ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನ್ಯೂಜಿಲೆಂಡ್‌ಗೆ ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್ ಆಸರೆ

New Zealand vs India 2nd Test: ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಭಾರತ ಈ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರ ಬದಲು ಗುರ್ನೂರ್‌ ಬ್ರಾರ್‌ಗೆ ಅವಕಾಶ ನೀಡಿತು. ಮೊಹಮ್ಮದ್‌ ಸಿರಾಜ್‌ ಈ ಪಂದ್ಯದಲ್ಲಿ ಬೆಂಚ್‌ ಕಾಯಬೇಕಾಯಿತು.

Tom Blundell

ಕ್ರೈಸ್ಟ್‌ಚರ್ಚ್‌, ನ.27: ಭಾರತದ ಬಿಗು ಬೌಲಿಂಗ್‌ ದಾಳಿಯ ಮಧ್ಯೆಯೂ ಲಯ ಕಂಡುಕೊಂಡ ನ್ಯೂಜಿಲೆಂಡ್‌ ತಂಡ ಶುಕ್ರವಾರ ಆರಂಭಗೊಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 246 ರನ್‌ ಗಳಿಸಿದೆ. ಅರ್ಧಶತಕ ಬಾರಿಸಿರುವ ಟಾಮ್‌ ಟಾಮ್ ಬ್ಲಂಡೆಲ್(53*) ಮತ್ತು ಗ್ಲೆನ್‌ ಫಿಲಿಪ್ಸ್‌(36*) ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿತು. ಆರಂಭದಲ್ಲಿ ಭಾರತೀಯ ಬೌಲರ್‌ಗಳು ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದರ ಲಾಭವೆತ್ತಿದ್ದ ಆತಿಥೇಯ ತಂಡ ಉತ್ತಮ ರನ್‌ ಗಳಿಸಿತು. ಆದರೆ ಆ ಬಳಿಕ ವೇಗದ ಬೌಲಿಂಗ್ ಪ್ರದರ್ಶನದೊಂದಿಗೆ ಭಾರತ ಭರ್ಜರಿ ಪುನರಾಗಮನ ಮಾಡಿತು.

39 ಓವರ್‌ಗಳ ತನಕ 106 ರನ್‌ಗೆ ಒಂದು ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಕಿವೀಸ್‌ ತಂಡ ದಿಢೀರ್‌ ಕುಸಿತ ಕಂಡಿತು. ಕೇವಲ ಮೂರು ಓವರ್‌ಗಳ ಅಂತರದಲ್ಲಿ, ನ್ಯೂಜಿಲೆಂಡ್ 110 ಕ್ಕೆ 4 ವಿಕೆಟ್‌ ಕಳೆದುಕೊಂಡಿತು. ಇದು ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ದೊಡ್ಡ ಅವಕಾಶವನ್ನು ಒದಗಿಸಿಕೊಟ್ಟಿತು. ಈ ಹಠಾತ್ ದಾಳಿಯು ನ್ಯೂಜಿಲೆಂಡ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಶುಭಮನ್ ಗಿಲ್ ತೆಗೆದುಕೊಂಡ ನಿರ್ಧಾರಗಳು ಫಲ ನೀಡಿದವು. ಈ ಅವಧಿಯಲ್ಲಿ ಆಕಾಶ್ ದೀಪ್ ಎರಡು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ಅಂಶುಲ್ ಕಂಬೋಜ್ ಕೂಡ ಮಹತ್ವದ ಕೊಡುಗೆ ನೀಡಿದರು.

ಭಾರತ ವಿರುದ್ಧ ಅರ್ಧಶತಕ ಬಾರಿಸಿ ಎರಡು ದಾಖಲೆ ಬರೆದ ಟಾಮ್‌ ಲ್ಯಾಥಮ್

ಆದರೆ ಈ ಹಿಡಿತ ಹೆಚ್ಚು ಹೊತ್ತು ಸಾಗಲಿಲ್ಲ. ಚಾ ವಿರಾಮದ ಬಳಿಕ ನ್ಯೂಜಿಲೆಂಡ್‌ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಿತು. 6ನೇ ವಿಕೆಟ್‌ಗೆ ಜತೆಯಾದ ಟಾಮ್‌ ಟಾಮ್ ಬ್ಲಂಡೆಲ್ ಮತ್ತು ಗ್ಲೆನ್‌ ಫಿಲಿಪ್ಸ್‌ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ತಂಡದ ಹಾನಿಯನ್ನು ತಪ್ಪಿಸಿದರು.

ಇದಕ್ಕೂ ಮುನ್ನ ನಾಯಕ ಟಾಮ್‌ ಲ್ಯಾಥಮ್‌ ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಲ್ಯಾಥಮ್‌ 59 ರನ್‌ ಗಳಿಸಿದರು. ಡೆವೊನ್ ಕಾನ್ವೇ(31), ಡ್ಯಾರಿಲ್ ಮಿಚೆಲ್(31) ರನ್‌ ಕೊಡುಗೆ ನೀಡಿದರು. ರಚಿನ್‌ ರವೀಂದ್ರ(0) ಈ ಪಂದ್ಯದಲ್ಲಿಯೂ ವಿಫಲರಾದರು.

ಭಾರತ ಪರ ಆಕಾಶ್‌ದೀಪ್ 2 ಮತ್ತು ಟೆಸ್ಟ್‌ ಪದಾರ್ಪಣೆ ಮಾಡಿದ ಗುರ್ನೂರ್‌ ಬ್ರಾರ್‌, ಕಾಂಬೊಜ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಒಂದು ವಿಕೆಟ್‌ ಕಿತ್ತರು. ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಭಾರತ ಈ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರ ಬದಲು ಗುರ್ನೂರ್‌ ಬ್ರಾರ್‌ಗೆ ಅವಕಾಶ ನೀಡಿತು. ಮೊಹಮ್ಮದ್‌ ಸಿರಾಜ್‌ ಈ ಪಂದ್ಯದಲ್ಲಿ ಬೆಂಚ್‌ ಕಾಯಬೇಕಾಯಿತು.