ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೃಹತ್‌ ಮೊತ್ತ ಪೇರಿಸಿ ಡಿಕ್ಲೇರ್‌ ಘೋಷಿಸಿದ ಭಾರತ

ಪದಾರ್ಪಣ ಪಂದ್ಯವನ್ನಾಡಿದ ಆಲ್‌ರೌಂಡರ್‌ ಮಾನವ್‌ ಸುತಾರ್ ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 28ರನ್‌ ಗಳಿಸಿದರು. ಮೊಹಮ್ಮದ್‌ ಸಿರಾಜ್‌ 22 ರನ್‌ ಗಳಿಸಿದರು. ಆಫ್ಘಾನ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್ ಸಲೀಂ 6 ವಿಕೆಟ್ ಪಡೆದರು.

Washington Sundar

ಮುಲ್ಲನ್‌ಪುರ, ಜೂ.7: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 564 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿದೆ. 368 ರನ್‌ಗಳಿಸಿದ್ದಲ್ಲಿಂದ ಭಾನುವಾರ ಎರಡನೇ ದಿನದಾಟ ಆರಂಭಿಸಿದ ಭಾರತ 196ರನ್‌ ಕಲೆಹಾಕಿತು.

ಶನಿವಾರ 103 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ 23 ರನ್‌ ಗಳಿಸಿ ಒಟ್ಟಾರೆ 126ರನ್‌ ಬಾರಿಸಿದರು. 50 ರನ್‌ ಗಳಿಸಿದ್ದ ರಿಷಭ್‌ ಪಂತ್‌ ತಮ್ಮ ಮೊತ್ತವನ್ನು 81ರನ್‌ಗೆ ವಿಸ್ತರಿಸಿದರು.ಈ ಜೋಡಿ 4 ವಿಕೆಟ್‌ಗೆ 169 ರನ್‌ ಒಟ್ಟುಗೂಡಿಸಿತು. 2ನೇ ದಿನದಾಟದಲ್ಲಿ ವಾಷಿಂಗ್ಟನ್‌ ಸುಂದರ್‌ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಸುಂದರ್‌ 68 ಎಸೆತಗಳಿಂದ 52 ರನ್‌ ಬಾರಿಸಿದರು. ಅವರ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಭಾರತ ಡಿಕ್ಲೇರ್‌ ಘೋಷಿಸಿತು.

ಪದಾರ್ಪಣ ಪಂದ್ಯವನ್ನಾಡಿದ ಆಲ್‌ರೌಂಡರ್‌ ಮಾನವ್‌ ಸುತಾರ್ ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 28ರನ್‌ ಗಳಿಸಿದರು. ಮೊಹಮ್ಮದ್‌ ಸಿರಾಜ್‌ 22 ರನ್‌ ಗಳಿಸಿದರು. ಆಫ್ಘಾನ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್ ಸಲೀಂ 6 ವಿಕೆಟ್ ಪಡೆದರು.

ಮೊದಲ ದಿನದಾಟದಲ್ಲಿ ರಾಹುಲ್‌-ಯಶಸ್ವಿ ಜೈಸ್ವಾಲ್‌ 41 ರನ್‌ ಸೇರಿಸಿದರು. ಜೈಸ್ವಾಲ್‌ 24 ರನ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ ರಾಹುಲ್‌-ಸಾಯಿ ಸುದರ್ಶನ್‌ ಜೋಡಿ 139 ರನ್‌ ಜೊತೆಯಾಟವಾಡಿತು. ಈ ಜೋಡಿ ಒಂದೂವರೆ ಅವಧಿ ಆಫ್ಘನ್‌ ಬೌಲರ್‌ಗಳ ಬೆವರಿಳಿಸಿತು. ಇಬ್ಬರೂ ಶತಕದ ನಿರೀಕ್ಷೆಯಲ್ಲಿದ್ದರೂ, ಸಾಯಿ ಸುದರ್ಶನ್‌ 81 ರನ್‌ಗೆ ವಿಕೆಟ್‌ ಒಪ್ಪಿಸಿದರು. ಟೆಸ್ಟ್‌ನಲ್ಲಿ 12ನೇ ಶತಕ ಪೂರೈಸಿದ ರಾಹುಲ್‌, ಮುಂದಿನ ಎಸೆತದಲ್ಲೇ ಔಟಾದರು. ಅವರು 165 ಎಸೆತಗಳಲ್ಲಿ 100 ರನ್‌ ಸಿಡಿಸಿದರು.