ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ತಂಡದ ಭವಿಷ್ಯ ದೇವರ ಮಡಿಲಲ್ಲಿ'; ಸೋಲಿನ ಬಳಿಕ ಭಾವುಕರಾದ ಮಿಚೆಲ್‌ ಮಾರ್ಷ್‌

T20 World Cup: ಆಸ್ಟ್ರೇಲಿಯಾ ಆಡಿದ 3 ಪಂದ್ಯಗಳಲ್ಲಿ ಎರಡು ಸೋತು, ಒಂದರಲ್ಲಿ ಜಯಿಸಿದೆ. 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದೆ. ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಆಡಬೇಕಿದೆ. ಅದರಲ್ಲಿ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಜಿಂಬಾಬ್ವೆ ತನ್ನ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಆಗ ಆಸ್ಟ್ರೇಲಿಯಾಕ್ಕೆ ಒಂದು ಅವಕಾಶ ಸಿಗಬಹುದು.

Mitchell Marsh reacts to Australia's situation

ಕೊಲಂಬೊ, ಫೆ.17: ಸೋಮವಾರ ನಡೆದಿದ್ದ ಟಿ20 ವಿಶ್ವಕಪ್‌(T20 World Cup) ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೂಪರ್‌-8 ಹಂತದ ಹಾದಿ ಕಠಿಣವಾಯಿತು. ಸೋಲಿನ ಬಳಿಕ ನಾಯಕ ಮಿಚೆಲ್‌ ಮಾರ್ಷ್‌(Mitchell Marsh) ಆಡಿದ ಭಾವುಕ ಮಾತು ಇದೀಗ ಬಾರಿ ವೈರಲ್‌ ಆಗಿದೆ. ತಂಡದ ಭವಿಷ್ಯ ಈಗ ದೇವರ ಮಡಿಲಲ್ಲಿ ಎಂದು ಹೇಳಿದರು.

"ನಮ್ಮ ತಂಡದ ಮುಂದಿನ ಹಾದಿ ಬಹುತೇಕ ಕೊನೆಗೊಂಡಿದೆ. ನಾವು ಈಗ ದೇವರ ಮಡಿಲಲ್ಲಿದ್ದೇವೆ. ಡ್ರೆಸ್ಸಿಂಗ್‌ ರೂಮ್‌ಗಳಲ್ಲಿ ಈಗ ಬಹಳಷ್ಟು ಭಾವನೆಗಳಿವೆ. ನಾವು ನಮ್ಮ ಅತ್ಯುತ್ತಮ ಸ್ಥಿತಿಯಲ್ಲಿಲ್ಲ. ಜಿಂಬಾಬ್ವೆ vs ಐರ್ಲೆಂಡ್ ಪಂದ್ಯದ ಫಲಿತಾಂಶದ ಮೇಲೆ ನಮ್ಮ ಭವಿಷ್ಯ ಅಡಗಿದೆ. ಐರ್ಲೆಂಡ್‌ ಗೆಲುವು ಸಾಧಿಸಲೆಂದು ನಾವೆಲ್ಲರು ಪ್ರಾರ್ಥನೆ ಮಾಡುತ್ತೇವೆ" ಎಂದು ಮಾರ್ಷ್‌ ಸೋಲಿನ ನಂತರ ಹೇಳಿದರು.

ಆಸ್ಟ್ರೇಲಿಯಾ ಆಡಿದ 3 ಪಂದ್ಯಗಳಲ್ಲಿ ಎರಡು ಸೋತು, ಒಂದರಲ್ಲಿ ಜಯಿಸಿದೆ. 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದೆ. ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಆಡಬೇಕಿದೆ. ಅದರಲ್ಲಿ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಜಿಂಬಾಬ್ವೆ ತನ್ನ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಆಗ ಆಸ್ಟ್ರೇಲಿಯಾಕ್ಕೆ ಒಂದು ಅವಕಾಶ ಸಿಗಬಹುದು.

ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಗೆದ್ದರೆ ಆಸ್ಟ್ರೇಲಿಯಾ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಡಿ ಗುಂಪಿನಲ್ಲಿ ಸತತ ಮೂರು ಜಯ ಸಾಧಿಸಿದ ಶ್ರೀಲಂಕಾ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡು ಪಂದ್ಯ ಗೆದ್ದಿರುವ ಜಿಂಬಾಬ್ವೆ (4) ಎರಡನೇ ಸ್ಥಾನದಲ್ಲಿದೆ.

'ಪಾಕ್‌ ಆಟಗಾರರನ್ನು ಸ್ಲೆಡ್ಜ್ ಮಾಡಬೇಡಿ'; ಸೂರ್ಯಕುಮಾರ್ ಹೇಳಿಕೆಯ ವಿಡಿಯೊ ವೈರಲ್‌

ಸೋಮವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 182 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಇನಿಂಗ್ಸ್‌ನಲ್ಲಿ ಇನ್ನೂ 2 ಓವರ್‌ಗಳು ಉಳಿದಂತೆಯೇ 8 ವಿಕೆಟ್‌ಗಳಿಂದ ಗೆದ್ದಿತು. ಲಂಕಾದ ಈ ಅಮೋಘ ಗೆಲುವಿನಲ್ಲಿ ನಿಸಾಂಕ ಅವರ ಅಸಾಮಾನ್ಯ ಬ್ಯಾಟಿಂಗ್‌ ಪ್ರಮುಖ ಹೈಲೆಟ್ಸ್‌ ಆಗಿತ್ತು. 52ಎಸೆತಗಳಿಂದ ಅಜೇಯ 100ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ಪ್ರಸಕ್ತ ಟೂರ್ನಿಯ ಮೊದಲ ಶತಕ.

ಬೌಲಿಂಗ್‌ನಲ್ಲಿ ದುಶಾನ್ ಹೇಮಂತ (37ಕ್ಕೆ3) ಮತ್ತು ದುಷ್ಮಂತ ಚಮೀರಾ (36ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಮುಂದೆ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವು ಕುಸಿಯಿತು. ಇದರಿಂದ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಯಿತು.