ಕೋಲ್ಕತಾ: ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ(India vs South Africa) ತಂಡ ತನ್ನ ಖ್ಯಾತಿಕ್ಕೆ ತಕ್ಕ ಪ್ರದರ್ಶನ ತೋರುವ ಮೂಲಕ ಬರೋಬ್ಬರಿ 15 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್(IND vs SA) ಪಂದ್ಯವನ್ನು ಗೆದು ಬೀಗಿದೆ. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 30 ರನ್‌ಗಳಿಂದ ಮಣಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಸಿಮೋನ್ ಹಾರ್ಮರ್ ಸ್ಪಿನ್ ಮೋಡಿ ದಕ್ಷಿಣ ಆಫ್ರಿಕಾ ಪ್ರಾಬಲ್ಯ ಸಾಧಿಸಲು ನೆರವಾಯಿತು.
ಭಾರತಕ್ಕೆ 124ರನ್‌ಗಳ ಚೇಸಿಂಗ್ ಮೊತ್ತ ಸಿಕ್ಕಾಗಲೇ ಇದನ್ನು ಬೆನ್ನಟ್ಟುವುದು ಅಷ್ಟು ಸುಲಭವಲ್ಲ ಎಂದು ನಿರೀಕ್ಷಿಸಲಾಗಿತ್ತು. ಹೌದು, ಕೋಲ್ಕತ್ತಾದಲ್ಲಿ 100 ಪ್ಲಸ್ ಚೇಸಿಂಗ್ ಮಾಡುವುದು ಅಷ್ಟು ಸುಲಭದ ಮಾತಲ್ಲ. 1934 ರಿಂದ, ಕೇವಲ ಐದು ತಂಡಗಳು ಮಾತ್ರ ತನ್ನ 30 ಪ್ರಯತ್ನಗಳಲ್ಲಿ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಿವೆ. ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸಿಂಗ್ 117 ರನ್ ಆಗಿತ್ತು. 2004ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಭಾರತ ಇದನ್ನು ಸಾಧಿಸಿತ್ತು. ಆದರೆ ಈ ಬಾರಿ ದಕ್ಷಿಣ ಆಫ್ರಿಕಾ ದಾಖಲೆಯ 124ರನ್ ಬೆನ್ನಟ್ಟಿ ಇತಿಹಾಸ ನಿರ್ಮಿಸಿತು.
93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಲ್ಲಿಂದ ಭಾನುವಾರ ಮೂರನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ 153ರನ್‌ಗೆ ಆಲೌಟ್ ಆಯಿತು. ಬ್ಯಾಟರ್‌ಗಳಿಗೆ ಸವಾಲೊಡ್ಡಿದ ಈ ಪಿಚ್‌ನಲ್ಲಿಯೂ ಅಸಾಮಾನ್ಯ ಬ್ಯಾಟಿಂಗ್ ತೋರಿದ ನಾಯಕ ತೆಂಬಾ ಬವುಮಾ ಅರ್ಧಶತ ಬಾರಿಸಿ ಮಿಂಚಿದರು. 29 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅವರು ಭಾನುವಾರ ಅಜೇಯ 55 ಬಾರಿಸಿರು. ಇಡೀ ಪಂದ್ಯದಲ್ಲಿ ಅವರನ್ನು ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ಗೂ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ.
124 ರನ್‌ಗಳನ್ನು ಬೆನ್ನಟ್ಟಿದ ಭಾರತ, ಖಾತೆ ತೆರೆಯುವ ಮುನ್ನವೇ ಆಘಾತ ಎದುರಿಸಿತು. ಯಶಸ್ವಿ ಜೈಸ್ವಾಲ್ ಶೂನ್ಯ ಸುತ್ತಿ ಪೆವಿಲಿಯನ್‌ಗೆ ನಡೆದರು. ಈ ಆಘಾತದಿಂ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಮೂರು ವಿಕೆಟ್ ಬಡಬಡನೆ ಬಿದ್ದಿತು. ರಾಹುಲ್(1), ಜುರೇಲ್(13) ಮತ್ತು ರಿಷಭ್ ಪಂತ್(2) ಕೂಡ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ IND vs SA: 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್‌ಪ್ರೀತ್ ಬುಮ್ರಾ!
ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ವಾಷಿಂಗ್ಟನ್ ಸುಂದರ್, ಜಡೇಜಾ ಮತ್ತು ಅಕ್ಷರ್ ಪಟೇಲ್ ಸಣ್ಣ ಜತೆಯಾಟ ನಡೆಸುವ ಮೂಲಕ ಚೇತರಿಕೆ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ವಾಷಿಂಗ್ಟನ್ ಸುಂದರ್ 31 ರನ್ ಬಾರಿಸಿದರೆ, ಜಡೇಜಾ(18) ಮತ್ತು ಅಕ್ಷರ್ ಪಟೇಲ್ 26 ರನ್ ಗಳಿಸಿದರು. ಗೆಲುವಿಗೆ 31 ರನ್ ಬೇಕಿದ್ದಾಗ ಅಕ್ಷರ್ ಪಟೇಲ್ ವಿಕೆಟ್ ಬಿತ್ತು. ಇದರೊಂದಿಗೆ ಭಾರತದ ಸೋಲು ಕೂಡ ಖಚಿತವಾಯಿತು. ನಾಯಕ ಶುಭಮನ್ ಗಿಲ್ ಅವರು ಕುತ್ತಿಗೆ ನೋವಿನಿಂದಾಗಿ ಪಂದ್ಯದಿಂದ ಹೊರಗುಳಿದದ್ದು ಕೂಡ ಭಾರತಕ್ಕೆ ಹಿನ್ನಡೆಯಾಯಿತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ 9 ಬ್ಯಾಟರ್‌ಗಳೊಂದಿಗೆ ಆಡಲಿಳಿಯಿತು. ಅಂತಿಮವಾಗಿ 93 ರನ್‌ಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ಪರ ಸ್ಪಿನ್ ಜಾದು ನಡೆಸಿದ ಸೈಮನ್ ಹಾರ್ಮರ್ 4 ವಿಕೆಟ್ ಕಿತ್ತು ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಕಿತ್ತರು.
ಮೊದಲ ದಿನ ದ.ಆಫ್ರಿಕಾ 159 ರನ್‌ಗೆ ಆಲೌಟಾಗಿದ್ದರೆ, ಭಾರತ 1 ವಿಕೆಟ್‌ಗೆ 37 ರನ್ ಗಳಿಸಿತ್ತು. ಶನಿವಾರ ಬ್ಯಾಟಿಂಗ್ ಪುನಾರಂಭಿಸಿದ್ದ ಭಾರತ 189 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾ 153 ರನ್ ಬಾರಿಸಿ ಭಾರತಕ್ಕೆ 124 ರನ್‌ಗಳ ಗುರಿ ನೀಡಿತು. ಇದನ್ನು ಹಿಂಬಾಲಿಸಿದ ಭಾರತ 93 ರನ್‌ಗೆ ಸರ್ಪಪತನ ಕಂಡಿತು.