ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: ಸುನೀಲ್‌ ಗವಾಸ್ಕರ್‌ರ ದೀರ್ಘಕಾಲದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!

ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತ ಹಾಗೂ ಏಷ್ಯಾದ ಆಟಗಾರರಲ್ಲೇ ಅತ್ಯಂತ ವೇಗವಾಗಿ 2000 ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ.ರಾ ಅವರು ಕೇವಲ 21 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಸುನೀಲ್‌ ಗವಾಸ್ಕರ್‌ರ ದೀರ್ಘಕಾಲದ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!

ವೇಗವಾಗಿ 2000 ರನ್‌ ದಾಖಲಿಸಿದ ಯಶಸ್ವಿ ಜೈಸ್ವಾಲ್‌.

Profile Ramesh Kote Jul 5, 2025 2:25 PM

ಬರ್ಮಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಯಶಸ್ವಿ ಜೈಸ್ವಾಲ್ (Yashaswi Jaiswal) ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 22 ಎಸೆತಗಳಲ್ಲಿ 28 ರನ್ ಗಳಿಸಿದ ಜೈಸ್ವಾಲ್, ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಅವರ ದೀರ್ಘಕಾಲದ ದಾಖಲೆಯೊಂದನ್ನು ಮುರಿದಿದ್ದಾರೆ. ಅಂದ ಹಾಗೆ ಇದೇ ಪಂದ್ಯದ ಪ್ರಥಮ ಇನಿಂಗ್ಸ್‌ ಎಡಗೈ ಬ್ಯಾಟ್ಸ್‌ಮನ್‌ ಅರ್ಧಶತಕವನ್ನು ಬಾರಿಸಿದ್ದರು.

ಎರಡನೇ ಟೆಸ್ಟ್ ಪಂದ್ಯದ ಭಾರತ ತಂಡದ ದ್ವಿತೀಯ ಇನಿಂಗ್ಸ್‌ನಲ್ಲಿ ಆರಂಭಿಕ ಜೋಡಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೊತೆಗೂಡಿ 50 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಜಾಶ್ ಟಾಂಗ್ ಅವರಿಗೆ ಜೈಸ್ವಾಲ್ ವಿಕೆಟ್ ಒಪ್ಪಿಸಿದರೂ ಪಂದ್ಯದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತ ಹಾಗೂ ಏಷ್ಯಾದ ಆಟಗಾರರಲ್ಲೇ ಅತ್ಯಂತ ವೇಗವಾಗಿ 2000 ಟೆಸ್ಟ್‌ ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಕೇವಲ 21 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಗವಾಸ್ಕರ್ (23 ಇನಿಂಗ್ಸ್‌) ದಾಖಲೆಯನ್ನು ಮುರಿದಿದ್ದಾರೆ.

IND vs ENG: ವಿರಾಟ್‌ ಕೊಹ್ಲಿ ಅಲ್ಲ, ತನ್ನ ರೋಲ್ ಮಾಡೆಲ್ ಯಾರೆಂದು ತಿಳಿಸಿದ ವೈಭವ್ ಸೂರ್ಯವಂಶಿ!

ಭಾರತ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಪಡೆದು ದ್ವಿತೀಯ ಇನಿಂಗ್ಸ್‌ನಲ್ಲಿಯೂ ಇಂಗ್ಲೆಂಡಿಗೆ ದೊಡ್ದಡ ಮೊತ್ತದ ಸವಾಲಿನ ಗುರಿಯನ್ನು ನೀಡುವತ್ತ ಗಮನ ಹರಿಸುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಒಂದು ವಿಕೆಟ್ ನಷ್ಟಕ್ಕೆ 64 ರನ್ ಕಲೆಹಾಕಿದೆ ಹಾಗೂ 244 ರನ್‌ಗಳ ಮುನ್ನಡೆಯಲ್ಲಿದೆ.

ಟೆಸ್ಟ್‌ ಕ್ರಿಕೆಟ್ ನಲ್ಲಿ ಜೈಸ್ವಾಲ್ ಸಾಧನೆ

ಭಾರತ ಹಾಗೂ ಏಷ್ಯಾದ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 21 ಪಂದ್ಯಗಳಲ್ಲಿ 2000 ರನ್ ಪೂರೈಸಿದ ಏಕೈಕ ಆಟಗಾರ ಯಶಸ್ವಿ ಜೈಸ್ವಾಲ್‌. ವಿಶ್ವದಲ್ಲಿ ಕೇವಲ ಐದು ಆಟಗಾರರು ಮಾತ್ರ ಜೈಸ್ವಾಲ್‌ಗಿಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಡಾನ್ ಬ್ರಾಡ್‌ಮನ್ (15), ಜಾರ್ಜ್ ಹೆಡ್ಲಿ (17), ಮೈಕಲ್ ಹಸ್ಸಿ ಮತ್ತು ಮಾರ್ನಸ್‌ ಲಾಬುಶೇನ್‌(20) ಮತ್ತು ಹರ್ಬರ್ಟ್ ಸಟ್‌ಕ್ಲಿಫ್ (22).

ಭಾರತೀಯ ಮತ್ತು ಏಷ್ಯಾದ ಆಟಗಾರರಲ್ಲಿ 40 ಇನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ ಆಟಗಾರರ ಸಾಲಿಗೆ ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಮತ್ತು ರಾಹುಲ್ ದ್ರಾವಿಡ್ ಅವರ ಜೊತೆಗೆ ಇದೀಗ ಯಶಸ್ವಿ ಜೈಸ್ವಾಲ್ ಸೇರ್ಪಡೆಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎರಡನೇ ವರ್ಷದಲ್ಲೇ ಈ ಸಾಧನೆ ಮಾಡಿದ ಏಷ್ಯಾದ ಏಕೈಕ ಆಟಗಾರ ಜೈಸ್ವಾಲ್‌.

IND vs ENG: ಎರಡನೇ ಟೆಸ್ಟ್‌ನಲ್ಲಿಯೂ ಭಾರತವನ್ನು ಸೋಲಿಸುತ್ತೇವೆಂದ ಹ್ಯಾರಿ ಬ್ರೂಕ್!

ಕಳೆದ ವರ್ಷ ಜೈಸ್ವಾಲ್ ಕೇವಲ 9 ಪಂದ್ಯಗಳಲ್ಲಿ 1000 ಟೆಸ್ಟ್ ರನ್ ಗಳಿಸಿದ ಭಾರತದ ವೇಗದ ಆಟಗಾರರಾಗಿದ್ದರು. ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲೇ ಭಾರತದ ಎರಡನೇ ಕಿರಿಯ ಆಟಗಾರರಾಗಿದ್ದು, ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.