ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಆಪರೇಷನ್ ಸಿಂದೂರ ಬಳಿಕ ಭಾರತ-ಪಾಕ್‌ ಮೊದಲ ಪಂದ್ಯ

WCL Schedule 2025: ಎರಡನೇ ಸೀಸನ್ ಜುಲೈ 18 ರಿಂದ ಪ್ರಾರಂಭವಾಗಲಿದ್ದು, ಒಟ್ಟು 6 ತಂಡಗಳು ಭಾಗವಹಿಸಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳು. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜುಲೈ 22ಕ್ಕೆ ಇಂಗ್ಲೆಂಡ್​ನ ನಾರ್ಥಾಂಪ್ಟನ್ ಮೈದಾನದಲ್ಲಿ ನಡೆಯಲಿದೆ.

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನಕ್ಕೆ ಭಾರತ ಆಪರೇಷನ್ ಸಿಂದೂರ(operation sindoor) ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡದ ಬಳಿಕ ಎರಡು ದೇಶಗಳ ನಡುವೆ ಯುದ್ಧದಂತಹ ಸಂದರ್ಭ ನಡೆದು ಹೋಗಿತ್ತು. ನೆರೆಹೊರೆಯ ದೇಶಗಳ ನಡುವೆ ಕ್ಷಿಪಣಿ ದಾಳಿಯಂತಹ ಘಟನೆಗಳು ನಡೆದಿತ್ತು. ಇದೀಗ ಎರಡು ದೇಶಗಳ(IND vs PAK) ನಡುವೆ ಕ್ರಿಕೆಟ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. 2ನೇ ಆವೃತ್ತಿಯ ಲೆಜೆಂಡ್ಸ್ ವಿಶ್ವ ಚಾಂಪಿಯನ್‌ಶಿಪ್ 2025ರ ಕೂಟದಲ್ಲಿ(WCL Schedule 2025) ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನವನ್ನೇ ಸೋಲಿಸಿ ಚಾಂಪಿಯನ್‌ ಆಗಿತ್ತು.

ಎರಡನೇ ಸೀಸನ್ ಜುಲೈ 18 ರಿಂದ ಪ್ರಾರಂಭವಾಗಲಿದ್ದು, ಒಟ್ಟು 6 ತಂಡಗಳು ಭಾಗವಹಿಸಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳು. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜುಲೈ 22ಕ್ಕೆ ಇಂಗ್ಲೆಂಡ್​ನ ನಾರ್ಥಾಂಪ್ಟನ್ ಮೈದಾನದಲ್ಲಿ ನಡೆಯಲಿದೆ.

ಭಾರತ ತಂಡವನ್ನು ಯುವರಾಜ್‌ ಸಿಂಗ್‌ ಮತ್ತು ಪಾಕಿಸ್ತಾನ ತಂಡವನ್ನು ಯೂನಿಸ್‌ ಖಾನ್‌ ಮುನ್ನಡೆಸುತ್ತಿದ್ದಾರೆ. ಇಂಡೋ-ಪಾಕ್‌ ಯುದ್ಧದ ಬಳಿಕ ಉಭಯ ತಂಡಗಳ ಮಧ್ಯೆ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಪಂದ್ಯವಾದ ಕಾರಣ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿದೆ.

ಭಾರತ ಪಂದ್ಯಗಳ ವೇಳಾಪಟ್ಟಿ

ಭಾರತ vs ಪಾಕಿಸ್ತಾನ; ಜುಲೈ 20, ಎಡ್ಜ್‌ಬಾಸ್ಟನ್

ಭಾರತ vs ದಕ್ಷಿಣ ಆಫ್ರಿಕಾ; ಜುಲೈ 22, ನಾರ್ಥಾಂಪ್ಟನ್

ಚಾಂಪಿಯನ್ಸ್ vs ಆಸ್ಟ್ರೇಲಿಯಾ; ಜುಲೈ 26, ಹೆಡಿಂಗ್ಲೆ, ಲೀಡ್ಸ್

ಇಂಡಿಯಾ vs ಇಂಗ್ಲೆಂಡ್; ಜುಲೈ 27, ಹೆಡಿಂಗ್ಲೆ, ಲೀಡ್ಸ್

ಇಂಡಿಯಾ vs ವೆಸ್ಟ್ ಇಂಡೀಸ್; ಜುಲೈ 29, ಲೀಸೆಸ್ಟರ್‌ಶೈರ್

ಭಾರತ ತಂಡ: ಯುವರಾಜ್ ಸಿಂಗ್ (ನಾಯಕ), ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಯೂಸುಫ್ ಪಠಾಣ್, ನಮನ್ ಓಜಾ, ಮುನಾಫ್ ಪಟೇಲ್, ರತೀಂದರ್ ಸಿಂಗ್ ಸೋಧಿ, ಆರ್ ಪಿ. ಸಿಂಗ್, ಅಶೋಕ್ ದಿಂಡಾ.

ಪಾಕಿಸ್ತಾನ ತಂಡ: ಯೂನಿಸ್ ಖಾನ್ (ನಾಯಕ), ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್, ಮಿಸ್ಬಾ-ಉಲ್-ಹಕ್, ಇಮ್ರಾನ್ ನಜೀರ್, ಮೊಹಮ್ಮದ್ ಹಫೀಜ್, ಕಮ್ರಾನ್ ಅಕ್ಮಲ್, ಸಲ್ಮಾನ್ ಬಟ್, ಅಬ್ದುಲ್ ರಜಾಕ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಯಾಸಿರ್ ಅರಾಫತ್, ಸೊಹೈಲ್ ತನ್ವಿರ್, ಉಮರೆದ್ ಅಜ್ಮಲ್, ಸಮೀದ್ ಅಜ್ಮಲ್.