ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಪಡೆದಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 64 ರನ್‌ ಗಳಿಸಿತ್ತು. ಪಂದ್ಯದ 4ನೇ ದಿನವಾದ ಶನಿವಾರವೂ ಭಾರತ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿತು. 83 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿ 608 ರನ್‌ಗಳ ಕಠಿಣ ಗುರಿ ನೀಡಿತ್ತು.

ಬರ್ಮಿಂಗ್‌ಹ್ಯಾಮ್‌: ಆಕಾಶ್‌ದೀಪ್‌(99ಕ್ಕೆ6) ಅವರ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ತಂಡ ಭಾರತ ವಿರುದ್ಧ ದ್ವಿತೀಯ ಟೆಸ್ಟ್‌(IND vs ENG) ಪಂದ್ಯದಲ್ಲಿ 336 ರನ್‌ ಅಂತರದ ಹೀನಾಯ ಸೋಲು ಕಂಡಿದೆ. ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಬರ್ಮಿಂಗ್‌ಹ್ಯಾಮ್‌ನ (Birmingham) ಎಡ್ಜ್‌ಬಾಸ್ಟನ್‌(Edgbaston) ಕ್ರೀಡಾಂಗಣದಲ್ಲಿ ಭಾರತಕ್ಕೆ ಒಲಿದ ಮೊದಲ ಗೆಲುವು. ಈವರೆಗೆ ಈ ಸ್ಥಳದಲ್ಲಿ ಆಡಿದ್ದ ಏಳು ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಈ ಬಾರಿ ಗೆದ್ದು ಸೋಲಿನ ಕೊಂಡಿಯನ್ನು ಕಳಚಿಕೊಂಡಿದೆ. ಜತೆಗೆ ಐದು ಪಂದ್ಯಗಳ ಸರಣಿಯನ್ನು 1-1 ಸಮಬಲ ಸಾಧಿಸಿದೆ.

72 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದಲ್ಲಿಂದ ಭಾನುವಾರ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್‌, ಜೇಮೀ ಸ್ಮಿತ್ ಅವರ ಏಕಾಂಗಿ ಹೋರಾಟದ ನೆರವಿನಿಂದ 271 ರನ್‌ ಗಳಿಸಿ ಆಲೌಟ್‌ ಆಯಿತು. ಪಂದ್ಯ ಆರಂಭಕ್ಕೂ ಮುನ್ನ ಮಳೆ ಅಡ್ಡಿಪಡಿಸಿತು. ಈ ವೇಳೆ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲಿದೆ ಎಂದು ಭಾವಿಸಲಾಯಿತು. ಆದರೆ ಅದೃಷ್ಟ ಭಾರತದ ಕಡೆ ಇತ್ತು. 1 ಗಂಟೆ 40 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಆಕಾಶ್‌ದೀಪ್‌ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಅನುಭವಿ ಪೋಪ್‌(24) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಇಲ್ಲಿಗೆ ಸಮ್ಮನಾಗದ ಆಕಾಶ್‌ದೀಪ್‌ ಅಪಾಯಕಾರಿ ಹ್ಯಾರಿ ಬ್ರೂಕ್‌(23) ವಿಕೆಟ್‌ ಕೂಡ ಉರುಳಿಸಿದರು.

ಇದನ್ನೂ ಓದಿ ENG vs IND: ಸುನೀಲ್‌ ಗವಾಸ್ಕರ್‌ರ ದೀರ್ಘಕಾಲದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!

ಭೋಜನ ವಿರಾಮದ ಬಳಿಕ ಬ್ಯಾಟಿಂಗ್‌ ಮುಂದುವರಿಸಿದ ಇಂಗ್ಲೆಂಡ್‌ಗೆ ವಾಷಿಂಗ್ಟನ್‌ ಸುಂದರ್‌ ಶಾಕ್‌ ನೀಡಿದರು. 33 ರನ್‌ ಗಳಿಸಿದ್ದ ನಾಯಕ ಬೆನ್‌ ಸ್ಟೋಕ್ಸ್‌ಗೆ ಪೆವಿಲಿಯನ್‌ ದಾರಿ ತೋರಿಸಿದರು. ಮತ್ತೆ ಆಂಗ್ಲರ ಮೇಳೆ ಸವಾರಿ ನಡೆಸಿದ ಆಕಾಶ್‌ ದೀಪ್‌ ಸತತ ವಿಕೆಟ್‌ ಕಿತ್ತು ಭಾರತದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 99 ರನ್‌ ಅಂತರದಿಂದ ಆರು ವಿಕೆಟ್‌ ಕಿತ್ತರು. . ಒಟ್ಟಾರೆ 10 ವಿಕೆಟ್‌ ಕಿತ್ತು ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ ಸಿರಾಜ್‌ ಕೂಡ 6 ವಿಕೆಟ್‌ ಕಿತ್ತಿದ್ದರು. ಇಂಗ್ಲೆಂಡ್‌ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಜೇಮೀ ಸ್ಮಿತ್(88) ರನ್‌ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದರು.

ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಪಡೆದಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 64 ರನ್‌ ಗಳಿಸಿತ್ತು. ಪಂದ್ಯದ 4ನೇ ದಿನವಾದ ಶನಿವಾರವೂ ಭಾರತ ಬ್ಯಾಟಿಂಗ್‌ನಲ್ಲಿ ವಿಜೃಂಭಿಸಿತ್ತು. 83 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿ 608 ರನ್‌ಗಳ ಕಠಿಣ ಗುರಿ ನೀಡಿತ್ತು.