ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಿವೀಸ್‌ ನೆಲದಲ್ಲಿ 'ಯಂಗ್ ಟೀಮ್‌ ಇಂಡಿಯಾ'ಗೆ ಕಠಿಣ ಟಿ20 ಸವಾಲು

New Zealand vs India T20I: ಭಾರತವು ಕೊನೆಯದಾಗಿ 2022ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಟಿ20 ಅಂತರರಾಷ್ಟ್ರೀಯ (T20I) ಸರಣಿಯನ್ನು ಆಡಿತ್ತು ಮತ್ತು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಜಯ ಸಾಧಿಸಿತ್ತು. ಆದರೆ ಆ ಸರಣಿಯಲ್ಲಿ ಆಡಿದ ಆಟಗಾರರು ಈ ಬಾರಿ ತಂಡದಲಿಲ್ಲ.

New Zealand vs India T20I series

ಕ್ರೈಸ್ಟ್‌ಚರ್ಚ್‌, ಅ21: ತಮ್ಮ ತವರು ಅಭಿಮಾನಿಗಳ ಮುಂದೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡ ನಂತರ, ಭಾರತೀಯ ಪುರುಷರ ಕ್ರಿಕೆಟ್ ತಂಡವು ಈಗ ನ್ಯೂಜಿಲೆಂಡ್‌ ಸವಾಲು ಎದುರಿಸಲು ಸಜ್ಜಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. ಇತ್ತಂಡಗಳ ನಡುವಣ ಸರಣಿ ಮೊದಲ ಪಂದ್ಯ ಗುರುವಾರ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಆರು ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಐದರಲ್ಲಿ ಜಯ ಸಾಧಿಸಿದೆ. ಇದರಲ್ಲಿ 2026ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯವೂ ಸೇರಿದೆ. ಆದಾಗ್ಯೂ, ಈ ಸರಣಿ ಭಾರತಕ್ಕೆ ಸಂಪೂರ್ಣ ಭಿನ್ನವಾದ ಸವಾಲನ್ನು ಒಡ್ಡಲಿವೆ, ಏಕೆಂದರೆ ಈ ಪಂದ್ಯಗಳು ನ್ಯೂಜಿಲೆಂಡ್‌ನಲ್ಲಿ ನಡೆಯಲಿವೆ.

ಭಾರತಕ್ಕೆ ಕಠಿಣ ಸವಾಲು

ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ಯಾವಾಗಲೂ ಅತ್ಯಂತ ಕಠಿಣ ಹಾಗೂ ಸವಾಲಿನ ಪ್ರವಾಸಗಳಲ್ಲೊಂದಾಗಿದೆ. ಇಲ್ಲಿನ ಮೈದಾನಗಳು ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಿದ್ದು, ಭಾರತೀಯ ಬ್ಯಾಟರ್‌ಗಳಿಗೆ ಇಲ್ಲಿನ ಬೌನ್ಸ್ ಮತ್ತು ಸ್ವಿಂಗ್ ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಈ ಬಾರಿ ಕೊಂಚ ಅಧಿಕವಾಗಿಯೇ ಭಾರತಕ್ಕೆ ಸವಾಲು ಎದುರಾಗಬಹುದು. ಏಕೆಂದರೆ ಈ ಬಾರಿ ತಂಡದಲ್ಲಿರುವ ಆಟಗಾರರಿಗೆ ಕಿವೀಸ್‌ ನೆಲದಲ್ಲಿ ಆಡಿದ ಅನುಭವವಿಲ್ಲ. ಇದೇ ಮೊದಲ ಬಾರಿಗೆ ಆಡುತ್ತಿದ್ದಾರೆ.

ಪುರುಷರ ಶಾಟ್‌ಪುಟ್‌ F46 ವಿಭಾಗದಲ್ಲಿ ಹ್ಯಾಟ್ರಿಕ್‌ ಪದಕ ಗೆದ್ದ ಭಾರತ

ಭಾರತವು ಕೊನೆಯದಾಗಿ 2022ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಟಿ20 ಅಂತರರಾಷ್ಟ್ರೀಯ (T20I) ಸರಣಿಯನ್ನು ಆಡಿತ್ತು ಮತ್ತು ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಜಯ ಸಾಧಿಸಿತ್ತು. ಆದರೆ ಆ ಸರಣಿಯಲ್ಲಿ ಆಡಿದ ಆಟಗಾರರು ಈ ಬಾರಿ ತಂಡದಲಿಲ್ಲ.

ನ್ಯೂಜಿಲೆಂಡ್‌ ಬಲಿಷ್ಠ

ಈಗಿನ ಭಾರತ ತಂಡಕ್ಕೆ ಹೋಲಿಸಿದರೆ ನ್ಯೂಜಿಲೆಂಡ್‌ ಬಲಿಷ್ಠವಾಗಿ ಗೋಚರಿಸಿದೆ. ತಂಡದಲ್ಲಿ ಅನುಭವಿ ಆಟಗಾರರ ಪಡೆಯೇ ಇದೆ. ಮಾತ್ರವಲ್ಲದೆ ಅವರಿಗೆ ತವರಿನ ಪಂದ್ಯವೂ ಆಗಿರುವ ಕಾರಣ ಹೆಚ್ಚಿನ ಲಾಭ ಸಿಗಲಿದೆ. ಪಂದ್ಯಕ್ಕೂ ಮುನ್ನವೇ ಕಿವೀಸ್‌ ನಾಯಕ ಮಿಚೆಲ್‌ ಸ್ಯಾಂಟ್ನರ್‌ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ತಂತ್ರ ರೂಪಿಸಿದ್ದಾಗಿ ತಿಳಿಸಿದ್ದಾರೆ.

ಸಂಭಾವ್ಯ ತಂಡಗಳು

ನ್ಯೂಜಿಲೆಂಡ್‌: ಫಿನ್ ಅಲೆನ್, ಟಿಮ್ ಸೈಫರ್ಟ್, ಟಿಮ್ ಸೈಫರ್ಟ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಆಡಮ್ ಮಿಲ್ನೆ, ಜಾಕೋಬ್ ಡಫಿ.

ಭಾರತ: ಸಂಜು ಸ್ಯಾಮ್ಸನ್ (ವಿ.ಕೀ.), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವರುಣ್ ಚಕ್ರವರ್ತಿ.