ಕಟಕ್, ಡಿ.8: ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ(IND vs SA 1st T20I) ಮಂಗಳವಾರ ನಡೆಯಲಿದೆ. ಇತ್ತಂಡಗಳ ಈ ಪಂದ್ಯಕ್ಕೆ ಬಾರಾಬತಿ ಕ್ರೀಡಾಂಗಣ ಅಣಿಯಾಗಿದೆ. ಇಲ್ಲಿನ ಪಿಚ್ ರಿಪೋರ್ಟ್(Barabati Stadium Pitch Report), ಹವಾಮಾನ ವರದಿಯ(Cuttack Weather Report) ಮಾಹಿತಿ ಇಲ್ಲಿದೆ.
ಮಳೆ ಭೀತಿ ಇಲ್ಲ
ಮಳೆ ಭೀತಿ ಇರದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಆದರೆ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದರಿಂದ ಇದು ತುಂಬಾ ಚಳಿಯ ವಾತಾವರಣ ಇರಲಿದೆ. ಇದು ಬೌಲರ್‌ಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಹುಶಃ ಎರಡೂ ಇನ್ನಿಂಗ್ಸ್‌ಗಳಲ್ಲಿ ಇಬ್ಬನಿ ಬಿಂದು ಆಗಿರಲಿದೆ.
ಪಿಚ್ ರಿಪೋರ್ಟ್
ಇದು ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೇವಲ 4ನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಗಿದ್ದು, 2022 ರ ನಂತರದ ಮೊದಲ ಪಂದ್ಯವಾಗಿದೆ. ಈ ಸ್ಥಳದಲ್ಲಿ ನಡೆದ 3 ಪಂದ್ಯಗಳಲ್ಲಿ ಎರಡು ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆಯೇ ನಡೆದಿವೆ. ಬಾರಾಬತಿ ಕ್ರೀಡಾಂಗಣದ ಮೇಲ್ಮೈ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡಲು ಹೆಸರುವಾಸಿಯಾಗಿದೆ. ಇಬ್ಬನಿ ಕಾಟವೂ ಇರುವ ಕಾರಣ ಟಾಸ್ ಪ್ರಧಾನವಾಗಲಿದೆ.
ಇದನ್ನೂ ಓದಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ T20ಗೆ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೂ ಟಿ20ಯಲ್ಲಿ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 18 ಪಂದ್ಯ ಗೆದ್ದು ಹಿಡಿತ ಸಾಧಿಸಿದರೆ, ದಕ್ಷಿಣ ಆಫ್ರಿಕಾ 12 ಪಂದ್ಯ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಉಭಯ ತಂಡಗಳು ಕೊನೆಯ ಬಾರಿಗೆ ಆಡಿದು 2024ರ ನವೆಂಬರ್‌ನಲ್ಲಿ ಈ ಪಂದ್ಯದಲ್ಲಿ ಭಾರತ 135ರನ್‌ಗಳ ಗೆಲುವು ಸಾಧಿಸಿತ್ತು.
ಪಂದ್ಯ ಆರಂಭ; ಸಂಜೆ 7 ಕ್ಕೆ.
ನೇರ ಪ್ರಸಾರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್/ಜಿಯೋ-ಹಾಟ್‌ಸ್ಟಾರ್
ಉಭಯ ತಂಡಗಳು
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೋರ್ಜಿ, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್ (ವಿ.ಕೀ.), ಡೊನೊವನ್ ಫೆರೆರಾ (ವಿ.ಕೀ.), ಟ್ರಿಸ್ಟಾನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮನ್, ಕೇಶವ್ ಮಹಾರಾಜ್, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ.
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಸಂಜು ಸ್ಯಾಮ್ಸನ್ (ವಿ.ಕೀ.), ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.