ಅಹಮದಾಬಾದ್, ಫೆ.21: ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್(T20 World Cup Super 8)ನ ಮೂರನೇ ಸೂಪರ್ 8 ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ಅಜೇಯ ನಾಲ್ಕು ಗೆಲುವಿನೊಂದಿಗೆ ಅಗ್ರಸ್ಥಾನ ಪಡೆದಿತ್ತು. ಹೀಗಾಗಿ ನಾಳಿನ ಮುಖಾಮುಖಿ ಭಾರೀ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.
ಮುಖಾಮುಖಿ
ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆಯ ಬಗ್ಗೆ ಹೇಳುವುದಾದರೆ, ಒಟ್ಟು 35 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 21 ಪಂದ್ಯಗಳಲ್ಲಿ ಜಯಗಳಿಸಿದೆ, ದಕ್ಷಿಣ ಆಫ್ರಿಕಾ 13 ಬಾರಿ ಜಯಗಳಿಸಿದೆ ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಟಿ20 ವಿಶ್ವಕಪ್ ವಿಷಯಕ್ಕೆ ಬಂದರೆ, ಎರಡೂ ತಂಡಗಳು ಇದುವರೆಗೆ ಏಳು ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯಗಳಲ್ಲಿ ಭಾರತ ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದು ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ರನ್‌ಗಳಿಂದ ಗೆದ್ದು ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಟಿ20ಗಳಲ್ಲಿ ಮುಖಾಮುಖಿ ದಾಖಲೆ
ಆಡಿರುವ ಪಂದ್ಯಗಳು- 35
ಭಾರತ ಗೆಲುವು - 21
ದಕ್ಷಿಣ ಆಫ್ರಿಕಾ ಗೆಲುವು - 13
ಫಲಿತಾಂಶವಿಲ್ಲ - 1
AUS vs OMN: ಒಮಾನ್ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ!
ಟಿ20 ವಿಶ್ವಕಪ್ ಮುಖಾಮುಖಿ ದಾಖಲೆ
ಆಡಿದ ಪಂದ್ಯಗಳು - 7
ಭಾರತ - 5 ಗೆಲುವು
ದಕ್ಷಿಣ ಆಫ್ರಿಕಾ- 2 ಗೆಲುವು
ಹಾಲಿ ಆವೃತ್ತಿಯಲ್ಲಿ ಉಭಯ ತಂಡಗಳ ಪದರ್ಶನ
ಗುಂಪು ಹಂತದಲ್ಲಿ ಭಾರತ ತಂಡ ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ಜತೆಗೆ 'ಎ' ಗುಂಪಿನಲ್ಲಿ ಆಡಿತ್ತು ಮತ್ತು ಎಲ್ಲಾ ನಾಲ್ಕು ತಂಡಗಳನ್ನು ಗೆದ್ದಿತ್ತು. ನಾಲ್ಕು ಸಂದರ್ಭಗಳಲ್ಲಿಯೂ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತವನ್ನು ಗಳಿಸಿತ್ತು. ನಮೀಬಿಯಾ ವಿರುದ್ಧ 93 ರನ್‌ಗಳಿಂದ ಗೆದ್ದರೆ, ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತ್ತು.
ದಕ್ಷಿಣ ಆಫ್ರಿಕಾ ತಂಡವು ಕೆನಡಾ ವಿರುದ್ಧ 57 ರನ್‌ಗಳ ಜಯದೊಂದಿಗೆ ಟೂರ್ನಿಯನ್ನು ಆರಂಭಿಸಿತು. ನಂತರ ಅಫ್ಘಾನಿಸ್ತಾನ ವಿರುದ್ಧದ ಡಬಲ್ ಸೂಪರ್ ಓವರ್ ಆಡಿ ಗೆಲುವು ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್, ಯುಎಇ ವಿರುದ್ಧ ಆರು ವಿಕೆಟ್ ಅಂತರದ ಮೇಲುಗೈ ಸಾಧಿಸಿತ್ತು.