಿದೆ. ವರ್ಣಭೇದ ನೀತಿ ತೊರೆದು 1992ರಲ್ಲಿ ಕ್ರಿಕೆಟ್‌ಗೆ ಹರಿಣಗಳ ಪಡೆ ಪುನರಾಗಮನ ಸಾರಿದ ಬಳಿಕ ಇಲ್ಲಿ ಆಡಿರುವ ಏಳು ಟೆಸ್ಟ್‌ಗಳಲ್ಲಿ ಒಮ್ಮೆ ಮಾತ್ರ ಸೋತಿದೆ. ಇನ್ನೊಂದೆಡೆ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ಲಾರ್ಡ್ಸ್‌ನಲ್ಲಿ ಒಮ್ಮೆಯೂ ಸೋತಿಲ್ಲ. ಹೀಗಾಗಿ ಈ ಬಾರಿ ಲಾರ್ಡ್ಸ್‌ ಲಕ್‌ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ ICC WTC Final 2025: ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ಆಸ್ಟ್ರೇಲಿಯ ಸಶಕ್ತ ತಂಡ

ಫೈನಲ್‌ ಪಂದ್ಯಗಳನ್ನು ಹೇಗೆ ಗೆಲ್ಲಬೇಕು, ಏನೆಲ್ಲ ರಣತಂತ್ರವನ್ನು ರೂಪಿಸಬೇಕು, ಎದುರಾಳಿಯ ಯಾವ ಆಟಗಾರನನ್ನು ಟಾರ್ಗೆಟ್‌ ಮಾಡಬೇಕು ಎಂಬೆಲ್ಲ ಗೆಲುವಿನ ಸೂತ್ರಗಳನ್ನು ಆಸ್ಟ್ರೇಲಿಯಕ್ಕಿಂತ ಚೆನ್ನಾಗಿ ಬಲ್ಲ ಇನ್ನೊಂದು ತಂಡ ಇಲ್ಲ ಎಂದರೂ ತಪ್ಪಾಗಲಾರದು. ಈ ಬಾರಿಯೂ ಸಮರ್ಥ ಬ್ಯಾಟರ್‌ಗಳ ಟೆಸ್ಟ್‌ ಪಡೆಯನ್ನು ಹೊಂದಿದೆ. ಉಸ್ಮಾನ್‌ ಖ್ವಾಜಾ, ಲಬುಶೇನ್‌, ಸ್ಮಿತ್‌ ಇವರಲ್ಲಿ ಪ್ರಮುಖರು. ಹೆಡ್‌, ಗ್ರೀನ್‌, ಕ್ಯಾರಿ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳಬಲ್ಲರು. ಕಳೆದ ಭಾರತ ವಿರುದ್ಧದ ಫೈನಲ್‌ನಲ್ಲಿ ಹೆಡ್‌ ಶತಕ ಸಿಡಿಸಿ ಪಂದ್ಯದ ಗೆಲುವಿನ ರುವಾರಿ ಎನ್ನಿಸಿದ್ದರು. ಹೀಗಾಗಿ ಈ ಬಾರಿತಯೂ ಅವರ ಬ್ಯಾಟಿಂಗ್‌ ಮೇಲೆ ತಂಡ ಹೆಚ್ಚು ನಂಬಿಕೆ ಇಟ್ಟಿದೆ. ಇನ್ನೊಂಡೆದೆ ತಂಡದ ಬೌಲಿಂಗ್‌ ಕೂಡ ಘಾತಕವಾಗಿ ಫೈನಲ್‌ನಲ್ಲಿ ಇದುವರೆಗೂ ಸೋಲೇ ಕಾಣದ ಜೋಶ್‌ ಹ್ಯಾಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್‌, ನಾಯಕ ಪ್ಯಾಟ್‌ ಕಮಿನ್ಸ್‌ ಉತ್ತಮ ಲಯದ್ದಲಿದ್ದಾರೆ.